ಕಾಂಗ್ರೆಸ್‌ ನುಡಿದಂತೆ ನಡೆಯುವ ಸರ್ಕಾರ: ಶ್ರೀನಿವಾಸ್‌

By Kannadaprabha News  |  First Published Aug 7, 2023, 6:12 AM IST

ನುಡಿದಂತೆ ನಡೆಯುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್‌ ಸರ್ಕಾರ ಎಂದು ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.


  ಗುಬ್ಬಿ:  ನುಡಿದಂತೆ ನಡೆಯುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್‌ ಸರ್ಕಾರ ಎಂದು ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಬೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ 5 ಯೋಜನೆಗಳನ್ನು ಘೋಷಣೆ ಮಾಡಿದ್ದು ಅದರಲ್ಲಿ ಮೂರನೇ ಯೋಜನೆಯದ ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿಗಳು ಕಲ್ಬುರ್ಗಿಯಲ್ಲಿ ಚಾಲನೆ ನೀಡಿದ್ದು, ಅದರಂತೆ ರಾಜ್ಯದ ಪ್ರತಿ ತಾಲೂಕುಗಳಲ್ಲಿ ಶಾಸಕರ ನೇತೃತ್ವದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ. ಈ ಯೋಜನೆ ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಅರ್ಜಿಗಳನ್ನು ಮಾಡಿಕೊಂಡಿದ್ದು ಎಷ್ಟೋ ಬಡಜನರ ಬದುಕಿಗೆ ಈ ಯೋಜನೆ ಅನುಕೂಲಕರವಾಗಿದೆ. ತಾಲೂಕಿನಲ್ಲಿ ಒಟ್ಟು 70566 ಕುಟುಂಬಗಳು ಇದ್ದು ಅದರಲ್ಲಿ 49900 ಜನ ನೋಂದಣಿ ಮಾಡಿದ್ದು ಇನ್ನೂ 20666 ಜನ ನೋಂದಣಿ ಮಾಡಿಕೊಂಡಿಲ್ಲ. ಅವರಿಗೂ ಸಹ ಮುಂದಿನ ಒಂದು ತಿಂಗಳಿನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕೆ ಸರ್ಕಾರದ ಯಾವುದೇ ನಿಬಂಧನೆಗಳನ್ನು ಮಾಡಿಲ್ಲ ಎಂದರು.

Latest Videos

undefined

ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ರೈತರಿಗೆ ಉಚಿತವಾಗಿ ಪಂಪ್‌ ಸೆಟ್ಟುಗಳಿಗೆ ವಿದ್ಯುತ್‌ ನೀಡಿದ ಪರಿಣಾಮ ರೈತರು ಅಭಿವೃದ್ಧಿಯಾಗಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ನೀಡುತ್ತಿರುವ ಪ್ರತಿ ಯೋಜನೆಯು ಸಹ ಮುಂದಿನ ಭವಿಷ್ಯತ್ಕಾಲದಲ್ಲಿ ಉತ್ತಮ ಯೋಜನೆಗಳಾಗಿ ರೂಪುಗೊಳ್ಳುತ್ತವೆ ಎಂದು ತಿಳಿಸಿದರು.

ಈ ವೇಳೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕರಿಯಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಬಿ.ಆರತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ ಕುಮಾರ್‌, ಪಟ್ಟಣ ಪಂಚಾಯಿತಿ ಸದಸ್ಯರಾದ ರಂಗಸ್ವಾಮಿ, ಶೌಕತ್‌ ಅಲಿ, ಕೃಷ್ಣ ಮೂರ್ತಿ, ಶಶಿಕುಮಾರ್‌, ಬಿದರೆ ಗ್ರಾಮ ಪಂಚಾಯತಿ ಅಧ್ಯಕ್ಷ ಯತೀಶ್‌, ನಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ವತ್ಸಲ, ಬೆಸ್ಕಾಂನ ಕಾಂತರಾಜು, ರಾಜೇಶ್‌, ಬೆಸ್ಕಾಂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಗ್ಯಾರಂಟಿಗಳಿಂದ ಜನರ ಬದುಕಲ್ಲಿಬದಲಾವಣೆ

ಚಿಕ್ಕಬಳ್ಳಾಪುರ (ಆ.06): ಅವರು ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ, ಸರ್ಕಾರದ 5 ಗ್ಯಾರಂಟಿಗಳ ಮೊದಲನೆ ಯೋಜನೆ ‘ಗೃಹ ಜ್ಯೋತಿ’ ಯೋಜನೆ. ಈ ಯೋಜನೆ ಸರ್ವರಿಗೂ ಉಪಯೋಗಕಾರಿಯಾಗಿದ್ದು, ಗರಿಷ್ಠ 200 ಯೂನಿಟ್‌ ವರೆಗೂ ಗೃಹ ಬಳಕೆಯ ಉಚಿತ ವಿದ್ಯುತ್‌ ನೀಡುವ ಯೋಜನೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನ ಆಗಲಿದೆ ಎಂದರು.

ಜನರ ಬದುಕಿನಲ್ಲಿ ಬದಲಾವಣೆ: ಗೃಹಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗಳು ಸೇರಿದಂತೆ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ನಮ್ಮ ನೂತನ ಸರ್ಕಾರ ಅಲ್ಪ ಅವಧಿಯಲ್ಲಿ ತ್ವರಿತವಾಗಿ ಹಾಗೂ ಸಮರ್ಪಕವಾಗಿ ಜಾರಿಗೆ ತಂದಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2.51 ಕೋಟಿ ರಿಯಾಯಿತಿ ಜನರಿಗೆ ಸಿಕ್ಕಿದೆ. ಈ ಯೋಜನೆಯಿಂದ ಜನರ ಸಾಮಾಜಿಕ ಬದುಕಿನಲ್ಲಿ ಹೆಚ್ಚಿನ ಬದಲಾವಣೆ ತಂದಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. 

ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಆದ್ಯತೆ ನೀಡಿ: ಶಾಸಕ ಪ್ರದೀಪ್‌ ಈಶ್ವರ್‌

ಇಂತಹ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದಿಸಿದರು. ಪದವಿ ಪಡೆದು 6 ತಿಂಗಳ ಒಳಗೆ ಉದ್ಯೋಗ ಸಿಗದವರಿಗೆ ಯುವ ನಿಧಿ ಯೋಜನೆಯಡಿ ಪ್ರೋತ್ಸಾಹ ಧನ ನೀಡುವ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಮಾತನಾಡಿ. ಜಿಲ್ಲೆಯಲ್ಲಿ 3.28ಲಕ್ಷ ಮಂದಿ ವಿದ್ಯುತ್‌ ಗ್ರಾಹಕರಿದ್ದಾರೆ. ಈ ಪೈಕಿ ಜೂನ್‌ 18 ರಿಂದ ಜಿಲ್ಲೆಯಲ್ಲಿ ಈವರೆಗೆ 2.10 ಲಕ್ಷ ಗ್ರಾಹಕರನ್ನು ನೋಂದಾಯಿಸಿಲಾಗಿದೆ. ಈಪೈಕಿ 76,434 ಗ್ರಾಹಕರಿಗೆ ಶೂನ್ಯ ಬಿಲ್‌ ಅನ್ನು ಈವರೆಗೆ ವಿತರಿಸಲಾಗಿದೆ ಎಂದರು.

click me!