'ದೇಶ ವಿರೋಧಿ ಭಿತ್ತಿ ಪತ್ರ ಹಿಡಿದ ಆರ್ದ್ರಾ ನನ್ನ ಮೊಮ್ಮಗಳೇ ಅಲ್ಲ'

Kannadaprabha News   | Asianet News
Published : Feb 22, 2020, 10:33 AM IST
'ದೇಶ ವಿರೋಧಿ ಭಿತ್ತಿ ಪತ್ರ ಹಿಡಿದ ಆರ್ದ್ರಾ ನನ್ನ ಮೊಮ್ಮಗಳೇ ಅಲ್ಲ'

ಸಾರಾಂಶ

ಮೊಮ್ಮಗಳ ಹೇಳಿಕೆ ಅಚ್ಚರಿ ತಂದಿದೆ|ಕೆಲಸಕ್ಕೆ ಹೋಗಲು ಹತ್ತಿರವಾಗುತ್ತದೆ ಎನ್ನುವ ಕಾರಣಕ್ಕೆ ಕಚೇರಿಗೆ ಹತ್ತಿರವಿರುವ ಸ್ಥಳದಲ್ಲಿ ಪೇಯಿಂಗ್‌ ಗೆಸ್ಟ್‌ನಲ್ಲಿದ್ದಳು|

ಬೆಂಗಳೂರು(ಫೆ.22): ನನ್ನ ಮೊಮ್ಮಗಳು ಉತ್ತಮ ಕುಟುಂಬದ ಹಿನ್ನೆಲೆಯುಳ್ಳವಳು. ಈ ರೀತಿ ಹೇಳಿಕೆ ನೀಡಿರುವುದು ನಮಗೆ ಆಶ್ಚರ್ಯ ತಂದಿದೆ’ ಎಂದು ಆರ್ದ್ರಾ ತಾತ ಹೇಳಿದ್ದಾರೆ.

ಮೊಮ್ಮಗಳು ಆರ್ದ್ರಾ ದೇಶ ವಿರೋಧಿ ಭಿತ್ತಿ ಪತ್ರ ಹಿಡಿದು ಬಂಧನವಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅವಳ ನಿಜವಾದ ಹೆಸರು ಅನ್ನಪೂರ್ಣ. ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಶಿಸ್ತಿನ ಹುಡುಗಿ. ಆಕೆಯ ನಡವಳಿಕೆ ನಮಗೆ ಅಚ್ಚರಿಗೊಳಗಾಗುವಂತೆ ಮಾಡಿದೆ. ನಿಜಕ್ಕೂ ಅವಳು ನಮ್ಮ ಮೊಮ್ಮಗಳಲ್ಲ. ನಮ್ಮ ಮೊಮ್ಮಗಳು ವಿಭಿನ್ನವಾಗಿದ್ದಳು ಎಂದು ತಿಳಿಸಿದ್ದಾರೆ.

ದೇಶದ್ರೋಹಿ ಘೋಷಣೆ: ಅಮೂಲ್ಯ ಲಿಯೋನಾ ಜತೆ ಪರಪ್ಪನ ಅಗ್ರಹಾರ ಸೇರಿದ ಅರುದ್ರಾ

ಕೆಲಸಕ್ಕೆ ಹೋಗಲು ಹತ್ತಿರವಾಗುತ್ತದೆ ಎನ್ನುವ ಕಾರಣಕ್ಕೆ ಕಚೇರಿಗೆ ಹತ್ತಿರವಿರುವ ಸ್ಥಳದಲ್ಲಿ ಪೇಯಿಂಗ್‌ ಗೆಸ್ಟ್‌ನಲ್ಲಿದ್ದಳು. ಅಪರೂಪಕ್ಕೆ ಒಮ್ಮೆ ಕರೆ ಮಾಡಿ ನಮ್ಮ ಬಳಿ ಮಾತನಾಡುತ್ತಿದ್ದಳು. ಹತ್ತು ದಿನಗಳ ಹಿಂದೆ ಮನೆಗೆ ಬಂದಿದ್ದಳು ಎಂದು ಹೇಳಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!