Koppal News: ನಿರ್ವಹಣಾ ವೈಫಲ್ಯ: ಹಲವೆಡೆ ಕುಡಿವ ನೀರಿನ ಸಮಸ್ಯೆ

By Kannadaprabha NewsFirst Published Sep 3, 2022, 9:54 AM IST
Highlights
  • ನಿರ್ವಹಣಾ ವೈಫಲ್ಯ: ಹಲವೆಡೆ ಕುಡಿವ ನೀರಿನ ಸಮಸ್ಯೆ
  • ಬಹುಗ್ರಾಮ ಕುಡಿವ ನೀರಿನ ಯೋಜನೆ ಗುತ್ತಿಗೆದಾರರ ಬದಲಾವಣೆಗೆ ಶಾಸಕರಿಂದ ಪತ್ರ

ಕಾರಟಗಿ (ಸೆ.3) : ತಾಲೂಕಿನಲ್ಲಿ ರಾಜೀವ್‌ಗಾಂಧಿ ಸಬ್‌ ಮಿಷನ್‌ನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರ್ವಹಣೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಅನೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗುತ್ತಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಕಾರಟಗಿ ಹೊರವಲಯದ ನಾಗನಕಲ್‌ ಬಳಿ ಬೃಹತ್‌ ಕೆರೆ ಮತ್ತು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಆ ಮೂಲಕ ಕಾರಟಗಿ ಮತ್ತು 21 ಹಳ್ಳಿಗಳು ಮತ್ತು ನವಲಿ ಹಾಗೂ 22 ಹಳ್ಳಿಗಳಿಗೆ ನಿತ್ಯ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಕೋಟ್ಯಂತರ ರು. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ.

ಅಭಿವೃದ್ಧಿಗೆ ಆದ್ಯತೆ ನೀಡದ ಕಾಂಗ್ರೆಸ್‌: ಸಚಿವ ಹಾಲಪ್ಪ ಆಚಾರ್‌

ಈ ಯೋಜನೆ ಮೂಲಕ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ, ಈಗ ತಾಲೂಕಿನ ಚೆಳ್ಳೂರು, ಗುಂಡೂರು, ಬೂದುಗುಂಪಾ, ಹುಳ್ಕಿಹಾಳ ಮತ್ತು ಯರಡೋಣಾ ಗ್ರಾಮ ಪಂಚಾಯಿತಿ ವ್ಯಕ್ತಿಗಳಲ್ಲಿ ಹಳ್ಳಿಗಳಿಗೆ ಕಾರಟಗಿ ಹೊರವಲಯದ ನಾಗನಕಲ್‌ ಬಳಿಯ ಬೃಹತ್‌ ಕೆರೆಯಿಂದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪೂರೈಕೆಯ ನಿರ್ವಹಣೆ ವೈಫಲ್ಯದಿಂದಾಗಿ ಈ ಹಳ್ಳಿಗಳು ಸಮಸ್ಯೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪುಷ್ಟಿಯಾಗಿ ಸ್ವತಃ ತಾಪಂ ಇಒ ಕಚೇರಿ ಮತ್ತು ಶಾಸಕ ಬಸವರಾಜ ದಢೇಸ್ಗೂರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ವತಃ ಶಾಸಕ ಬಸವರಾಜ ದಢೇಸ್ಗೂರು ಅವರು ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರನ್ನು ಕೂಡಲೇ ಬದಲಾಯಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯಪಾಲಕ ಎಂಜಿನಿಯರ್‌ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.

ಕೆರೆಯಲ್ಲಿ ನೀರು ನಿರ್ವಹಣೆ ಮತ್ತು ಪೂರೈಕೆ ಮಾಡಲು ಗುತ್ತಿಗೆ ನೀಡಿದ್ದು, ಗುತ್ತಿಗೆ ಪಡೆದ ಬಿಜೆಪಿ ಮುಖಂಡರೊಬ್ಬರ ಆಪ್ತ ಗುತ್ತಿಗೆ ಜಿ. ಸುರೇಶ ಪಡೆದಿದ್ದು, ಇವರು ಕೆರೆ ನಿರ್ವಹಣೆ ಮತ್ತು ನೀರು ಸರಬರಾಜು ಮಾಡದೆ ಇರುವುದನ್ನು ರೂಢಿಗತ ಮಾಡಿಕೊಂಡಿದ್ದು ಅನೇಕ ಗ್ರಾಮಸ್ಥರು ಈ ಕುರಿತು ದೂರು ನೀಡಿದ್ದ ಕೂಡಲೇ ಇವರ ಟೆಂಡರ್‌ ಅನರ್ಹತೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಶಾಸಕರು ಪತ್ರದಲ್ಲಿ ಕೋರಿದ್ದು ಬೆಳಕಿಗೆ ಬಂದಿದೆ. ಕಳೆದ ಜು. 7ರಂದು ಈ ಪತ್ರವನ್ನು ಶಾಸಕರು ಬರೆದಿದ್ದಾರೆ. ಇದಕ್ಕು ಮುನ್ನ ತಾಪಂ ಕಚೇರಿಯಿಂದ ಸಹ ಕಳೆದ ಜು. 7ಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಬರೆದಿದ್ದು, ಅನೇಕ ಹಳ್ಳಿಗಳಿಗೆ ನಿತ್ಯ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ, ಟೆಂಡರ್‌ ಪಡೆದ ಗುತ್ತಿಗೆದಾರರು ಘಟಕ ನಿರ್ವಹಿಸಲು ವಿಫಲವಾಗಿರುವುದಾಗಿ ಸಂಬಂಧಿಸಿದ ಪಿಡಿಒಗಳ ವರದಿ ಆಧರಿಸಿ ಪತ್ರ ಬರೆದಿದ್ದಾರೆ.

ಬಸ್‌ ಇಲ್ಲದೆ ಜೆಸಿಬಿ ಏರಿ ಶಾಲೆಗೆ ಬರ್ತಾರೆ ಮಕ್ಕಳು; ಶಿರಗುಂಪಿ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ!

ಅಧಿಕಾರಿಗಳ ಭೇಟಿ ಇಡೀ ಪ್ರಕರಣವನ್ನು ಜಿಪಂ ಗಂಭೀರವಾಗಿ ಪರಿಗಣಿಸಿದ್ದು, ತಾಪಂ ಇಒ ಮತ್ತು ಶಾಸಕರ ಪತ್ರದ ಅನ್ವಯ ಇತ್ತೀಚೆಗೆ ಜಿಪಂ ಸಿಇಒ ¶ೌಜಿಯಾ ತರನ್ನುಮ್‌ ನಾಗನಕಲ್‌ ಬಳಿಯ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಕೆರೆಗೆ ಭೇಟಿ ನೀಡಿ 51 ಹಳ್ಳಿಗಳಿಗೆ ಸಮಪರ್ಕಕ ನೀರು ಸರಬರಾಜು ಅಗಬೇಕು ಜತೆಗೆ ಪುನಶ್ಚೇಚನ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

click me!