ಶಿವಮೊಗ್ಗದಲ್ಲಿ ಅಜ್ಜ ಮೊಮ್ಮಕ್ಕಳಿಗೂ ವಕ್ಕರಿಸಿದ ಕೊರೋನಾ ‌..!

By Kannadaprabha News  |  First Published Jul 8, 2020, 8:24 AM IST

ಬೆಂಗಳೂರಿನಿಂದ ಊರಿಗೆ ಮರಳಿದ ವ್ಯಕ್ತಿಯಿಂದ ಸೋಂಕಿತ ಸಂಪರ್ಕದಲ್ಲಿದ್ದ ತಾಯಿ ಮತ್ತು ಸಹೋದರಿಯರಿಬ್ಬರು ಈಗಾಗಲೇ ಆಸ್ಪತ್ರೆಗೆ ದಾಖಲಾದ ಬೆನ್ನಲೇ ಪುನ: ಅಜ್ಜ ಮತ್ತು ಮೊಮ್ಮಕ್ಕಳಲ್ಲಿ ಪಾಸಿಟಿವ್‌ ಬಂದಿರುವುದು ಗ್ರಾಮಸ್ಥರಲ್ಲಿ ಅತಂಕಕ್ಕೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ರಿಪ್ಪನ್‌ಪೇಟೆ(ಜು.08): ಸಮೀಪದ ಗವಟೂರು ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಸುಮಾರು 73 ವಯಸ್ಸಿನ ವಯಸ್ಸಿನ ಅಜ್ಜ ಹಾಗೂ ಮೊಮ್ಮಕ್ಕಳಾದ ಸುಮಾರು 8 ಮತ್ತು 5 ಹಾಗೂ 3 ವರ್ಷದ ಮಕ್ಕಳಲ್ಲಿ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಈ ನಾಲ್ವರನ್ನು ಶಿವಮೊಗ್ಗ ಕೋವಿಡ್‌ ಸರ್ಕಾರಿ ಮೆಗ್ಗಾನ್‌ ಅಸ್ಪತ್ರೆ ವಿಶೇಷ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಉಪತಹಶೀಲ್ದಾರ್‌ ಪ್ರದೀಪ್‌ ಮತ್ತು ಪಿಡಿಓ ಚಂದ್ರಶೇಖರ್‌ ತಾಲೂಕ್‌ ಆರೋಗ್ಯಾ​ಧಿಕಾರಿ ಸುರೇಶ್‌ ತಿಳಿಸಿದರು.

ಬೆಂಗಳೂರಿನಿಂದ ಊರಿಗೆ ಮರಳಿದ ವ್ಯಕ್ತಿಯಿಂದ ಸೋಂಕಿತ ಸಂಪರ್ಕದಲ್ಲಿದ್ದ ತಾಯಿ ಮತ್ತು ಸಹೋದರಿಯರಿಬ್ಬರು ಈಗಾಗಲೇ ಆಸ್ಪತ್ರೆಗೆ ದಾಖಲಾದ ಬೆನ್ನಲೇ ಪುನ: ಅಜ್ಜ ಮತ್ತು ಮೊಮ್ಮಕ್ಕಳಲ್ಲಿ ಪಾಸಿಟಿವ್‌ ಬಂದಿರುವುದು ಗ್ರಾಮಸ್ಥರಲ್ಲಿ ಅತಂಕಕ್ಕೆ ಕಾರಣವಾಗಿದೆ. ಸೋಂಕಿತ ವ್ಯಕ್ತಿಯ ಮನೆಯ ಸುತ್ತು 100 ಮೀಟರ್‌ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್‌ ಝೋನ್‌ ಮಾಡುವ ಮೂಲಕ ಸೀಲ್ಡೌನ್‌ ಮಾಡಲಾಗಿದ್ದು ಮನೆಯವರು ಹೊರ ಬರದಂತೆ ಮತ್ತು ಸಾರ್ವಜನಿಕರು ಓಡಾಡದಂತೆ ನಿರ್ಬಂಧ ಮಾಡಲಾಗಿದೆ.

Latest Videos

undefined

ಹೊಸಮನೆ ವ್ಯಾಪ್ತಿ ಒಬ್ಬ ವ್ಯಕ್ತಿಗೆ ಸೋಂಕು

ಭದ್ರಾವತಿ: ನಗರದ ಹೊಸಮನೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಕಂಟೈನ್ಮೆಂಟ್‌ ವಲಯವೆಂದು ಘೋಷಿಸಲಾಗಿದೆ.

ಅಬ್ಬಬ್ಬಾ, 11 ತಿಂಗಳ ಮಗು ಸೇರಿ 11 ವರ್ಷದೊಳಗಿನ 7 ಮಕ್ಕಳಿಗೆ ಕೊರೋನಾ..!

ವಾರದ ಹಿಂದೆ ಹಳೇನಗರ ಗಾಂಧೀನಗರದ ಮೊದಲಿಯಾರ್‌ ಸಮುದಾಯ ಭವನದ ಬಳಿ ಒಂದೇ ಮನೆಯ 5 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಸೋಂಕಿಗೆ ಒಳಗಾಗಿದ್ದ ಮಹಿಳೆಯೊಬ್ಬರ 48 ವರ್ಷದ ಪತಿಗೆ ಇದೀಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆ ವ್ಯಕ್ತಿ ವಾಸವಿದ್ದ ಮನೆಯ 100 ಹಾಗೂ 200 ಮೀ. ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್‌ ವಲಯವಾಗಿಸಲಾಗಿದೆ. ತಾಲೂಕಿನಲ್ಲಿ ಒಟ್ಟು ಸುಮಾರು 25 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಸೀಲ್‌ಡೌನ್‌ ಪ್ರದೇಶಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದೆಲ್ಲೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ನಗರದಲ್ಲಿ ಕಳೆದ 5-6 ದಿನಗಳಿಂದ ವಿವಿಧ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಸಂಜೆ 6 ಗಂಟೆಗೆ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ ಅಂಗಡಿ ಮುಂಗಟ್ಟು ಬಂದ್‌ ಮಾಡುತ್ತಿದ್ದಾರೆ. ಇದರಿಂದಾಗಿ ಸಂಜೆ ವೇಳೆ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಬರುತ್ತಿದೆ. ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಎಚ್ಚರ ವಹಿಸಲಾಗುತ್ತಿದೆ.
 

click me!