
ಹೊನ್ನಾವರ (ಜು.31): ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಯನ್ನೊಳಗೊಂಡ ದಂಡಿ ಚಲನಚಿತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಚಿತ್ರಿತವಾದ, ಜಿಲ್ಲೆಯ ಕಲಾವಿದರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡ ಈ ಚಿತ್ರವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಶಾಲೆಗಳಲ್ಲಿ ಪ್ರದರ್ಶಿಸಲು ಅನುಮತಿ ನೀಡಬೇಕು ಎಂದು ಚಿತ್ರ ನಿರ್ಮಾಣ ಸಂಸ್ಥೆ ಕಲ್ಯಾಣಿ ಪ್ರೊಡಕ್ಷನ್ ಸರ್ಕಾರವನ್ನು ವಿನಂತಿಸಿತ್ತು.
ಸರ್ಕಾರ ಚಿತ್ರ ವೀಕ್ಷಿಸಿ, ಪರಿಶೀಲಿಸಿ ಶಿಫಾರಸು ಮಾಡಲು 7 ಸದಸ್ಯರಿದ್ದ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ 30 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ವೀಕ್ಷಿಸಿದ ಸಮಿತಿಯು ಸ್ವಾತಂತ್ರ್ಯ ಪೂರ್ವದ ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕಥೆಯುಳ್ಳ ಈ ಚಿತ್ರ ಅಹಿಂಸೆ, ದೇಶಪ್ರೇಮಕ್ಕೆ ಮಹತ್ವ ನೀಡಿದೆ.
ಮುರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 'ವಿಕ್ರಾಂತ್ ರೋಣ' ತೋರಿಸಿದ ವಾರ್ಡನ್, ಕಿಚ್ಚ ಫ್ಯಾನ್ಸ್ ಗರಂ
ಜಾತ್ಯತೀತ ಮೌಲ್ಯಗಳಿವೆ. ಸಹಬಾಳ್ವೆಗೆ ಮಹತ್ವ ನೀಡಿದೆ. ಸೃಜನಶೀಲತೆ ಇದೆ. ಪ್ರಾದೇಶಿಕ ದೃಶ್ಯಗಳು ಚಿತ್ರಣಗೊಂಡಿವೆ. ನೈಜತೆಯಿಂದ ಕೂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಸ್ಕೃತಿಯ ಅಂಶವನ್ನು ಕೂಡಿದೆ. ಮಹಿಳೆಯರ ಪಾತ್ರ ಉತ್ತಮವಾಗಿ ಬಂದಿದೆ. ಚಳವಳಿಗಳ ಮಾಹಿತಿ ಇದೆ. ಎಲ್ಲ ವಯೋಮಾನದವರು ನೋಡಬಹುದು. ಚಲನಚಿತ್ರ ಮಕ್ಕಳ ವೀಕ್ಷಣೆಗೆ ಯೋಗ್ಯವಾಗಿದೆ ಎಂದು ಶಿಫಾರಸು ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 9886852640, 9686133996ನ್ನು ಸಂಪರ್ಕಿಸಬಹುದಾಗಿದೆ.
ದಂಡಿ ಚಿತ್ರ ತಾರಾ, ಸುಚೇಂದ್ರ ಪ್ರಸಾದ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿದ್ದು, ವಿಶಾಲ್ ರಾಜ್ ನಿರ್ದೇಶನದ ಈ ಚಿತ್ರವನ್ನು ಉಷಾ ರಾಣಿ ನಿರ್ಮಿಸಿದ್ದಾರೆ. ಇವರ ಪುತ್ರ ಯುವಾನ್ ದೇವ್ ಚಿತ್ರದ ನಾಯಕನಾಗಿ ಈ ಚಿತ್ರದ ಮೂಲಕ ಪರಿಚಯ ಆಗುತ್ತಿದ್ದಾರೆ. ಶಾಲಿನಿ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಗಂ ಅವರ ಕಾದಂಬರಿ ಆಧರಿಸಿದ ಚಿತ್ರ ಇದಾಗಿದೆ. ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರವನ್ನು ಅರ್ಪಿಸಿದ್ದು, ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಈ ಕತೆಯನ್ನು ಚಿತ್ರ ಮಾಡುತ್ತಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.
ಹಾಲಿವುಡ್ ಸಿನಿಮಾ ನೋಡಿದಾಗೆ ಆಯ್ತು; 'ವಿಕ್ರಾಂತ್ ರೋಣ'ನ ಹೊಗಳಿದ ಕಬ್ಜ ನಿರ್ದೇಶಕ ಆರ್.ಚಂದ್ರು
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿಶಾಲ್ ರಾಜ್, ‘ತುಂಬಾ ಪ್ರಮುಖವಾದ ಕತೆಯನ್ನು ಸಿನಿಮಾ ಮಾಡಿದ ಖುಷಿ ಇದೆ. ಸ್ವಾತಂತ್ರ್ಯ ಪೂರ್ವದ ನಮ್ಮ ಚರಿತ್ರೆಯನ್ನು ನಾವು ಒಮ್ಮೆ ತೆರೆ ಮೇಲೆ ನೋಡಿದರೆ ಹೇಗಿರುತ್ತದೆ ಎನ್ನುವ ಕುತೂಹಲದಲ್ಲಿ ಈ ಚಿತ್ರ ನೋಡಬಹುದು. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ. ಇಂಥ ಕತೆಗಳನ್ನು ಸಿನಿಮಾ ಮಾಡಬೇಕು ಎಂಬುದು ನನ್ನ ಕನಸು. ಆ ನಿಟ್ಟಿನಲ್ಲಿ ದಂಡಿ ಸಿನಿಮಾ ಮೂಡಿ ಬಂದಿದೆ. ಇದಕ್ಕೆ ನಿರ್ಮಾಪಕರು ಹಾಗೂ ತಾರಾ, ಸುಚೇಂದ್ರ ಪ್ರಸಾದ್ ಜತೆಯಾಗಿ ನಿಂತರು. ಹೀಗಾಗಿ ಅಂದುಕೊಂಡಂತೆ ಸಿನಿಮಾ ಮೂಡಿ ಬಂದಿದೆ’ ಎಂದು ವಿಶಾಲ್ ರಾಜ್ ತಿಳಿಸಿದ್ದಾರೆ.