ಕೊರೋನಾ ಸಂಕಷ್ಟ : ಸಾಲ ಮರು ಪಾವತಿಗೆ ರೈತರಿಗೆ ಸಮಯ

By Kannadaprabha NewsFirst Published Jun 17, 2021, 9:22 AM IST
Highlights
  • ಮುಂಗಾರು ಆರಂಭಗೊಂಡಿದ್ದು,ಕೃಷಿ ಚಟುವಟಿಕೆಯಲ್ಲಿ ತೊಡಗಿದ  ರೈತರು
  • ತಾಲೂಕು ಮತ್ತು ಗ್ರಾಮೀಣ ಭಾಗದ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಸಕಾಲದಲ್ಲಿ ಸಾಲ
  •  ಸಾಲ ಮರುಪಾವತಿಗೆ ಮೂರು ತಿಂಗಳು ಕಾಲಾವಕಾಶ 

ತುಮಕೂರು (ಜೂ.17):  ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ತಾಲೂಕು ಮತ್ತು ಗ್ರಾಮೀಣ ಭಾಗದ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಸಕಾಲದಲ್ಲಿ ಸಾಲ ನೀಡುತ್ತಿದ್ದು, ಸಾಲ ಪಡೆದ ರೈತರು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕ್‌ ಷೇರು ಶೇ.30 ರಷ್ಟಿದ್ದರೆ, ಶೇ.70 ರಷ್ಟುಇತರೆ ಬ್ಯಾಂಕುಗಳು ಸಾಲ ನೀಡಲಿವೆ. ನಮ್ಮ ಆರ್ಥಿಕ ಲಭ್ಯತೆ ನೋಡಿಕೊಂಡು ಸಾಲ ನೀಡುತ್ತಿದ್ದೇವೆ. ಸಾಲ ಪಡೆದ ರೈತರು ಒಂದು ವರ್ಷದ ನಂತರ ಆ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಸಾಲ ಪಡೆಯುತ್ತಾನೆ. ಇದರ ಜೊತೆಗೆ ಹೊಸ ಸಾಲಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಬೀದಿ ವ್ಯಾಪಾರಿಗಳಿಗೆ 2 ಸಾವಿರ ರು. ಸಹಾಯಧನ : ಸಾಲ ಖಾತೆಗೆ ವಜಾ ಮಾಡದಂತೆ ಸೂಚನೆ .

ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಲ ಮರುಪಾವತಿಗೆ ಮೂರು ತಿಂಗಳು ಕಾಲಾವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ರೈತರ ಸಾಲ ಮರುಪಾವತಿಗೆ ಸಮಯಾವಕಾಶ ಸಿಕ್ಕಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದರು.

ಚೆಕ್‌ ಮೂಲಕ ಹಣ ಪಾವತಿ ಇನ್ನು ಸುಲಭವಿಲ್ಲ, ಆರ್‌ಬಿಐ ಹೊಸ ನಿಯಮ ಜಾರಿ! .

ಜನಸಾಮಾನ್ಯರಿಗೆ ಸಂಕಷ್ಟ:  ಇಂಧನ ಬೆಲೆ ಹೆಚ್ಚಳದಿಂದ ರೈತರು ಸೇರಿದಂತೆ ಜನಸಾಮಾನ್ಯರು ತೀವ್ರ ಸಂಕಷ್ಟಎದುರಿಸುವಂತಾಗಿದೆ. ರೈತರು ಟ್ರ್ಯಾಕ್ಟರ್‌ಗೆ ಡೀಸೆಲ್‌ ಹಾಕಿಸಲು ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಡಾ.ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್‌ ಖಚ್ಚಾ ತೈಲ ಬೆಲೆ 125 ಡಾಲರ್‌ ಇತ್ತು, ಆಗ 60 ರು.ಗೆ ಪೆಟ್ರೋಲ್‌, 50 ರು.ಗೆ ಡೀಸೆಲ್‌ ಸಿಗುತ್ತಿತ್ತು. ಈಗ ಒಂದು ಬ್ಯಾರಲ್‌ ಖಚ್ಚಾ ತೈಲ ಬೆಲೆ 71 ಡಾಲರ್‌ ಇದೆ. ಇವರು ಅರ್ಧದಷ್ಟುಇಳಿಸಬೇಕಿತ್ತು. ಅದನ್ನು ಬಿಟ್ಟು ಪ್ರತಿದಿನ ಇಂಧನ ಬೆಲೆ ಹೆಚ್ಚು ಮಾಡುತ್ತಿದ್ದಾರೆ. ಇದು ಯಾರೂ ಒಪ್ಪುವಂತಹುದಲ್ಲ, ಸರ್ಕಾರ ತೆರಿಗೆಗಳನ್ನು ರದ್ದುಪಡಿಸಿದರೆ ಕೇವಲ 30 ರೂ.ಗೆ ಪೆಟ್ರೋಲ್‌, ಡೀಸೆಲ್‌ ಕೊಡಬಹುದು ಎಂದು ಹೇಳಿದರು.

click me!