ಉಪ ಚುನಾವಣೆ ಬಳಿಕ ಡಿಕೆಶಿ ಕನಸು ನುಚ್ಚು ನೂರು : ಭವಿಷ್ಯ

Kannadaprabha News   | Asianet News
Published : Nov 01, 2020, 09:01 AM ISTUpdated : Nov 01, 2020, 09:18 AM IST
ಉಪ ಚುನಾವಣೆ ಬಳಿಕ ಡಿಕೆಶಿ ಕನಸು ನುಚ್ಚು ನೂರು : ಭವಿಷ್ಯ

ಸಾರಾಂಶ

ರಾಜ್ಯದಲ್ಲಿ ಚುನಾವಣೆಯೊಂದು ಮುಕ್ತಾಯವಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಸು ನುಚ್ಚುನೂರಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. 

ತುಮ​ಕೂರು (ನ.01): ಉಪ ಚುನಾವಣೆಯ ಫಲಿತಾಂಶದಿಂದಾಗಿ ಕಾಂಗ್ರೆಸ್‌ ಒಡೆದ ಮನೆಯಾಗಲಿದ್ದು, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ. ಶಿವ​ಕು​ಮಾರ್‌ ಕನಸು ನುಚ್ಚು ನೂರಾ​ಗ​ಲಿದೆ ಎಂದು ಡಿಸಿಎಂ ಗೋವಿಂದ ಕಾರ​ಜೋಳ ಭವಿಷ್ಯ ನುಡಿದರು. 

ಅವರು ಶಿರಾ​ದಲ್ಲಿ ಮಾತ​ನಾಡಿದ ಅವರು, ಹಾಗೆಯೇ ಮತ್ತೆ ಮುಖ್ಯಮಂತ್ರಿ ಆಗುವು​ದಾಗಿ ಹೊರ​ಟಿ​ರುವ ಸಿದ್ದರಾಮಯ್ಯ ಅವ​ರಿಗೂ ಮುಖ​ಭಂಗ​ವಾ​ಗ​ಲಿದೆ ಎಂದರು.

ಗೊಲ್ಲರಹಟ್ಟಿಗಳಿಗೆ ಹೋದರೆ ಕಣ್ಣೀರು ಬರುತ್ತದೆ. ಈವ​ರೆಗೆ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಪಕ್ಷ​ಗಳು ಮೂಲ ಸೌಕರ್ಯ ಕಲ್ಪಿ​ಸಿಲ್ಲ. ಎಸ್‌​ಸಿ, ಎಸ್‌ಟಿ ಕಾಲೋನಿಯ ಸ್ಥಿತಿ ಕೂಡ ದಯನೀಯವಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಅನ್ನು ಇಲ್ಲಿ​ಯ​ವ​ರೆಗೆ ಬೆಂಬ​ಲಿಸಿ ತಪ್ಪು ಮಾಡಿ​ದ್ದೇ​ವೆಂಬು​ದಾಗಿ ಜನ​ರಿಗೆ ಅರಿ​ವಾ​ಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಪರ 'ಡಿ' ಬಾಸ್ ಪ್ರಚಾರ: ಡಿಕೆಶಿ ಹೇಳಿದ್ದು ಹೀಗೆ...! .

ಈಗಾಗಲೇ ರಾಜ್ಯದಲ್ಲಿ ಉಪ ಚುನಾವಣೆ ಸಮರ ಜೋರಾಗಿದೆ.  ಇದೇ ನವೆಂಬರ್ 3 ರಂದು ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ತಮ್ಮದೇ ಗೆಲುವಿಗಾಗಿ ಭಾರೀ ಪೈಪೋಟಿ ನಡೆಸುತ್ತಿವೆ.

PREV
click me!

Recommended Stories

ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋ ಮುಂದೆ ಜನಸಾಗರ, ಫ್ಯಾನ್ಸ್ ಚದುರಿಸಲು ಲಘು ಲಾಠಿ ಚಾರ್ಜ್
ಬಳ್ಳಾರಿಯಲ್ಲಿ ಹೊಯ್ಸಳರ ಕಾಲದ ಅಪರೂಪದ ವೀರಗಲ್ಲು ಪತ್ತೆ, ಚಿತ್ರದುರ್ಗದ ವೀರನ ಮರಣದ ಉಲ್ಲೇಖ!