ಗುಂಡ್ಲುಪೇಟೆ: ಮಾತ್ರೆ ನುಂಗಿ ಮದುಮಗ ಸಾವು, ಕಾರಣ?

By Kannadaprabha News  |  First Published Apr 3, 2024, 12:08 PM IST

ರಾತ್ರಿ ಹೊಟ್ಟೆ ನೋವು ತಾಳಲಾರದೆ ಹೆಚ್ಚು ಮಾತ್ರೆ ನುಂಗಿದ್ದರಿಂದ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆಯುವಕ ಸಾವನ್ನಪ್ಪಿದ್ದಾನೆ. 


ಗುಂಡ್ಲುಪೇಟೆ(ಏ.03):  ಮದುಮಗನೊಬ್ಬ ಹೊಟ್ಟೆ ನೋವು ತಾಳಲಾರದೆ ಹೆಚ್ಚು ಮಾತ್ರೆ ನುಂಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ತಾಲೂಕಿನ ಹಂಗಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಲೇಟ್ ಶಿವಪ್ಪನ ಪುತ್ರನಾದ ಮಧು (30) ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮದುವೆ ಖುಷಿಯಲ್ಲಿದ್ದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಯುವಕ ಮಧುಗೆ ಮದುವೆ ಮುಂದಿನ ತಿಂಗಳು ನಿಗದಿಯಾಗಿತ್ತು. ಮಧುಗೆ ಹೊಟ್ಟೆ ನೋವು ಬರುತ್ತಿತ್ತು ಎನ್ನಲಾಗಿದೆ. 

Tap to resize

Latest Videos

ಮಲೆ ಮಾದಪ್ಪನಿಗೆ 25 ದಿನದಲ್ಲಿ 3.13 ಕೋಟಿ ರೂ. ಕಾಣಿಕೆ ಕೊಟ್ಟ ಭಕ್ತರು; ಅಮೇರಿಕಾ, ನೇಪಾಳ, ಬಾಂಗ್ಲಾ ಕರೆನ್ಸಿ ಪತ್ತೆ

ರಾತ್ರಿ ಹೊಟ್ಟೆ ನೋವು ತಾಳಲಾರದೆ ಹೆಚ್ಚು ಮಾತ್ರೆ ನುಂಗಿದ್ದರಿಂದ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆಯುವಕ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

click me!