ಬೆಂಗಳೂರು: ಆ.15ರ ಒಳಗೆ ಖಾಲಿ ನಿವೇಶನ ಸ್ವಚ್ಛ ಮಾಡದಿದ್ರೆ ಮಾಲೀಕರಿಗೆ ಸೈಟ್‌ ಗಾತ್ರದಂತೆ ದುಪ್ಪಟ್ಟು ದಂಡ

Gowthami K   | Kannada Prabha
Published : Aug 11, 2026, 11:19 AM IST
Vacant Plot

ಸಾರಾಂಶ

ಬೆಂಗಳೂರಿನಲ್ಲಿ ಖಾಲಿ ನಿವೇಶನಗಳಲ್ಲಿನ ಕಸವನ್ನು ಆ.15ರೊಳಗೆ ಸ್ವತಃ ತೆರವುಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಲೀಕರಿಗೆ ಗಡುವು ನೀಡಿದೆ. ತಪ್ಪಿದಲ್ಲಿ, ಪಾಲಿಕೆಯೇ ಸ್ವಚ್ಛಗೊಳಿಸಿ ನಿವೇಶನದ ಅಳತೆಗನುಗುಣವಾಗಿ ₹25,900 ರಿಂದ ₹1.74 ಲಕ್ಷದವರೆಗೆ ದಂಡ ವಿಧಿಸಲಿದ್ದು, ಈ ಮೊತ್ತವನ್ನು ಆಸ್ತಿ ತೆರಿಗೆಗೆ ಸೇರಿಸಿ ವಸೂಲಿ ಮಾಡಲಿದೆ.

ಬೆಂಗಳೂರು: ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸವನ್ನು ಆ.15ರ ಒಳಗೆ ಮಾಲೀಕರು ಸ್ವತಃ ತೆರವುಗೊಳಿಸದಿದ್ದರೆ ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ, ಸಾಗಣೆ ಮಾಡಲು ಕನಿಷ್ಟ 25,900 ರು.ಗಳಿಂದ ಗರಿಷ್ಠ 1.74 ಲಕ್ಷ ರು.ವರೆಗೆ ದರ ನಿಗದಿಪಡಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆದೇಶಿಸಿದೆ.

ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿಸುವ ಉದ್ದೇಶದಿಂದ ಆರಂಭಿಸಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಅಂಗವಾಗಿ ನಗರದಾದ್ಯಂತ ಐದು ಪಾಲಿಕೆಗಳಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಬಿದ್ದಿದೆ. ಕೆಲವು ಕಡೆ ಖಾಲಿ ಜಾಗಗಳು ಡಂಪಿಂಗ್ ಯಾರ್ಡ್ ಆಗಿವೆ. ಹೀಗಾಗಿ, ಸ್ವತಃ ಸ್ವಚ್ಛಗೊಳಿಸಿಕೊಳ್ಳುವಂತೆ ಆ.15ರವರೆಗೆ ಗಡುವು ನೀಡಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಮಾಲೀಕರು ಸ್ವಚ್ಛಗೊಳಿಸಿ ನಗರ ಪಾಲಿಕೆಯಿಂದ ಗುರುತಿಸಿರುವ ನಿಗದಿತ ಐದು ಸ್ಥಳಗಳಲ್ಲಿ ಕಸ ವಿಲೇವಾರಿ‌ ಮಾಡಬೇಕು. ಅಗತ್ಯವಿದ್ದರೆ ಸ್ವಚ್ಛತೆಗಾಗಿ ಆಯಾ ನಗರ ಪಾಲಿಕೆಗಳು ಸೂಚಿಸಿರುವ ಸೇವಾದಾರರ ಸೇವೆಯನ್ನು ಸಹ ಪಡೆಯಬಹುದು. ಇಲ್ಲದಿದ್ದರೆ ಪಾಲಿಕೆಯಿಂದಲೇ ಆ.16ರಿಂದ ತೆರವು ಕಾರ್ಯ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಖಾಲಿ‌ ನಿವೇಶನ ಸ್ವಚ್ಚತೆ ಮತ್ತು ಸಾಗಣೆ ದರಪಟ್ಟಿ

ನಿವೇಶನ ಅಳತೆ ಸ್ವಚ್ಛತೆ ವೆಚ್ಚ(ತಡೆಗೋಡೆ ಇಲ್ಲದ/ ತಡೆಗೋಡೆ ಇರುವ) ಸಾಗಣೆ ವೆಚ್ಚ

20×30 6,700 ರು./ 7,700 ರು. 19,200 ರು.

30×40 13,400 ರು./ 14,400 ರು. 38,400 ರು.

30×50 16,750 ರು./ 14,750 ರು. 48,000 ರು.

40×60 26,800 ರು./ 27,800 ರು. 76,800 ರು.

50×80 46,700 ರು./ 47,700 ರು. 1,28,000 ರು.

(ಇದಕ್ಕಿಂತಲೂ ಹೆಚ್ಚು, ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ, ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚವನ್ನು ವಿಧಿಸಲಾಗುತ್ತದೆ)

ನಿವೇಶನದಲ್ಲಿನ ಕಸ ಸ್ವಚ್ಛಗೊಳಿಸಿ ಸಾಗಿಸಿದ ನಂತರ ನಿಗದಿತ ವೆಚ್ಚವನ್ನು ನಿವೇಶನ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ.

- ಮಹೇಶ್ವರ ರಾವ್, ಮುಖ್ಯ ಆಯುಕ್ತ, ಜಿಬಿಎ

PREV
Read more Articles on
click me!

Recommended Stories

ಹುಬ್ಬಳ್ಳಿ ಆಂಕೋಲಾ ನಡುವೆ ₹18,424 ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆ; ಬರೋಬ್ಬರಿ 57 ಸುರಂಗ ನಿರ್ಮಾಣ
Kalaburagi: ಗೃಹ ಸಚಿವರೊಂದಿಗೆ ಸಭೆ ನಡೆಯುತ್ತಿರುವಾಗಲೇ ಡಿಸಿ, ಎಡಿಸಿ, ಎಸಿ ಕಾರು ಜಪ್ತಿ; ಮುಜುಗರಕ್ಕೆ ಒಳಗಾದ ಅಧಿಕಾರಿಗಳು, ಆಗಿದ್ದೇನು?