ಕೊರೋನಾ ಎಫೆಕ್ಟ್ : ಮಾಂಸದ ಅಂಗಡಿಗಳೆಲ್ಲವೂ ಬಂದ್

By Kannadaprabha NewsFirst Published Mar 14, 2020, 12:48 PM IST
Highlights

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮಾಂಸ ಹಾಗೂ ಮಾಂಸದ ಆಹಾರ ಮಾರಾಟದ ಹೋಟೆಲ್‌ ಬಂದ್ ಮಾಡಲು ನಿರ್ಧರಿಸಿಲಾಗಿದೆ.

ಮುಂಡಗೋಡ [ಮಾ.14]:  ದೇಶಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಎಗ್ ರೈಸ್, ಚಿಕನ್ ಹಾಗೂ ಮಟನ್ ಆಹಾರ ತಯಾರಿಸುವ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿ ಮಳಗಿ ಗ್ರಾಪಂನಿಂದ ನೋಟಿಸ್ ನೀಡುವ ತೀರ್ಮಾನ ಕೈಗೊಳ್ಳಲಾಯಿತು.

ಶುಕ್ರವಾರ ಮಳಗಿ ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ ಅಂಡಗಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೊರೋನಾ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸುವ ಮೂಲಕ ಸ್ವಚ್ಛತೆ ಹಾಗೂ ಆರೋಗ್ಯ ಸೇರಿದಂತೆ ಕೆಲ ಪ್ರಮುಖ ವಿಷಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಚಿಕನ್, ಮಟನ್ ಹಾಗೂ ಮೊಟ್ಟೆಯಿಂದ ಆಹಾರ ತಯಾರಿಸಲಾಗುವ ಅಂಗಡಿಗಳನ್ನು ತಕ್ಷಣದಿಂದ ಬಂದ್ ಮಾಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಕೊರೋನಾವೈರಸ್‌ ತಡೆ: ಸರ್ಕಾರದಿಂದ 4 ಮಹತ್ವದ ಸೂಚನೆ

ಅಲ್ಲದೇ, ಮಾಂಸ ಆಹಾರ ಸೇವನೆಯಿಂದ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಯ ಅಥವಾ ಪ್ರಾಣ ಹಾನಿ ಸಂಭವಿಸಿದಲ್ಲಿ ಅಂಗಡಿಕಾರರೇ ನೇರ ಹೊಣೆ ಯಾಗಲಿದ್ದೀರಿ ಎಂದು ನೋಟಿಸ್‌ನಲ್ಲಿ ನಮೂದಿಸಿ ಗ್ರಾಪಂನಿಂದ ಮುಂದಿನ ಸೂಚನೆ ಬರುವವರೆಗೆ ಅಂಗಡಿ ತೆರೆಯದಂತೆ ತಕ್ಷಣದಲ್ಲಿಯೇ ನೋಟಿಸ್ ಜಾರಿಗೆ ಕ್ರಮ ಕೈಗೊಳ್ಳಲಾಯಿತು. ಇಂತಹ ದಿಟ್ಟ ನಿರ್ಧಾರ ಕ್ರಮ ಕೈಗೊಂಡಿರುವುದರಲ್ಲಿ ತಾಲೂಕಿ ನಲ್ಲಿಯೇ ಮಳಗಿ ಗ್ರಾಪಂ ಮೊದಲನೆಯದಾಯಿತು.

click me!