ಕೊಪ್ಪಳ (ಸೆ.2) : ಜಿಲ್ಲೆಯಲ್ಲಿ ಸೆ. 2ರಂದು ಹೆಸರು ಕಾಳು ಖರೀದಿ ಹಾಗೂ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ಜಿಲ್ಲಾ ಟಾಸ್‌್ಕಫೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರಗಳು ಆರಂಭವಾಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದಾರೆ.
Koppal; ಸೌಟು ಹಿಡಿಯಲು ಸೈ, ಸ್ಟೇರಿಂಗ್ ಹಿಡಿಯಲು ಸೈ
undefined
ಸರ್ಕಾರದ ಆದೇಶದನ್ವಯ 2022- 23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಲ್‌ಗೆ .7,755ರಂತೆ ರಾಜ್ಯಕ್ಕೆ ಗರಿಷ್ಠ 36,390 ಮೆಟ್ರಿಕ್ ಟನ್ ಎಫ್‌ಎಕ್ಯು ಗುಣಮಟ್ಟದ ಹೆಸರುಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಗುರುವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್‌್ಕಫೋರ್ಸ್ ಸಮಿತಿಯ ಸಭೆಯ ಜರುಗಿಸಿ, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೆಸರುಕಾಳು ಖರೀದಿ ಹಾಗೂ ನೋಂದಣಿ ಕೇಂದ್ರಗಳನ್ನು ಸೆ. 2ರಂದು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಕೇಂದ್ರಗಳ ವಿವರ: ಕೊಪ್ಪಳದ ಟಿಎಪಿಎಂಸಿ, ಹಿರೇಸಿಂಧೋಗಿ ಪಿಎಸಿಎಸ್, ಕುಕನೂರು ಪಿಎಸಿಎಸ್/ ಮಸಬಹಂಚಿನಾಳ ಪಿಎಸಿಎಸ್, ಯಲಬುರ್ಗಾ ಟಿಎಪಿಎಂಸಿ, ಹನುಮಸಾಗರ ಪಿಎಸಿಎಸ್ ಹಾಗೂ ತಾವರಗೇರಾದ ಪಿಎಸಿಎಸ್ ಮೆಣೇದಾಳ, ಈ ಆರು ಸ್ಥಳಗಳಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಲಿವೆ.
ನೋಡಲ್ ಅಧಿಕಾರಿಗಳ ನೇಮಕ: ಕೊಪ್ಪಳ ತಾಲೂಕಿನ ಕೊಪ್ಪಳ ಮತ್ತು ಹಿರೇಸಿಂಧೋಗಿ ಖರೀದಿ ಕೇಂದ್ರಗಳಿಗೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಕಾರ್ಯದರ್ಶಿ ಜಿ.ಎಂ. ಮರುಳುಸಿದ್ದಯ್ಯ ಮೊ. 8495056203, ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಖರೀದಿ ಕೇಂದ್ರಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಯಲಬುರ್ಗಾ ಕೇಂದ್ರ ಕಚೇರಿ ಕುಕನೂರು ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಮೊ. 9902224089, ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ತಾವರಗೇರಾ ಖರೀದಿ ಕೇಂದ್ರಗಳಿಗೆ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಕಾರ್ಯದರ್ಶಿ ಟಿ. ನೀಲಪ್ಪಶೇಟ್ಟಿಮೊ. 9916827751 ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಪ್ರತಿ ರೈತರಿಂದ ಎಕರೆಗೆ ಗರಿಷ್ಠ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಹೆಸರುಕಾಳು ಉತ್ಪನ್ನ ಖರೀದಿಸಲಾಗುತ್ತದೆ. ಎಫ್‌ಎಕ್ಯು ಗುಣಮಟ್ಟದ ಹೆಸರು ಕಾಳನ್ನು ಮಾತ್ರ ಖರೀದಿಸಲಾಗುವುದು ಎಂದು ಕೊಪ್ಪಳ ಕೃಷಿ ಮಾರುಕಟ್ಟೆಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್‌್ಕಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್. ಶ್ಯಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗೆ ಬಂದ ಹೆಸರು ಬೆಳೆ: ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ
ಮಾರುಕಟ್ಟೆಯಲ್ಲಿ ಹೆಸರಿಗೆ ಬೆಲೆ ಇಲ್ಲದಂತಾಗಿತ್ತು: ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರು ಕಾಳು ಖರೀದಿಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ರೈತರು, ರೈತ ಸಂಘದವರು ಒತ್ತಾಯ ಮಾಡಿದ್ದರು. ಹೆಸರು ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿತ್ತು. ಆದರೆ ಹೆಸರು ಬೆಳೆಗೆ ಸದ್ಯ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ಆರಂಭವಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.