ಬಂಟ್ವಾಳ: ಮಳೆಗೆ ಧರೆಗುರುಳಿದ ಬೃಹತ್‌ ಗಾತ್ರದ ಮರ, ವಿದ್ಯುತ್ ಸಂಪರ್ಕ ಕಡಿತ!

Published : Jun 17, 2021, 09:12 AM ISTUpdated : Jun 17, 2021, 09:14 AM IST
ಬಂಟ್ವಾಳ: ಮಳೆಗೆ ಧರೆಗುರುಳಿದ ಬೃಹತ್‌ ಗಾತ್ರದ ಮರ, ವಿದ್ಯುತ್ ಸಂಪರ್ಕ ಕಡಿತ!

ಸಾರಾಂಶ

* ಕಡೇಶಿವಾಲಯದಲ್ಲಿ ಧರೆಗುರುಳಿದ ಬೃಹತ್‌ ಗಾತ್ರದ ಮರ * 5 ವಿದ್ಯುತ್ ಕಂಬಗಳಿಗೆ ಹಾನಿ, ವಿದ್ಯುತ್‌ ಸಂಪರ್ಕ ಕಡಿತ * ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ

ಬಂಟ್ವಾಳ(ಜೂ.17): ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದೆ. ಬುಧವಾರ ಜಿಲ್ಲೆಯ ಹಲವೆಡೆ ಭಾರೀಮಳೆ ಸುರಿದಿದ್ದು, ಬುಧವಾರ ಮಧ್ಯಾಹ್ನ ಸುರಿದ ಭಾರೀ ಗಾಳಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿ ಎಂಬಲ್ಲಿ ಬೃಹತ್‌ ಗಾತ್ರದ ಗೋಲಿ ಮರವೊಂದು ಧರೆಗುರುಳಿದೆ ಘಟನೆ ನಡೆದಿದೆ.

ಸಂಜೆ ಸುಮಾರು ನಾಲ್ಕರ ವೇಳೆಗೆ ಏಕಾಏಕಿ ಬೀಸಿದ ಗಾಳಿಗೆ ಬೃಹತ್‌ ಗಾತ್ರದ ಗೋಲಿ ಮರ ರಸ್ತೆಗೆ ಉರುಳಿದೆ. ನಿತ್ಯ ನೂರಾರು ವಾಹನಗಳು ಓಡಾಡೋ ಈ ರಸ್ತೆಗೆ ಮರ ಬಿದ್ದರೂ, ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನು ಮರ ಉರುಳಿಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಕೂಡ ಧರೆಗುರುಳಿವೆ.

ಇಲ್ಲಿನ ನಾಗೇಶ್‌ ಸಂಪೋಳಿ ಎಂಬುವವರ ಜಮೀನಿನಲ್ಲಿ ಇದ್ದ ಈ ಗೋಲಿ ಮರದ ಪಕ್ಕದಲ್ಲೇ ನಾಲ್ಕೈದು ಮನೆಗಳು ಇದ್ದವು. ಆದೃಷ್ಟವಶಾತ್‌ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ. ಘಟನೆ ಸಂಬಂಧ ಮೆಸ್ಕಾಂ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮರ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆ ಪ್ರದೇಶದಲ್ಲಿ ನಿನ್ನೆ(ಮಂಗಳವಾರ)ಯಿಂದಲೇ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

PREV
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌