ದುಬೈನಲ್ಲಿ 9 ವರ್ಷಗಳ ಹಿಂದೆ ಹೊಟೇಲ್ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ನಾಲ್ಕು ಮಂದಿ ಆರೋಪಿಗಳ ಪತ್ತೆಗಾಗಿ ಮುಂಬೈ ಪೊಲೀಸರು ಮಂಗಳೂರಿಗೆ ಬಂದು ಶೋಧ ನಡೆಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರಿನ ಪ್ರತಿಯನ್ನು ನೀಡಿದ್ದಾರೆ.
ಮಂಗಳೂರು(ನ.16): ದುಬೈನಲ್ಲಿ 9 ವರ್ಷಗಳ ಹಿಂದೆ ಹೊಟೇಲ್ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ನಾಲ್ಕು ಮಂದಿ ಆರೋಪಿಗಳ ಪತ್ತೆಗಾಗಿ ಮುಂಬೈ ಪೊಲೀಸರು ಮಂಗಳೂರಿಗೆ ಬಂದು ಶೋಧ ನಡೆಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರಿನ ಪ್ರತಿಯನ್ನು ನೀಡಿದ್ದಾರೆ.
ಮಂಗಳೂರಿನ ಶಕ್ತಿನಗರದ ಸೂರಜ್ ಬಾಬುಗೊಡ್ಡ ಕೋಟ್ಯಾನ್ (43), ಮೂಡಬಿದಿರೆ ಪುತ್ತಿಗೆ ಗ್ರಾಮದ ಮಾವಿನಕಟ್ಟೆರಾಮ ಟೆಂಪಲ್ ರಸ್ತೆಯ ನಿವಾಸಿ ಅಜಯ್ ಬಾಬುಗೊಡ್ಡ ಕೋಟ್ಯಾನ್ (41), ಮಂಗಳೂರಿನ ಕೊಡಿಯಾಲ್‌ಬೈಲ್ ಗುತ್ತು ಪೂರ್ವದ ನಿವಾಸಿಗಳಾದ ಕೆ. ಚಂದ್ರಶೇಖರ ಉಪಾಧ್ಯ ಮತ್ತು ಕೆ. ಕೃಷ್ಣ ಕಾಂತ್ ಉಪಾಧ್ಯ ಈ ಪ್ರಕರಣದ ಆರೋಪಿಗಳು. ಮುಂಬೈನ ಶೇಖ್ ಅಜೀಜ್ ಶೇಕ್ ಜುಮಾನ್ ದೂರು ನೀಡಿದ್ದಾರೆ.
ಪ್ರಕರಣದ ವಿವರ:
ಶೇಕ್ ಅಜೀಜ್ ಅವರ ಪುತ್ರಿ ಮತ್ತು ಈ ನಾಲ್ವರು ಆರೋಪಿಗಳು ಸೇರಿಕೊಂಡು ಪಾಲುದಾರಿಕೆಯಲ್ಲಿ 2010ರಲ್ಲಿ ದುಬೈನಲ್ಲಿ ಭಾರತೀಯ ಖಾದ್ಯಗಳ ಹೊಟೇಲ್ ಒಂದನ್ನು ಆರಂಭಿಸಿದ್ದರು. ಇದಕ್ಕೆ ಶೇಕ್ ಅಜೀಜ್ ಶೇಕ್ ಅವರು ಪುತ್ರಿಯ ಪರವಾಗಿ ಹಣ ಹೂಡಿಕೆ ಮಾಡಿದ್ದರು. ಸುಮಾರು 4 ತಿಂಗಳು ಕಾಲ ಹೊಟೇಲ್ ವ್ಯವಹಾರ ಚೆನ್ನಾಗಿ ನಡೆದಿದ್ದು, ಬಳಿಕ ಮುಚ್ಚಲ್ಪಟ್ಟಿತ್ತು. ಈ ಸಂದರ್ಭದಲ್ಲಿ ನಾಲ್ವರು ಆರೋಪಿಗಳು 56,37,450 ರುಪಾಯಿ ವಂಚಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳೂರು ಪಾಲಿಕೆ ಮೇಯರ್ ಆಯ್ಕೆ: ಹಾಲಿ ಅಥವಾ ಹೊಸ ಮೀಸಲಾತಿ?
ಆ ಬಳಿಕ ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ. ವಂಚನೆ ಪ್ರಕರಣದ ವಿಚಾರಣೆ ನಾಗಪುರದ ಸಿಜೆಎಂ ನ್ಯಾಯಾಲಯದಲ್ಲಿ ನಡೆದಿದ್ದು, ಇತ್ತೀಚೆಗೆ ಆರೋಪಿಗಳ ಪತ್ತೆಗಾಗಿ ವಾರಂಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಬೈ ಪೊಲೀಸರು ಮಂಗಳೂರಿಗೆ ಆಗಮಿಸಿದ್ದರು. ಆರೋಪಿಗಳು ತಮ್ಮ ಹೆಸರು ಮತ್ತು ವಿಳಾಸವನ್ನು ಬದಲಿಸುತ್ತಾ ತಲೆ ಮರೆಸಿಕೊಂಡಿದ್ದಾರೆ ಎಂದು ಮುಂಬೈ (ನಾಗಪುರ) ಪೊಲೀಸರು ತಿಳಿಸಿದ್ದಾರೆ.
ನಿಜವಾಯ್ತು ಪೂಜಾರಿ ಭವಿಷ್ಯ, ಘಟಾನುಘಟಿಗಳು ಬಂದ್ರು 'ಕೈ' ಹಿಡಿಯಲಿಲ್ಲ ಜನ..!