ಸರ್ಕಾರ ರೈತರ ಪರವಾಗಿ ಕೆಲಸ ಮಾಡುವುದು ಕಡಿಮೆ: ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ!

By Govindaraj S  |  First Published Sep 13, 2023, 10:23 PM IST

ಎಲ್ಲ ಸರ್ಕಾರಗಳು ರೈತರ ಪರವಾಗಿ ಮಾತನಾಡುತ್ತವೆ ಆದರೆ ರೈತರ ಪರವಾಗಿ ಕೆಲಸ ಮಾಡುವುದು ಕಡಿಮೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. 


ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಸೆ.13): ಎಲ್ಲ ಸರ್ಕಾರಗಳು ರೈತರ ಪರವಾಗಿ ಮಾತನಾಡುತ್ತವೆ ಆದರೆ ರೈತರ ಪರವಾಗಿ ಕೆಲಸ ಮಾಡುವುದು ಕಡಿಮೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಆನಗೋಡು ಸಮೀಪದ ಉಳುಪಿನಕಟ್ಟೆ ಕ್ರಾಸ್ ಬಳಿ ಇರುವ ರೈತ ಹುತಾತ್ಮರ ಸಮಾಧಿ ಬಳಿ ಹಮ್ಮಿಕೊಂಡಿದ್ದ 31 ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಮತ್ತು ಸ್ಮಾರಕ ಭವನ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು‌ ಅವರು ಬೇರೆ ಕ್ಷೇತ್ರಗಳಿಗೆ ಒತ್ತು ನೀಡಿದಂತೆ ಹೆಚ್ಚಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕಾದ ಜವಾಬ್ದಾರಿ ಯಾವುದೇ ಸರ್ಕಾರಕ್ಕೆ ಇದೆ.ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಮಾತಿನಂತೆ.

Latest Videos

undefined

ರೈತರು ಜೋಳ, ರಾಗಿ, ಭತ್ತ ಬೆಳೆಯದಿದ್ದರೆ ಜನ ಹಸಿವಿನಿಂದ ನರಳಬೇಕಾಗುತ್ತದೆ.‌ಅಡಿಕೆ, ಹಣ ತಿಂದು ಬದುಕಲು ಸಾಧ್ಯವಿಲ್ಲ. ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯಬೇಕಿದೆ. ಆದ್ದರಿಂದ ಸರ್ಕಾರ ಆಹಾರ ಪದಾರ್ಥಗಳನ್ನು ಬೆಳೆಯುವ ಜನರಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಸಲಹೆ ನೀಡಿದರು. ಬೆಳೆದ ಬೆಳೆಗೆ ಬೆಂಬಲ‌ ಸಿಗುವಂತೆ ಆಗಬೇಕು,ಪ್ರತಿ ಕ್ವಿಂಟಲ್ ಅಡಿಕೆಗೆ 45 ರಿಂದ 50  ಸಾವಿರ ರೂ ಬೆಲೆ ಸಿಗುತ್ತಿದೆ. ಹಾಗೆಯೇ ರಾಗಿ, ಜೋಳಕ್ಕೆ ಕನಿಷ್ಟ 10 ಸಾವಿರ ರೂ ಬೆಲೆ ಸಿಗುವಂತೆ ಆಗಬೇಕು.

ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ

ಈ ಬೆಲೆ ಸಿಕ್ಕಿದರೆ ಆಗ ಎಲ್ಲ ರೈತರು ಮರಳಿ ಈ ಕಡೆ ತಿರುಗುತ್ತಾರೆ. ಈ ಬಗ್ಗೆ ಕೂಡ ಸರ್ಕಾರ ಯೋಚನೆ ಮಾಡಬೇಕು ಎಂದರು. ರೈತರೂ ಕೂಡ ಏಕ ಬೆಳೆ ಪದ್ಧತಿ ಕೈ ಬಿಟ್ಟು ಬಹುಬೆಳೆ ಪದ್ಧತಿ ಅನುಸರಿಸಬೇಕು. ಒಂದು ಬೆಳೆ ವಿಫಲವಾದರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಆದರೆ ಇತ್ತೀಚಿಗೆ ತೆಂಗು.ಅಡಿಕೆ, ದಾಳಿಂಬೆ ಬೆಳೆಗಳತ್ತ ಗಮನಹರಿಸಲಾಗಿದೆ.‌ಇದೆ ಅನರ್ಥಕ್ಕೆ ಕಾರಣವಾಗುತ್ತಿದೆ.‌  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಶಾಸಕ ಕೆ.ಎಸ್.ಬಸವಂತಪ್ಪ ಅವರು ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಬೇಡಿಕೆಗಳನ್ನು ಪೂರೈಸುವ ಭರವಸೆ ತಮಗಿದೆ ಎಂದರು.

ರೈತ ಹಾಗು ದಲಿತ ಸಂಘಟನೆಗಳು ಸ್ವಪ್ರತಿಷ್ಠೆಗಾಗಿ ಛಿದ್ರಗೊಂಡಿವೆ: ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ರೈತ ಸಂಘಗಳಲ್ಲಿ ಒಗ್ಗಟ್ಟು ಇಲ್ಲದೇ ಇರುವ ಕಾರಣದಿಂದ ಯಾವುದೇ ಸರ್ಕಾರಗಳು ಅನ್ನದಾತನ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸ್ವ ಪ್ರತಿಷ್ಟೆಗಾಗಿ  ಛಿದ್ರಗೊಂಡಿರುವ ಎಲ್ಲ ರೈತ ಸಂಘಗಳನ್ನು ಒಗ್ಗೂಡಿಸುವ ಕೆಲಸವನ್ನು  ಸಾಣೇಹಳ್ಳಿಯ ಶ್ರೀಗಳು ಮಾಡಬೇಕೆಂದು ಮನವಿ ಮಾಡಿದರು. ಇಪ್ಪತ್ತೆರಡು ಕೆರೆ ಏತ ನೀರಾವರಿ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ.‌ಈ ಸಂಬಂಧ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು. 

ರಾಜ್ಯವನ್ನು ಕತ್ತಲೆಯಲ್ಲಿಡುವುದು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಗೋವಿಂದ ಕಾರಜೋಳ ಟೀಕೆ

ಮೆಕ್ಕೆಜೋಳಕ್ಕೆ ಹೆಕ್ಟೇರ್ 25 ಸಾವಿರ ರೂಪಾಯಿ ಬೆಳೆ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ದಾವಣಗೆರೆ ತಾಲ್ಲೂಕ್ ನ್ನು‌ ಬರಪೀಡಿತ ಎಂದು ಘೋಷಣೆ ಮಾಡಲು ಸಿ ಎಂ ಅವರಿಗೆ ಮನವಿ ಮಾಡಿದ್ದೇನೆ ಬರಪೀಡಿತ ತಾಲ್ಲೂಕ್ ಎಂದು ಘೋಷಣೆಯಾದ ನಂತರ ಎಲ್ಲಾ ಬೆಳೆಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಗೌರವಾಧ್ಯಕ್ಷ  ಎಚ್.ನಂಜುಂಡಪ್ಪ, ಅಧ್ಯಕ್ಷ  ಎನ್.ಜಿ.ಪುಟ್ಟಸ್ವಾಮಿ, ತಹಶಿಲ್ದಾರ್ ಡಾ.ಎಂ.ವಿ.ಅಶ್ವಥ್, ರೈತ ಮುಖಂಡ ತೇಜಸ್ವಿ ಪಟೇಲ್, ಶಾಮನೂರು ಲಿಂಗರಾಜ್, ಹೊನ್ನೂರು ಮುನಿಯಪ್ಪ, ಕಲ್ಲಿಂಗಪ್ಪ, ಆವರಗೆರೆ ರುದ್ರಮುನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

click me!