Ramanagara: ಜ.11ರಿಂದ ಐದು ದಿನಗಳ ಕಾಲ ಅದ್ಧೂರಿ ಕನ​ಕೋ​ತ್ಸವ: ಸಂಸದ ಸು​ರೇಶ್‌

By Govindaraj S  |  First Published Jan 9, 2023, 8:05 PM IST

ಕಳೆದ ನಾಲ್ಕು ವರ್ಷದಿಂದ ಕೊರೋನಾ ಸಾಂಕ್ರಾಮಿಕದಿಂದ ಸ್ಥಗಿತಗೊಳಿಸಿದ್ದ ತಾಲೂಕಿನ ಜನರ ಹಬ್ಬ ಕನಕೋತ್ಸವವನ್ನು ಈ ಬಾರಿ ಸತತ ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. 


ಕನಕಪುರ (ಜ.09): ಕಳೆದ ನಾಲ್ಕು ವರ್ಷದಿಂದ ಕೊರೋನಾ ಸಾಂಕ್ರಾಮಿಕದಿಂದ ಸ್ಥಗಿತಗೊಳಿಸಿದ್ದ ತಾಲೂಕಿನ ಜನರ ಹಬ್ಬ ಕನಕೋತ್ಸವವನ್ನು ಈ ಬಾರಿ ಸತತ ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಕನಕೋತ್ಸವ ಕಾರ್ಯಕ್ರಮದ ಸಿದ್ಧತೆಯನ್ನು ಪರೀಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಜನರ ಆಶೀರ್ವಾದ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜ.11ರಿಂದ 15ರವ​ರೆಗೆ ಕನ​ಕೋ​ತ್ಸವ ಆಚ​ರಣೆ ಮಾಡ​ಲಾ​ಗು​ತ್ತಿದೆ. 

ಜ.11ರ ಬೆಳಗ್ಗೆ 5.30ಕ್ಕೆ ದೇಗುಲ ಮಠದ ಶ್ರೀ ನಿರ್ವಾಹಣಾ ಮಹಾ ಸ್ವಾಮೀಜಿ, ಶಿವಗಿರಿ ಕ್ಷೇತ್ರ​ದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಹಾಗೂ ಮರಳೇಗವಿ ಮಠದ ಶ್ರೀ ಶಿವರುದ್ರ ಮಹಾಸ್ವಾಮಿ ತಮ್ಮ ಅಮೃತ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿ​ದ​ರು. ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ಕನಕೋತ್ಸವ ಕಾರ್ಯಕ್ರಮವನ್ನು ಈ ಬಾರಿ ಜಿಲ್ಲಾ ಮಟ್ಟದಲ್ಲಿ ನಡೆ​ಸ​ಲಾ​ಗು​ತ್ತಿ​ದೆ. ಈಗಾಗಲೇ ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕುಣಿಗಲ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಪೂರ್ವ ಭಾವಿ ಸ್ಪರ್ಧೆಗಳು ನಡೆಸಲಾಗಿದೆ. ಅಂತಿಮ ಹಂತದ ಸ್ಪರ್ಧೆಗಳು ಐದು ದಿನಗಳ ಕಾಲ ವಿವಿಧ ಹಂತಗಳಲ್ಲಿ ನಡೆಯಲಿವೆ. 

Tap to resize

Latest Videos

ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಪುಟ್ಟಸ್ವಾಮಿ!

ಇದರ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕಗಳಿಂದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 34 ಸಾವಿರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿ​ಸಿ​ದ​ರು. ನಮ್ಮ ಸಂರು. ಪರಂಪರೆಯನ್ನು ಉಳಿಸಿ-ಬೆಳಸುವ ಉದ್ದೇಶದಿಂದ ತಾಲೂಕಿನ ಸುಮಾರು 180 ಕ್ಕೂ ಹೆಚ್ಚು ದೇವತೆಗಳ ಮೆರವಣಿಗೆಯು ನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಆರಂಭವಾಗಲಿದ್ದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ದಂಪತಿಗಳಿಗೆ ಸಾಂಪ್ರದಾಯಿಕ ವೇಷ ಹಾಗೂ ಚಿತ್ರಕಲಾ ಸ್ಪರ್ಧೆಯ ಜೊತೆಗೆ ವಾಲಿಬಾಲ್, ಥ್ರೋಬಾಲ್, ಟೆನಿಸ್‌, ಷಟಲ್‌, ಬ್ಯಾಡ್ಮಿಂಟನ್‌ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಲಿವೆ ಎಂದು ಹೇಳಿ​ದರು.

Chamarajanagar: ಮಲೆ ಮಹದೇಶ್ವರ ಬೆಟ್ಟಕ್ಕೆ ಸಚಿವ ಸೋಮಣ್ಣ ಭೇಟಿ

ಪ್ರತಿ ದಿನ ಬೆಳಗ್ಗೆ 5 .30 ಗಂಟೆಯಿಂದ ಯೋಗಸಾನದಿಂದ ಆರಂಭವಾಗುವ ಕಾರ್ಯಕಮ ರಾತ್ರಿ 11 ಗಂಟೆ ಯವರಿಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನತೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ತಾಲೂಕಿನ ಜನರು ಐದು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಆಗಮಿಸಿ ಯಶಸ್ಸುಗೊಳಿಸುವಂತೆ ಸುರೇಶ್‌ ಮನವಿ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ನಗರಸಭಾ ಅಧ್ಯಕ್ಷ ಕೆ.ಟಿ.ಕಿರಣ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ವಿಜಯ್‌ ದೇವ್‌, ನಗರಸಭಾ ಮಾಜಿ ಅಧ್ಯಕ್ಷ ದಿಲೀಪ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಚಂದ್ರ ಶೇಖರ್‌, ಮುಖಂಡರಾದ ರಾಯಸಂದ್ರರವಿ, ಹೊಸಕೋಟೆ ಪುರುಷೋತ್ತಮ್‌, ರಾಮು, ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಂಕರ್‌ ಇತರರಿದ್ದರು.

click me!