Chikkamagaluru: 75 ಕಿಲೋ ಮೀಟರ್ ರಸ್ತೆ ಅಭಿವೃದ್ದಿ ಪಡಿಸಿಲು ಅನುದಾನ ಬಿಡುಗಡೆ: ಡಬಲ್ ರಸ್ತೆ ಬಗ್ಗೆ ಅಪಸ್ವರ!

By Govindaraj S  |  First Published Nov 15, 2024, 7:29 PM IST

ದಕ್ಷಿಣ ಕನ್ನಡ ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟ್ ನ  ರಸ್ತೆ ಅಭಿವೃದ್ದಿ ಪಡೆಸಲು ಸರ್ಕಾರ ಮುಂದಾಗಿದೆ. ಚಾರ್ಮಾಡಿ ಘಾಟ್ ನ  ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.15): ದಕ್ಷಿಣ ಕನ್ನಡ ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟ್ ನ  ರಸ್ತೆ ಅಭಿವೃದ್ದಿ ಪಡೆಸಲು ಸರ್ಕಾರ ಮುಂದಾಗಿದೆ. ಚಾರ್ಮಾಡಿ ಘಾಟ್ ನ  ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. 75 ಕಿಲೋ ಮೀಟರ್ ರಸ್ತೆ ಅಭಿವೃದ್ದಿ ಪಡೆಸಿಲು ಅನುದಾನ ಬಿಡುಗಡೆಯಾಗಿದೆ ಎನ್ನುವ ಸಂಸದರ  ಹೇಳಿಕೆ ಬೆನ್ನಲ್ಲೆ ಪರ ವಿರೋಧದ ಚರ್ಚೆ ಅರಂಭವಾಗಿದೆ. 

Latest Videos

undefined

ಪರಿಸರ ಸೂಕ್ಷ್ಮ ವಲಯದಲ್ಲಿ ಡಬಲ್ ರಸ್ತೆ ಬಗ್ಗೆ ಅಪಸ್ವರ: ಚಾರ್ಮಾಡಿ ಘಾಟ್ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಒಕ್ಕೂಟ ಸರ್ಕಾರ ೩೪೩.೭೪ ಕೋಟಿ ರೂ. ಅನುದಾನ ಬಿಡುಗಡೆ  ಮಾಡಿರುವ ಹೇಳಿಕೆ ಬೆನ್ನಲ್ಲೇ ಗಂಭೀರ ಚರ್ಚೆಗಳು ಆರಂಭವಾಗಿವೆ.ಹಣ ಬಿಡುಗಡೆ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರಿನಿಂದ ಮೂಡಿಗೆರೆ - ತುಮಕೂರಿಗೆ ಸಂಪರ್ಕಿಸುವ ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ ೮೬.೨೦ಕಿ ಲೋ.  ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ ಎಂದಿದ್ದಾರೆ.ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲದ ಜೊತೆಗೆ ಸುಗಮ ಸರಕು ಸಾಗಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ ಎನ್ನುವುದು ಸಂಸದರ ಅಭಿಪ್ರಾಯ.

ರಾಜ್ಯವನ್ನೇ ಬೆಚ್ಚಿಬೀಳಿಸುವ ಕಹಾನಿ: ಗೋರಿಯಿಂದ ಹೊರ ಬಂದ 6 ತಿಂಗಳ ಹಿಂದೆ ಹೂತಿದ್ದ ಶವ!

ರಸ್ತೆ ಕಾಮಗಾರಿ ನೆಪದಲ್ಲಿ ಪರಿಸರಕ್ಕೆ ಮಾರಕ: ಪರಿಸರ ಸೂಕ್ಷ್ಮ ಪ್ರದೇಶದ ಜೊತೆಗೆ ಶೋಲಾ ಅರಣ್ಯವನ್ನು ಹೊಂದಿರುವ ಪ್ರದೇಶ. ವರ್ಷ ಪೂರ್ತಿ ಹಚ್ಚ ಹಸಿರನ ವಾತಾವರಣದಿಂದ ಇರುವ ಪ್ರದೇಶದಲ್ಲಿ ರಸ್ತೆ ಅಭಿವೃದ್ದಿ ಪಡೆಸುವ ಮೂಲಕ ಸರ್ಕಾರ ಪರಿಸರಕ್ಕೆ ದಕ್ಕೆ ತರುವ ಯತ್ನ ನಡೆಸುತ್ತಿದೆ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ. ಮತ್ತೊಂದಡೆ ಚಾರ್ಮಾಡಿ ರಸ್ತೆಗೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿರುವುದು ಕೆಲ ಜನರು  ಸಂತೋಷ ವ್ಯಕ್ತಪಡಿಸಿದ್ದಾರೆ.ಆದ್ರೆ ಪರಿಸರವಾದಿಗಳ ಪ್ರಶ್ನೆ ಸರಿಯಾದ ಕ್ರಿಯಾ ಯೋಜನೆ ಇಲ್ಲದೆ ರಸ್ತೆ ಮಾಡಲು ಹೊರಟಿರೋದು ಮತ್ತೊಂದು ಶಿರಾಡಿ ಘಾಟ್ ದುರಂತ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.

ಡಬಲ್ ರಸ್ತೆ ಬೇಡ ಮೊದಲು ಗುಂಡಿಗಳನ್ನು ಮುಚ್ಚಿ ಎನ್ನುವ ಒತ್ತಾಯ: ಡಬಲ್ ರೋಡ್ ಮಾಡಲು ಜಾಗಾನೇ ಇಲ್ಲ ,ಸ್ವಲ್ಪ ಜಾಸ್ತಿ ಹಣ ಆದರೂ ಪರವಾಗಿಲ್ಲ ಉತ್ತಮವಾದ ಸುರಂಗ ಮಾರ್ಗನೋ ಅಥವಾ ಫ್ಲೈ ಓವರ್ ರೀತಿಯ ಕ್ರಿಯಾ ಯೋಜನೆ ಮಾಡಿ,  ಆಗು ಹೋಗುಗಳ ಬಗ್ಗೆ ಚರ್ಚಿಸಿ ಮತ್ತಷ್ಟು ಹಣ ಸೇರಿಸಿ ಉತ್ತಮವಾದ ರಸ್ತೆ ನಿರ್ಮಿಸಿ ಎನ್ನುವ ಸಲಹೆ ಚಾರ್ಮಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಸಂಜಯ್ ಕೊಟ್ಟಿಗೆಹಾರ ಒತ್ತಾಯಿಸಿದ್ದಾರೆ. ರಸ್ತೆ ಅಭಿವೃದ್ಧಿಯ ಹೆಸರಲ್ಲಿ  ಸುಮಾರು ೧೦ ವರ್ಷಗಳ ಕಾಲ ರಸ್ತೆ ಮುಚ್ಚುವ ಹುನ್ನಾರ ನಡೆದಿದೆ, ೩ ವಿಭಾಗದ ಟೆಂಡರ್ ಆಗಿದ್ದು ಒಂದು ವಿಭಾಗದ ರಸ್ತೆ ಮಾಡಲು ೫ ವರ್ಷ ಬೇಕು,  ಹೀಗಾದರೆ ಕೊಟ್ಟಿಗೆಹಾರ  ಹತ್ತು ವರ್ಷಗಳಲ್ಲಿ ನಿರ್ನಾಮವಾಗಲಿದೆ ಎನ್ನುವ ಆತಂಕ ಹೊರ ಹಾಕಿದ್ದಾರೆ. 

ಡಿಕೆಶಿ ರೀತಿ ಲೂಟಿ ಮಾಡಿದ್ರೆ ಒಂದೊಂದು ಊರಿಗೆ 10 ಎಕ್ರೆ ಕೊಡ್ತಿದ್ದೆ: ಎಚ್‌ಡಿಕೆ ತಿರುಗೇಟು

ನಮಗೇನು ಡಬಲ್ ರಸ್ತೆ ಬೇಕಾಗಿಲ್ಲ,  ಗುಂಡಿ ಮುಚ್ಚಿದರೆ ಸಾಕು ಎಂದಿದ್ದಾರೆ.ಡಬಲ್ ರಸ್ತೆ ಹೆಸರಿನಲ್ಲಿ  ವಿದ್ಯಾರ್ಥಿಗಳ ಹಾಗೂ ದಕ್ಷಿಣ ಕನ್ನಡ ಆಸ್ಪತ್ರೆಗೆ ಹೋಗಲು ಬಹಳ ತೊಂದರೆ ಆಗಲಿದೆ , ಎಲ್ಲರೂ ಕೈ ಜೋಡಿಸಿದರೆ ಒಂದು ದೊಡ್ಡ ಮಟ್ಟದ ಹೋರಾಟ ಮಾಡೋಣ ಎಂದು ಕೆಲವರು ಪ್ರತಿಕ್ರಿಯಿಸಿದ್ದು ಹೋರಾಟದ ರೂಪುರೇಷೆ ನಿರ್ಧರಿಸಲು ಸಭೆಯನ್ನು ಕೂಡ ಕೊಟ್ಟಿಗೆಹಾರದಲ್ಲಿ ನಡೆಸಿದ್ದಾರೆ. ಅಲ್ಲದೆ ಚಾರ್ಮಾಡಿ ಘಾಟ್ ಉಳಿಸಿ ಅಭಿಯಾನ ನಡೆಸಲು ತಯಾರಿಸಿ ನಡೆಸಿದ್ದು ಕಾನೂನು ಹೋರಾಟವೂ ನಡೆಯುಲಿದೆ.ಒಟ್ಟಾರೆ ಮಲೆನಾಡು ದಕ್ಷಿಣ ಕನ್ನಡ ನಡುವಿನ ಸಂಪರ್ಕ ಸೇತುವೆ ಆಗಿರುವ ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ದಿ ವಿಚಾರ ಇದೀಗ ಮಲೆನಾಡಿನಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗೆ ವೇದಿಕೆಯಾಗಿ ಪರಿಣಾಮಿಸಿದೆ.

click me!