ಗದಗ: ಬೆಳೆಗೆ ಜಲ ದಿಗ್ಬಂಧನ, ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

By Girish Goudar  |  First Published Jul 31, 2022, 3:24 PM IST

ಏಕಾಏಕಿ ಸುರಿದ ಮಳೆ ಅನ್ನದಾತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ


ಗದಗ(ಜು.31):  ಇನ್ನೇನು 10/15 ದಿನ ಕಳೆದಿದ್ರೆ ಬೆಳೆ ಫಲ ನೀಡ್ತಿತ್ತು. ಮಳೆರಾಯನ ಕಣ್ಣಾ ಮುಚ್ಚಾಲೆ ಆಟದ ಮಧ್ಯೆ ಅಷ್ಟಿಷ್ಟು ಫಸಲೂ ಬಂದಿತ್ತು. ಬಂದಿರೋ ಬೆಳೆ ಕೈ ಸೇರಿದ್ರೆ ಮಾಡಿರೋ ಸಾಲ ತೀರಿಸಿ ಆರಾಮಾಗಿರಬಹುದು ಅಂತಾ ರೈತ್ರು ಪ್ಲಾನ್ ಮಾಡಿದ್ರು. ಆದ್ರೆ, ಏಕಾಏಕಿ ಸುರಿದ ಮಳೆ ಅನ್ನದಾತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಎರಡು ದಿನದಿಂದ ಸುರಿದ ಮಳೆ, ಬೆಳೆಯನ್ನ ಸಂಪೂರ್ಣ ನೆಲ ಕಚ್ಚುವಂತೆ ಮಾಡಿದೆ. ಗದಗ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಸುರೀತಿರೋ ಮಳೆ ಕೆಲೆವೆಡೆ ಅವಾಂತರ ಸೃಷ್ಟಿಸಿದೆ. ಮಳೆ ಅಬ್ಬರಕ್ಕೆ ನಾಗಾವಿ ಗ್ರಾಮದ ನೂರಾರು ಎಕರೆ ಜಮೀನು ನೀರಿನಲ್ಲಿ ನಿಂತಿದೆ. ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದ, ಮೆಕ್ಕೆ ಜೋಳ, ಹೆಸರು, ಬಾಳೆ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ನಾಗಾವಿ ಗ್ರಾಮದ ಸುತ್ತಲ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದು ಬರ್ತಿರೋ ಕಾರಣ, ಜಮೀನುಗಳು ಕೆರೆಯಂತಾಗಿವೆ. ಕೊಂಚಮಟ್ಟಿಗೆ ನೀರಿನ ಪ್ರಮಾಣ ಕಡಿಮೆಯಾಗಿದ್ರೂ  ಎಲೆಗಳಿಗೆ ಕೆಸರು ಮೆತ್ಕೊಂಡು ಹಾಳಾಗುವ ಪರಿಸ್ಥಿತಿಯಲ್ಲಿವೆ. ಎಕರೆಗೆ 20 / 30 ಸಾವಿರ ರೂಪಾಯಿ ಖರ್ಚುಮಾಡಿ ಬೆಳೆ ಬೆಳೆಯಲಾಗಿದೆ. ಸಾಲ ಮಾಡಿ ಬೆಳೆದಿದ್ದ ಬೆಳೆ ನೀರು ಪಾಲಾಗಿದೆ ಅನ್ನೋದು ಅನ್ನದಾತನ ಅಳಲು.

ಕಳೆದ ಎರಡು ದಿನದಿಂದ ಗದಗ ತಾಲೂಕಿನ ಅಡವಿ ಸೋಮಾಪುರ ವ್ಯಾಪ್ತಿಯಲ್ಲಿ 100 ಎಂಎಂ ಮಳೆಯಾದ ಬಗ್ಗೆ ಮಾಹಿತಿ ಇದೆ. ಸೋಮಾಪುರ ಪಕ್ಕದ ನಾಗವಿಯಲ್ಲೂ ಬಿರುಸಿನ ಮಳೆಯಾಗಿದ್ದು ತಗ್ಗು ಪ್ರದೇಶ ಆಗಿರೋದ್ರಿಂದ ಗ್ರಾಮದ ಕಡೆಗೆ ಅತಿ ಹೆಚ್ಚು ನೀರು ಹರಿದು ಬಂದಿದೆ.ತೇವ ಹೆಚ್ಚಾಗಿ ಬೆಳೆಗಳು ಕೊಳೆಯುವ ಹಂತ ತಲುಪಿವೆ.. ಇಷ್ಟೆಲ್ಲ ಅವಾಂತ್ರ ಆದ್ರೂ ಯಾವೊಬ್ಬ ಅಧಿಕಾರಿ, ಜನ ಪ್ರತಿನಿಧಿಗಳು ಇಲ್ಲಿಗೆ ಬಂದಿಲ್ಲ ಅನ್ನೋದು ರೈತ್ರ ಆಕ್ರೋಶ.. 

Tap to resize

Latest Videos

undefined

ಅಪೂರ್ಣಗೊಂಡ ಕಾಲುವೆ: ಮರು ನಿರ್ಮಾಣಕ್ಕೆ ಅನುದಾನ

ಆರಂಭದಲ್ಲಾದ ಉತ್ತಮ ಮಳೆಯಿಂದಾಗಿ ಹೆಸರು ಬೆಳೆ ಚೆನ್ನಾಗಿ ಬೆಳೆದಿತ್ತು. ಇನ್ನೇನು 20 ದಿನದಲ್ಲಿ ಕಾಳು ರೈತ್ರ ಕೈ ಸೇರ್ತಿತ್ತು. ಆದ್ರೆ ಅಬ್ಬರದ ಮಳೆ ರೈತ್ರ ಕನಸಿನ ಮೇಲೂ ನೀರೆರಚಿದೆ.. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಅನ್ನದಾತ ಬೀದಿಗೆ ಬೀಳುವಹಂತದಲ್ಲಿದ್ದಾನೆ. ಈಗ್ಲಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು, ಪರಿಸ್ಥಿತಿ ಅವಲೋಕಿಸ್ಬೇಕಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸ್ಬೇಕಿದೆ. 
 

click me!