ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದ್ದು ಹೆಂಡತಿ, ಫಲಾನುಭವಿ ಸತ್ತ ಗಂಡ!

By Kannadaprabha News  |  First Published Aug 13, 2023, 7:55 PM IST

ಸರ್ಕಾರದ ಐದು ಗ್ಯಾರಂಟಿಗಳ ಗೃಹಲಕ್ಷ್ಮಿ ಯೋಜನೆಗೆ ಹೆಂಡತಿ ಅರ್ಜಿ ಸಲ್ಲಿಸಿದರೆ, ಮಂಜೂರಾತಿ ಪತ್ರದಲ್ಲಿ ಗಂಡನ ಹೆಸರು ನಮೂದಿಸಿ ಫಲಾನುಭವಿಯನ್ನಾಗಿ ಮಾಡಲಾಗಿದೆ! ಇನ್ನು ಮುಂದೆ ಗೃಹಲಕ್ಷ್ಮಿಗೆ ಅರ್ಜಿ ಹಾಕಿದರೆ ಪುರುಷರಿಗೂ ಹಣ ಬರುತ್ತಾ ಎಂಬ ವಿಚಿತ್ರ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.


ಎಚ್‌.ಕೆ.ಬಿ. ಸ್ವಾಮಿ

ಸೊರಬ (ಆ.13): ಸರ್ಕಾರದ ಐದು ಗ್ಯಾರಂಟಿಗಳ ಗೃಹಲಕ್ಷ್ಮಿ ಯೋಜನೆಗೆ ಹೆಂಡತಿ ಅರ್ಜಿ ಸಲ್ಲಿಸಿದರೆ, ಮಂಜೂರಾತಿ ಪತ್ರದಲ್ಲಿ ಗಂಡನ ಹೆಸರು ನಮೂದಿಸಿ ಫಲಾನುಭವಿಯನ್ನಾಗಿ ಮಾಡಲಾಗಿದೆ! ಇನ್ನು ಮುಂದೆ ಗೃಹಲಕ್ಷ್ಮಿಗೆ ಅರ್ಜಿ ಹಾಕಿದರೆ ಪುರುಷರಿಗೂ ಹಣ ಬರುತ್ತಾ ಎಂಬ ವಿಚಿತ್ರ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ. ಸೊರಬ ಪಟ್ಟಣದ ಮುಖ್ಯರಸ್ತೆ ನಿವಾಸಿ ವಯೋವೃದ್ಧೆ ಶಕುಂತಲಾ ಅವ​ರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಗಂಡ ಗುತ್ತಿ ಬಸವರಾಜ ಅವರ ಹೆಸರಿನಲ್ಲಿ ಗೃಹಲಕ್ಷ್ಮೀ ಯೋಜನೆ ನಗದು ಸೌಲಭ್ಯಕ್ಕಾಗಿ ಮಂಜೂರು ಪತ್ರ ಬಂದಿದೆ. 

Latest Videos

undefined

ಇನ್ನೂ ವಿಚಿತ್ರವೆಂದರೆ, ಫಲಾನುಭವಿ ಗುತ್ತಿ ಬಸವರಾಜ ಜೀವಂತವಾಗಿಯೇ ಇಲ್ಲ! ಪತಿ ಗುತ್ತಿ ಬಸ​ವ​ರಾಜ 3 ವರ್ಷಗಳ ಹಿಂದೆಯೇ ಇಹಲೋಕ ತ್ಯಜಿಸಿದ್ದಾರೆ. ಹೀಗಿದ್ದೂ ಯೋಜನೆಯ ನಗದು ಸೌಲಭ್ಯ ಆಧಾರ್‌ ಲಿಂಕ್‌ ಆದ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುವುದು ಎಂದು ಮಂಜೂರಾತಿ ಪತ್ರದಲ್ಲಿ ತಿಳಿಸಲಾಗಿದೆ. ಆದರೆ, ಎಸ್‌ಬಿಐ ಸೊರಬ ಶಾಖೆಯಲ್ಲಿದ್ದ ಅವರ ಹೆಸರಿನ ಬ್ಯಾಂಕ್‌ ಖಾತೆ ಕೂಡ ಕ್ಲೋಸ್‌ ಆಗಿದೆ. ಇಷ್ಟೆಲ್ಲಾ ಪ್ರಮಾದಗಳು ನಡೆದಿದ್ದರೂ ಯೋಜ​ನೆ​ಗೆ ​‘ಓಕೆ’ ಆಗಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಟೆಂಡರ್‌ ಕರೆದಿಲ್ಲ, ಕಮಿಷನ್‌ ಪಡೆವ ಮಾತೆಲ್ಲಿ?: ಸಚಿವ ಸಂತೋಷ್‌ ಲಾಡ್‌

ಶಕುಂತಲಾ ಪುರಸಭೆ ಅನುವು ಮಾಡಿಕೊಟ್ಟಿದ್ದ ಗೃಹಲಕ್ಷ್ಮೀ ಆನ್‌ಲೈನ್‌ ಅರ್ಜಿ ಸಲ್ಲಿಕೆಯಲ್ಲಿ ಮನೆಯ ಯಜಮಾನಿ ಹೆಸರಿನ 240600176788 ಪಡಿತರ ಸಂಖ್ಯೆಯನ್ನು ಜುಲೈ 2ರಂದು ಹಾಜರುಪಡಿಸಿದರು. ಕೆಲವೇ ನಿಮಿಷಗಳಲ್ಲಿ ಯಾವುದೇ ಅಡೆತಡೆ ಇಲ್ಲದೇ ತನ್ನ ಪತಿ ಗುತ್ತಿ ಬಸವರಾಜ ಅವರ ಹೆಸರಿನಲ್ಲಿ ಸರ್ಕಾರದಿಂದ ಜಿ.ಎಲ್‌. 240600176788 ಮಂಜೂರಾತಿ ಆದೇಶ ಸಂಖ್ಯೆಯೊಂದಿಗೆ ಪತ್ರ ಹೊರಬಂದಿದೆ. ದಿನಗಟ್ಟಲೆ ಸಾಲುಗಟ್ಟಿನಿಂತು ಕೊನೆಗೂ ಫಲಾನುಭವಿಯಾದೆ ಎಂದು ನಿಟ್ಟುಸಿರು ಬಿಟ್ಟಶಕುಂತಲಾ ಅವರಿಗೆ ತನ್ನ ಪತಿಯ ಹೆಸರು ನಮೂದಾಗಿರುವುದು ಗೊತ್ತೇ ಆಗಿರಲಿಲ್ಲ. ಒಂದೆರಡು ದಿನಗಳ ನಂತರ ಮಂಜೂರಾತಿ ಪತ್ರ ವೀಕ್ಷಿಸಿದವರು ಪತ್ರದಲ್ಲಿ ಪ್ರಮಾದ ಆಗಿರುವ ಬಗ್ಗೆ ತಿಳಿಸಿ ಹೇಳಿದ್ದಾರೆ. ಆಗ ಶಂಕು​ತಲಾ ಅವರು ಕ್ಷಣ ಆವ​ಕ್ಕಾ​ಗಿ​ದ್ದಾರೆ.

ಮಂಜೂರಾತಿ ಪತ್ರ ಬದಲಾವಣೆಗೆ ಅಲೆದಾಟ: 70 ವರ್ಷದ ವಯೋವೃದ್ಧೆ ಶಕುಂತಲಾ ಮತ್ತು ಪುತ್ರಿ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಗುತ್ತಿ ಬಸವರಾಜ ನಿಧನದ ನಂತರ ಬದುಕಿನ ನಿರ್ವಹಣೆ ಇನ್ನಷ್ಟುಕಠಿಣವಾಗಿದೆ. ಸರ್ಕಾರದ ಕೆಲವು ಯೋಜನೆಗಳೇ ಜೀವನಕ್ಕೆ ಆಧಾರವಾಗಿವೆ. ಗೃಹಲಕ್ಷ್ಮೀ ಯೋಜನೆ ತನಗೆ ನೆರವಾಗದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಶಂಕುತಲಾ ಮತ್ತು ಅವರ ಪುತ್ರಿ, ಈಗ ಮಂಜೂರಾಗಿರುವ ಪತ್ರದ ಅಸ​ಮ​ರ್ಪಕ ಮಾಹಿ​ತಿ ತೆಗೆ​ದು​ಹಾ​ಕಿ, ಪುನಃ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ನಲ್ಲಿ ಯಾವುದೇ ರೂಪಾಂತರ ವ್ಯವಸ್ಥೆ ಕಲ್ಪಿಸಿಲ್ಲ.

ಇದಕ್ಕಾಗಿ ಪ್ರತಿನಿತ್ಯ ಸೈಬರ್‌ ಸೆಂಟರ್‌ ಮತ್ತು ಪುರಸಭೆಗೆ ಅಲೆದಾಡುವುದೇ ಕಾಯಕ ಎಂಬಂತಾ​ಗಿದೆ. ಆದರೆ ನಿರ್ವಾಹಕರಿಂದ ಸರಿಯಾಗುತ್ತೆ. ನಾಳೆ, ನಾಡಿದ್ದು ಬನ್ನಿ ಎನ್ನುವ ಉತ್ತರ ಸಿಗುತ್ತಿದೆ. ಆದರೆ ನಮ್ಮ ಸಮ​ಸ್ಯೆಗೆ ಯಾರೂ ನೆರವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಪತ್ರಿಕೆ ಎದುರು ಅಳಲು ತೋಡಿಕೊಂಡಿದ್ದಾರೆ. ವೃದ್ಧೆ ಶಕುಂತಲಾ ಅವರಿಗೆ ಮಂಜೂರಾಗಬೇಕಾಗಿದ್ದ ಪತ್ರದಲ್ಲಿ ಪತಿಯ ಹೆಸರು ನಮೂದಾಗಿರುವುದಕ್ಕೆ ಏನು ಕಾರಣ? ಇದರಲ್ಲಿ ಯಾರ ತಪ್ಪು ಅಡಗಿದೆ ಎನ್ನುವುದು ತಿಳಿಯಬೇಕಾಗಿದೆ. ಜುಲೈ ಕೊನೆಯ ವಾರ ಚಾಲನೆ ದೊರೆಯಲಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಶಂಕುತಲಾ ಅವರಿಗೂ ಹಣ ಸಂದಾಯವಾಗುತ್ತಾ ಎನ್ನುವುದು ಕಾದು ನೋಡಬೇಕಿದೆ.

ಬೋರ್‌ವೆಲ್‌ ಆನ್‌ ಮಾಡುವಾಗ ಕರೆಂಟ್‌ ಶಾಕ್‌: ಅಜ್ಜ, ಅಜ್ಜಿ, ಮೊಮ್ಮಗಳು ಸಾವು

ಗೃಹಲಕ್ಷ್ಮೀ ಯೋಜನೆಯ ಮಂಜೂರಾತಿಗೆ ಅರ್ಜಿ ಹಾಕಲು ಕಳೆದ ಒಂದೂವರೆ ತಿಂಗಳಿನಿಂದ ಬ್ಯಾಂಕ್‌ ಪಾಸ್‌ಬುಕ್‌ಗೆ ಆಧಾರ್‌ ಲಿಂಕ್‌ಗಾಗಿ, ಪಡಿತರ ಚೀಟಿಯಲ್ಲಿನ ಹೆಸರು ಬದಲಾವಣೆಗೆ ಮೊದಲಾದ ಕಡತಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಿದ್ದೇನೆ. ಎಲ್ಲವನ್ನೂ ಒದಗಿಸಿದ್ದರೂ ಮೃತರಾದ ತಮ್ಮ ಪತಿ ಹೆಸರಿನಲ್ಲಿ ಮಂಜೂರಾಗಿ ಪತ್ರ ಬಂದಿದೆ. ಇದರಿಂದ ತಮಗೆ ನೋವಾಗಿದ್ದು, ಇದಕ್ಕೆ ಕಾರಣವೇನು ಎಂದು ತಿಳಿಯುತ್ತಿಲ್ಲ. ಬಡತನದಲ್ಲಿ ಬದುಕುತ್ತಿರುವ ಸರ್ಕಾರಿ ಯೋಜನೆಯಿಂದಲೂ ವಂಚನೆಯಾಗಿದೆ
- ಶಕುಂತಲಾ, ಫಲಾ​ನು​ಭವಿ

click me!