ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ದಾಖಲೆಗೈದವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಮಾ.25): ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ದಾಖಲೆಗೈದವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್. ಆ ಯುವತಿ ಆ ಸಾಹಸ ಮಾಡಿದ್ದು ಆ ಶಾಲೆಯ ಮಕ್ಕಳ ಭವಿಷ್ಯಕ್ಕೆ ನಿಧಿ ಸಂಗ್ರಹಿಸುವ ಸಲುವಾಗಿ. ಚಾಮರಾಜನಗರದಲ್ಲಿರುವ ಆ ಶಾಲೆಗೆ ಭೇಟಿ ನೀಡಿದ ಅನನ್ಯ ಪ್ರಸಾದ್ ಅಲ್ಲಿನ ಮಕ್ಕಳೊಂದಿಗೆ ಸಂವಾದ ಮಾಡುವ ಮೂಲಕ ತಮ್ಮ ರೋಚಕ ಅನುಭವ ಹಂಚಿಕೊಂಡಿದ್ದಾರೆ ಅನನ್ಯಪ್ರಸಾದ್. ಇಂತಹ ಮುಗ್ಧ ಪ್ರಶ್ನೆಗಳು ಆ ಶಾಲಾ ಮಕ್ಕಳಿಂದ ತೂರಿ ಬರುತ್ತಿದ್ರೆ ಆ ಯುವತಿ ಯಾವುದೇ ಮುಜುಗರಪಟ್ಟು ಕೊಳ್ಳದೆ ಉತ್ತರಿಸುತ್ತಾ ಇದ್ರು.
ಹೌದು! ಅಟ್ಲಾಂಟಿಕ್ ಮಹಾಸಾಗರವನ್ನು ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಅವರು ಚಾಮರಾಜನಗರದಲ್ಲಿ ದೀನಬಂಧು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆ ಗಳಿಗೆ ಉತ್ತರಿಸುತ್ತಾ ಅವರ ಕುತೂಹಲ ತಣಿಸಿದರು. ಇಂತಹ ಸಾಹಸ ಮಾಡೋಕೆ ಕೇವಲ ದೈಹಿಕ ಸದೃಢತೆ ಸಾಲದು ಮಾನಸಿಕವಾಗಿಯು ಗಟ್ಟಿಯಾಗಿರಬೇಕ ಎಂದು ಅವರು ಹೇಳಿದರು.
ತಾವು ರೋವಿಂಗ್ ಮಾಡುತ್ತಿದ್ದಾಗ ಆದ ರೋಚಕ ಅನುಭವಗಳನ್ನು ಅವರು ಮಕ್ಕಳೊಂದಿಗೆ ಹಂಚಿಕೊಂಡರು. ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪ್ರೊ. ಜಿ.ಎಸ್ ಜಯದೇವ್ ಅನಾಥ ಮಕ್ಕಳಿಗಾಗಿ ಚಾಮರಾಜನಗರದಲ್ಲಿ ದೀನಬಂಧು ಎಂಬ ಆಶ್ರಮ ತೆರೆದು ಈವರೆಗೆ ನೂರಾರು ಮಕ್ಕಳನ್ನು ಸಾಕಿ ಸಲುಹಿದ್ದಾರೆ. ಜೊತೆಗೆ ದೀನ ದಲಿತರು ಬಡಮಕ್ಕಳಿಗಾಗಿ ಕನ್ನಡ ಮಾಧ್ಯಮದ ಶಾಲೆ ತೆರೆದು ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ತಮ್ಮ ಚಿಕ್ಕಪ್ಪ ಅವರು ನಿಸ್ವಾರ್ಥವಾಗಿ ನಡೆಸುತ್ತಿರುವ ದೀನಬಂಧು ಆಶ್ರಮ ಹಾಗೂ ಶಾಲೆಗೆ ನಿಧಿ ಸಂಗ್ರಹಿಸಲೆಂದೆ ಅನನ್ಯ ಪ್ರಸಾದ್ ಅಟ್ಲಾಂಟಿಕ್ ಮಹಾಸಾಗರವನ್ನು ಏಕಾಂಗಿಯಾಗಿ ರೋವಿಂಗ್ ಮಾಡಿ ದಾಟುವ ಸಾಹಸ ಮಾಡಿದ್ದರು.
ಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಬಂಡೀಪುರದ ಕಾಡಿನ ಕೆರೆ: ದಾಹ ತಣಿಸಿಕೊಂಡು ವಿಹರಿಸುತ್ತಿರುವ ಮೂಕ ಪ್ರಾಣಿಗಳು!
ಅನನ್ಯ ಅವರ ಸಾಧನೆ ಫಲ ನೀಡುವ ಮೂಲಕ ದೇಶ ವಿದೇಶಗಳಿಂದ ದೀನಬಂಧು ಶಾಲೆಗೆ ಆರ್ಥಿಕ ಸಹಾಯ ಸಿಗಲಿದೆ ಎಂಬ ನಿರೀಕ್ಷೆ ಇದೆ. ಏಕಾಂಗಿಯಾಗಿ ರೋವಿಂಗ್ ಮಾಡುವ ಮೂಲಕ ಅಟ್ಲಾಂಟಿಕ್ ಸಾಗರವನ್ನು ದಾಟಿದ ಮೊಟ್ಟಮೊದಲ ಬಿಳಿಯೇತರ ಮಹಿಳೆ ಎಂಬ ಹೆಗ್ಗಳಿಕೆಗೆ ಅನನ್ಯ ಪ್ರಸಾದ್ ಪಾತ್ರರಾಗಿದ್ದಾರೆ. ಇದೇನೆ ಇರಲಿ ಅದ್ಭುತ ಸಾಧನೆಗೈದ ಗಟ್ಟಿಗಿತ್ತಿ ಅನನ್ಯಪ್ರಸಾದ್ ಕನ್ನಡತಿ ಎಂಬುದು ಹೆಮ್ಮೆಯ ಸಂಗತಿಯಾಗಿದೆ.