ಭೀಕರ ರಸ್ತೆ ಅಪಘಾತ: ಅಜ್ಜ-ಮೊಮ್ಮಗ ಸಾವು

By Kannadaprabha News  |  First Published May 26, 2020, 9:02 AM IST

ಸೋಮವಾರ ಬೀರೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಾತ ಹಾಗೂ ಮೊಮ್ಮಗ ಕೊನೆಯುಸಿರೆಳೆದಿದ್ದಾರೆ. ಇನ್ನು ಕಡೂರಿನಲ್ಲಿ ನಡೆದ ಮತ್ತೊಂದ ಅಪಘಾತದಲ್ಲಿ 6 ವರ್ಷದ ಮಗು ಕೊನೆಯುಸಿರೆಳೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಬೀರೂರು: ರಾಷ್ಟ್ರೀಯ ಹೆದ್ದಾರಿ ಪರ್ಲ್ಸ್ ಕ್ಲಬ್‌ ಸಮೀಪದ ರಂಗನಾಥ ಟ್ರ್ಯಾಕ್ಟರ್‌ ಶೋ ರೂಂ ಹತ್ತಿರ ಟಿಪ್ಪರ್‌ ಲಾರಿ ಮತ್ತು ಬೈಕ್‌ ನಡುವೆ ಅಪಘಾತದಲ್ಲಿ ತಾತ ಹಾಗೂ ಮೊಮ್ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಬಳ್ಳಿಗನೂರಿನ ಮಲ್ಲಪ್ಪ (57) ಮತ್ತು ಮೊಮ್ಮಗ ಉತ್ಸವ್‌ (12) ಮೃತರು. ಬೀರೂರು ಕಡೆಯಿಂದ ಟಿಪ್ಪರ್‌ ಲಾರಿ ವೇಗವಾಗಿ ಕಡೂರು ಕಡೆಗೆ ಬರುತ್ತಿತ್ತು. ಈ ಸಂದರ್ಭ ಕಡೂರಿನಿಂದ ಬೀರೂರು ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ರಸ್ತೆ ಬದಿ ಇದ್ದ ಮರಕ್ಕೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನಲ್ಲಿದ್ದ ಅಜ್ಜ, ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣ-ಪುಟ್ಟಗಾಯಗಳಾಗಿವೆ. ಬೀರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

undefined

ಕಾರುಗಳ ಡಿಕ್ಕಿ: ಮಗು ಸಾವು, ಅನೇಕರಿಗೆ ಗಾಯ

ಕಡೂರು: ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ವರ್ಷದ ಮಗು ಮೃತಪಟ್ಟು ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡೂರು ತಾಲೂಕಿನ ಕುರುಬರಹಳ್ಳಿ ಗೇಟ್‌ ಬಳಿ ನಡೆದಿದೆ. ಸೋಮವಾರ ಬೆಳಗ್ಗೆ ಸುಮಾರು 8.30ರ ಸಮಯದಲ್ಲಿ ದುರ್ಘಟನೆ ನಡæದದಿದæ. ಸಾನ್ವಿಕ (6) ಹೆಸರರಿನ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ವಿವಾಹಿತ ಮಹಿಳೆ ಜೊತೆ ಲವ್: ಬಾವಿಯಲ್ಲಿ 9 ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್!

ಅರಸೀಕೆರೆಯಿಂದ ಚೇತನ್‌ ಎಂಬವರು ಕುಟುಂಬದೊಂದಿಗೆ ಮದುವೆ ಮುಗಿಸಿಕೊಂಡು ಕಾರಿನಲ್ಲಿ ತರೀಕೆರೆಗೆ ತೆರಳುತ್ತಿದ್ದರು. ಆಗ ಕುರುಬರಹಳ್ಳಿ ಗೇಟ್‌ ಬಳಿ ತರೀಕೆರೆಯಿಂದ ಅರಸೀಕೆರೆ ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಚೇತನ್‌, ರೇಣುಕಮ್ಮ, ಯಶವಂತ್‌ ಅವರಿಗೆ ಗಂಭೀರ ಗಾಯಗಳಾಗಿವೆ. ಅರುಣ್‌ಕುಮಾರ್‌ ಚಲಾಯಿಸುತ್ತಿದ್ದ ಕಾರಿನಲ್ಲಿದ್ದ ಅರುಣ್‌ಕುಮಾರ್‌, ಸಾನ್ವಿಕ, ರಮ್ಯಾ, ಸೌಮ್ಯ ಅವರಿಗೆ ಗಾಯಗಳಾಗಿದ್ದು, ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಗು ಸಾನ್ವಿಕಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಗು ನಿಧನ ಹೊಂದಿದೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

click me!