ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಕೋಟಿ ಕೋಟಿ ಲಾಭ

By Kannadaprabha NewsFirst Published Nov 16, 2019, 10:43 AM IST
Highlights

ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌)ಈ ಸಾಲಿನಲ್ಲಿ 1,012.71 ಕೋಟಿ ರು. ಆದಾಯ ಗಳಿಸಿದೆ. 2018-19ನೇ ಸಾಲಿನ ಇದೇ ಅವಧಿಯಲ್ಲಿ ಆದಾಯ 875.42 ಕೋಟಿ ರು. ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 15.68ರಷ್ಟುಆದಾಯ ಹೆಚ್ಚಳವಾಗಿದೆ.

ಮಂಗಳೂರು(ನ.16): ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌)ಈ ಸಾಲಿನಲ್ಲಿ 1,012.71 ಕೋಟಿ ರು. ಆದಾಯ ಗಳಿಸಿದೆ. 2018-19ನೇ ಸಾಲಿನ ಇದೇ ಅವಧಿಯಲ್ಲಿ ಆದಾಯ 875.42 ಕೋಟಿ ರು. ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 15.68ರಷ್ಟುಆದಾಯ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ತನ್ನ ನಿರ್ದೇಶಕ ಮಂಡಳಿ ಸಭೆಯಲ್ಲಿ 2019-20ನೇ ಸಾಲಿನ ಕಂಪನಿಯ ಎರಡನೇ ತ್ರೈಮಾಸಿಕ ಹಣಕಾಸು ಫಲಿತಾಂಶವನ್ನು ಘೋಷಿಸಿತು. ಕೆಐಒಸಿಎಲ್‌ ಸಿಎಂಡಿ ಎಂ.ವಿ.ಸುಬ್ಬರಾವ್‌ ಮಾತನಾಡಿ, ಕಂಪನಿಯು ಈ ವರ್ಷ 1.115 ಮಿಲಿಯನ್‌ ಟನ್‌ ಉತ್ಪಾದನೆ ಮತ್ತು 1.111 ಮಿಲಿಯನ್‌ ಟನ್‌ ರವಾನೆ ಆಗಿದೆ. ಇದೇ ಅವಧಿಯಲ್ಲಿ ಹಿಂದಿನ ವರ್ಷ 0.924 ಮಿಲಿಯನ್‌ ಟನ್‌ ಉತ್ಪಾದನೆ ಮತ್ತು 0.987 ಮಿಲಿಯನ್‌ ಟನ್‌ ರಫ್ತು ಆಗಿತ್ತು ಎಂದಿದ್ದಾರೆ.

ಹೊಟೇಲ್‌ ವ್ಯವಹಾರದಲ್ಲಿ ವಂಚನೆ: ಮಂಗಳೂರಿಗೆ ಬಂದ ಮುಂಬೈ ಪೊಲೀಸರು

ಹಿಂದಿನ ವರ್ಷದ 59.12 ಕೋಟಿ ರು. ತೆರಿಗೆಯ ಮುಂಚಿನ ಲಾಭಕ್ಕೆ (ಪಿಬಿಟಿ) ಹೊಲಿಸಿದರೆ, ಈ ವರ್ಷ 33.90 ಕೋಟಿ ರು. ಆದಾಯ ಬಂದಿದೆ. ತೆರಿಗೆ ನಂತರದ ಲಾಭ (ಪಿಎಟಿ) ಹಿಂದಿನ ವರ್ಷದ 45.89 ಕೋಟಿ ರು. ಇದ್ದರೆ, ಈ ವರ್ಷ 20.71 ಕೋಟಿ ರು. ಆಗಿದೆ. ಈ ಬಾರಿ 959.66 ಕೋಟಿ ರು. ವಹಿವಾಟು ಆಗಿದ್ದು, ಹಿಂದಿನ ವರ್ಷದ ವಹಿವಾಟು 818.60 ಕೋಟಿ ರು.ಗೆ ಹೋಲಿಸಿದರೆ ಶೇ. 17.23ರಷ್ಟುಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಆದಾಯ ಹಾಗೂ ಮಾರಾಟದ ವಹಿವಾಟು ಪ್ರಮಾಣ ಹೆಚ್ಚಳವಾಗಲು ಮಧ್ಯಪ್ರಾಚ್ಯ ದೇಶಗಳಿಗೆ ಪೆಲ್ಲೆಟ್‌ ಪೂರೈಕೆ, ಹೊಸ ಅಂತಾರಾಷ್ಟ್ರೀಯ ಮಾರುಕಟ್ಟೆಪ್ರವೇಶ ಸಹಾಯ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕಿನ ಮತ್ತು ಪೆಲ್ಲೆಟ್‌ ಬೆಲೆಯ ತೀವ್ರ ಕುಸಿತದಿಂದಾಗಿ, ಕಂಪನಿಯ ಲಾಭದಾಯಕತೆಯ ಮೇಲೆ ಪರಿಣಾಮ ಬೀರಿದೆ. ಕಚ್ಚಾ ವಸ್ತುಗಳ ವೆಚ್ಚವನ್ನು ಕಡಿಮೆ ಮಾಡಲು ಕಂಪನಿಯು ವಿವಿಧ ಮೂಲಗಳಿಂದ ಕಬ್ಬಿಣದ ಅದಿರನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ ಎಂದಿದ್ದಾರೆ.

ಮಂಗಳೂರು ಪಾಲಿಕೆ ಮೇಯರ್‌ ಆಯ್ಕೆ: ಹಾಲಿ ಅಥವಾ ಹೊಸ ಮೀಸಲಾತಿ?

ಇದಲ್ಲದೆ, ಕಂಪನಿಯು ನಿರಂತರವಾಗಿ ಪೆಲ್ಲೆಟ್‌ ಮಾರಾಟಕ್ಕಾಗಿ ಹೊಸ ಮಾರುಕಟ್ಟೆಗಳನ್ನು ಮತ್ತು ವೆಚ್ಚದ ಪರಿಣಾಮಕಾರಿತ್ವಕ್ಕಾಗಿ ಕಚ್ಚಾ ವಸ್ತುಗಳ ಮೂಲಗಳನ್ನು ಅನ್ವೇಷಿಸುತ್ತಿದೆ. ಕಂಪನಿಯು ಎನ್‌ಎಂಇಟಿ (ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌) ಮತ್ತು ಕರ್ನಾಟಕ ಸರ್ಕಾರದ ಸಹಾಯದೊಂದಿಗೆ, ಕರ್ನಾಟಕ ರಾಜ್ಯದಲ್ಲಿ ಖನಿಜ ಪರಿಶೋಧನಾ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸುತ್ತಿದೆ. ಮಂಗಳೂರಿನಲ್ಲಿರುವ ಊದು ಕುಲುಮೆ ಘಟಕದಲ್ಲಿ ಫಾರ್ವರ್ಡ್‌ ಮತ್ತು ಬ್ಯಾಕ್ವರ್ಡ್‌ ಇಂಟಿಗ್ರೇಷನ್‌ ಅಡಿಯಲ್ಲಿ ಬ್ಲಾಸ್ಟ್‌ ಫರ್ನಾಸ್‌ ಘಟಕದ ಆಧುನೀಕರಣ ಘಟಕವನ್ನು ಸ್ಥಾಪಿಸಲು ಅನುವು ಮಾಡುತ್ತಿದೆ. ದೇವದಾರಿ ಕಬ್ಬಿಣದ ಅದಿರು ಗಣಿಗಳ ಅಭಿವೃದ್ಧಿ, 5 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ನಿಜವಾಯ್ತು ಪೂಜಾರಿ ಭವಿಷ್ಯ, ಘಟಾನುಘಟಿಗಳು ಬಂದ್ರು 'ಕೈ' ಹಿಡಿಯಲಿಲ್ಲ ಜನ..!

click me!