
ಬೆಂಗಳೂರು (ಆ.11): ರಾಜ್ಯರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟುಮಾಡುತ್ತಿರುವ ಟ್ರಾಫಿಕ್ ಜಂಟಿ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರು ನಗರ ಸಂಚಾರ ಪೊಲೀಸರು ಭರ್ಜರಿ ತಾಲೀಮು ನಡೆಸಿದ್ದಾರೆ. ನಗರದ ಪ್ರಮುಖ 5 ಫ್ಲೈ ಓವರ್‌ಗಳಲ್ಲಿ ಸಂಚಾರ ದಟ್ಟಣೆ ಹಾಗೂ ಸರಣಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಶೀಘ್ರದಲ್ಲೇ ‘ಪಂಚಸೂತ್ರ’ ನಿಯಮಗಳನ್ನು ಜಾರಿಗೆ ತರಲು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಫ್ಲೈ ಓವರ್‌ಗಳ ಮೇಲೆ ದ್ವಿಚಕ್ರ ವಾಹನಗಳ ಅತಿವೇಗದ ಚಾಲನೆಯಿಂದಾಗುತ್ತಿರುವ ಅಪಘಾತಗಳು, ಭಾರೀ ಗೂಡ್ಸ್ ವಾಹನಗಳು ಹಾಗೂ ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್‌ಗಳಂತಹ ನಿಧಾನಗತಿಯ ವಾಹನಗಳು ಕೆಟ್ಟು ನಿಲ್ಲುವುದರಿಂದ ಸೃಷ್ಟಿಯಾಗುತ್ತಿರುವ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್‌ಗೆ ಬ್ರೇಕ್ ಹಾಕಲು ಪೊಲೀಸರು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲದೆ, ಹಗಲಿನಲ್ಲಿ ಖಾಸಗಿ ಬಸ್‌ಗಳು ಹಾಗೂ ಅತಿಯಾದ ಉದ್ದವಿರುವ ಟ್ರಕ್‌ಗಳ ಓಡಾಟಕ್ಕೂ ನಿಯಂತ್ರಣ ಹೇರಲು ನಿರ್ಧರಿಸಲಾಗಿದೆ.
ಸಂಚಾರ ಪೊಲೀಸರು ನಗರದ 5 ಪ್ರಮುಖ ಫ್ಲೈ ಓವರ್‌ಗಳಿಗೆ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.
ಸೂತ್ರ 1: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್
ಸೂತ್ರ 2: ಏರ್‌ಪೋರ್ಟ್ ಫ್ಲೈ ಓವರ್ (ಹೆಬ್ಬಾಳ-ಯಲಹಂಕ ಕಾರಿಡಾರ್)
ಸೂತ್ರ 3: ಡಬಲ್ ಡೆಕ್ಕರ್ ಫ್ಲೈ ಓವರ್ (ಸಿಲ್ಕ್ ಬೋರ್ಡ್ - ರಾಗಿಗುಡ್ಡ)
ಹೆವಿ ಗೂಡ್ಸ್ ವಾಹನಗಳ (ಭಾರೀ ಸರಕು ಸಾಗಣೆ ವಾಹನಗಳು) ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ಲಾನ್.
ಸೂತ್ರ 4: ಕೆ.ಆರ್. ಮಾರ್ಕೆಟ್ ಫ್ಲೈ ಓವರ್
ಫ್ಲೈ ಓವರ್ ಮೇಲೆ ಸಾಗುವ ಹೆವಿ ಗೂಡ್ಸ್ ವಾಹನಗಳು ಹಾಗೂ ಗೂಡ್ಸ್ ಆಟೋಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನ.
ಸೂತ್ರ 5: ಪೀಣ್ಯ ಫ್ಲೈ ಓವರ್
ಪೀಣ್ಯ ಫ್ಲೈ ಓವರ್‌ನಲ್ಲಿ ಸರಣಿ ಅಪಘಾತ ತಡೆಯಲು ಆಟೋ ರಿಕ್ಷಾ ಹಾಗೂ ಗೂಡ್ಸ್ ಆಟೋಗಳ ಪ್ರವೇಶಕ್ಕೆ ಬ್ರೇಕ್ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.
ಫ್ಲೈ ಓವರ್‌ಗಳ ಮೇಲೆ ನಿಧಾನವಾಗಿ ಸಾಗುವ ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್ ಹಾಗೂ ಹೆವಿ ಸರಕು ಸಾಗಣೆ ವಾಹನಗಳು ಹಗಲಿನಲ್ಲಿ ಸಂಚರಿಸುವುದರಿಂದ ಇಡೀ ನಗರದಲ್ಲಿ ಟ್ರಾಫಿಕ್ ಬ್ಲಾಕ್ ಆಗುತ್ತಿದೆ. ಹೀಗಾಗಿ ಇಂತಹ ವಾಹನಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಸಂಚಾರಿ ಪೊಲೀಸರು ತೀರ್ಮಾನಿಸಿದ್ದಾರೆ. ಈ ಹೊಸ ಮಾರ್ಗಸೂಚಿಗಳು ಜಾರಿಯಾದರೆ ಬೆಂಗಳೂರಿನ ಟ್ರಾಫಿಕ್‌ಗೆ ದೊಡ್ಡಮಟ್ಟದ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.