ಸರ್ಕಾರಿ ಅಧಿಕಾರಿಗಳಿಂದಲೇ ಲಾಕ್‌ಡೌನ್‌ ಉಲ್ಲಂಘನೆ!

Kannadaprabha News   | Asianet News
Published : May 03, 2020, 07:11 AM IST
ಸರ್ಕಾರಿ ಅಧಿಕಾರಿಗಳಿಂದಲೇ ಲಾಕ್‌ಡೌನ್‌ ಉಲ್ಲಂಘನೆ!

ಸಾರಾಂಶ

ಸರ್ಕಾರದ ಲಾಕ್‌ಡೌನ್‌ ಅದೇಶವನ್ನು ಸರ್ಕಾರಿ ಅಧಿಕಾರಿಗಳೇ ಉಲ್ಲಂಘಿಸಿದ ಘಟನೆ ಉಡುಪಿಯ ಪ್ರಗತಿ ಸೌಧದ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ನಡೆದಿದೆ.

ಉಡುಪಿ(ಮೇ.03): ಸರ್ಕಾರದ ಲಾಕ್‌ಡೌನ್‌ ಅದೇಶವನ್ನು ಸರ್ಕಾರಿ ಅಧಿಕಾರಿಗಳೇ ಉಲ್ಲಂಘಿಸಿದ ಘಟನೆ ಉಡುಪಿಯ ಪ್ರಗತಿ ಸೌಧದ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ನಡೆದಿದೆ.

ಲಾಕ್‌ಡೌನ್‌ ನಡುವೆ ಅರ್ಧದಷ್ಟುಸಿಬ್ಬಂದಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಈ ಕಚೇರಿಯಲ್ಲಿ 20ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರಸಭೆಯ ಪೌರಾಯುಕ್ತದ ಆನಂದ ಕಲ್ಲೋಳಿಕರ್‌ ದಾಳಿ ನಡೆಸಿದರು.

ಕೊರೋನಾ ಕಂಟಕದ ಮಧ್ಯೆ ನೀರಿನ ಸಂಕಷ್ಟ: ಮಾಹಾ ಮೊರೆ ಹೋದ ಬಿಎಸ್‌ವೈ...!

ಪೌರಾಯುಕ್ತರು ಬಂದು ಎಚ್ಚರಿಕೆ ನೀಡಿದ ಮೇಲೆ ಎಚ್ಚೆತ್ತ ಮ್ಯಾನೇಜರ್‌ ಕಚೇರಿಯನ್ನು ಮುಚ್ಚಿದರು. ಸಿಬ್ಬಂದಿ ಮೆಲ್ಲಗೆ ಜಾಗ ಖಾಲಿ ಮಾಡಿದರು. ಕಚೇರಿಯನ್ನು ಆರಂಭಿಸುವುದಕ್ಕೆ ಜಿಲ್ಲಾಧಿಕಾರಿ ಅನುಮತಿ ಪಡೆದು ಬರುವಂತೆ ಪೌರಾಯುಕ್ತರು ಆದೇಶ ನೀಡಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು