ತೀರ್ಥಹಳ್ಳಿ: ಈಜಲು ತೆರಳಿದ್ದ 3 ವಿದ್ಯಾರ್ಥಿಗಳು ತುಂಗಾನದಿ ಪಾಲು

By Kannadaprabha News  |  First Published Apr 3, 2024, 11:07 AM IST

ಬಾಲಕರು ಸಂಜೆಯವರೆಗೂ ಮನೆಗೆ ಬಾರದ ಕಾರಣ ಆತಂಕಗೊಂಡಿದ್ದ ಮನೆಯವರು ಹುಡುಕಾಟ ನಡೆಸಿದ್ದರು. ಕೊನೆಗೂ ಬಾಲಕರು ಪತ್ತೆಯಾಗದ ಕಾರಣ ಮೊಬೈಲ್ ಸಿಗ್ನಲ್ ಆಧರಿಸಿ ನದಿಯಲ್ಲಿ ಇರುವ ಸುಳಿವು ಸಿಕ್ಕಿದ ಆಧಾರದಲ್ಲಿ ನದಿಯಲ್ಲಿ ಮುಳುಗಿ ಮೃತರಾಗಿರುವುದು ಧೃಡಪಟ್ಟಿದೆ.


ತೀರ್ಥಹಳ್ಳಿ(ಏ.03):  ತುಂಗಾನದಿಯಲ್ಲಿ ಈಜಲು ಹೋಗಿದ್ದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪಟ್ಟಣದ ಮೂವರು ವಿಧ್ಯಾರ್ಥಿಗಳು ಸೋಮವಾರ ನದಿಯಲ್ಲಿ ಮುಳುಗಿ ಮೃತರಾಗಿದ್ದಾರೆ. ರಫಾನ್, ಆಯಾನ್ ಮತ್ತು ಸಮ್ಮರ್ ಮೃತರಾದ ದುರ್ದೈವಿಗಳು. ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 16 ವರ್ಷದವರಾಗಿದ್ದು ಮೂವರೂ ವಿದ್ಯಾರ್ಥಿಗಳೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಸೋಮವಾರ ಪರೀಕ್ಷೆ ಇಲ್ಲದ ಕಾರಣ ಮೂವರೂ ಒಟ್ಟಿಗೆ ಸೇರಿ ಮನೆಯವರ ಕಣ್ಣು ತಪ್ಪಿಸಿ ನದಿಗೆ ಈಜಲು ಹೋಗಿದ್ದರು.

ಈ ಬಾಲಕರು ಸಂಜೆಯವರೆಗೂ ಮನೆಗೆ ಬಾರದ ಕಾರಣ ಆತಂಕಗೊಂಡಿದ್ದ ಮನೆಯವರು ಹುಡುಕಾಟ ನಡೆಸಿದ್ದರು. ಕೊನೆಗೂ ಬಾಲಕರು ಪತ್ತೆಯಾಗದ ಕಾರಣ ಮೊಬೈಲ್ ಸಿಗ್ನಲ್ ಆಧರಿಸಿ ನದಿಯಲ್ಲಿ ಇರುವ ಸುಳಿವು ಸಿಕ್ಕಿದ ಆಧಾರದಲ್ಲಿ ನದಿಯಲ್ಲಿ ಮುಳುಗಿ ಮೃತರಾಗಿರುವುದು ಧೃಡಪಟ್ಟಿದೆ.

Latest Videos

undefined

ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್ ಸೊಸೆಗೆ ಮಕ್ಕಳಾಗಿಲ್ಲವೆಂದು ಕಿರುಕುಳ; ಕಾಟ ತಾಳಲಾರದೇ ನೇಣಿಗೆ ಶರಣಾದ್ಲು!

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಮೂವರ ಶವವನ್ನು ಸಾರ್ವಜನಿಕರ ನೆರವಿನೊಂದಿಗೆ ನದಿಯಿಂದ ಮೇಲಕ್ಕೆತ್ತುತ್ತಿದ್ದಂತೆ ಪೋಷಕರ ರೋದನ ಮುಗಿಲು ಮುಟ್ಟಿತ್ತು. ಶಾಸಕ ಆರಗ ಜ್ಞಾನೇಂದ್ರ ಮೃತರಾದ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

click me!