'ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಸರಕಾರ ಯಶಸ್ವಿ'

By Web DeskFirst Published Oct 7, 2019, 10:55 AM IST
Highlights

ನೆರೆ ಹಾವಳಿ ಸಂದರ್ಭದಲ್ಲಿ ನಿಧನರಾದ ಕುಟುಂಬಗಳಿಗೆ ತಲಾ 10 ಲಕ್ಷ, ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹೀಗೆ 1 ಲಕ್ಷ, 25 ಸಾವಿರ, 10 ಸಾವಿರ ಹೀಗೆ ಹಾನಿಗೆ ತಕ್ಕಂತೆ ಪರಿಹಾರವನ್ನು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ನೀಡಲಾಗಿತ್ತಿದೆ| ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದ ಶಾಸಕ ಆನಂದ ಮಾಮನಿ| ನಮ್ಮ ರಾಜ್ಯ ನಾಯಕರು ಕೇಂದ್ರಕ್ಕೆ ನೆರೆ ಹಾನಿ ಕುರಿತು ಮನವರಿಕೆ ಮಾಡಿ 1200 ಕೋಟಿ ಕೇಂದ್ರದ ತುರ್ತು ನೆರವು ಪಡೆದುಕೊಂಡಿದ್ದು, ನೆರೆಗೆ ಹಾನಿಯಾಗಿರುವ ರೈತರ ಬೆಳೆಗಳಿಗೂ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ|

ಯರಗಟ್ಟಿ(ಅ.7): ಎಲ್ಲಮ್ಮ ಕ್ಷೇತ್ರದಲ್ಲಿ ಮಲಪ್ರಭಾ ನದಿಯಿಂದ ನೆರೆ ಹಾವಳಿಗೆ ಮುನವಳ್ಳಿ ಸೇರಿ ಹನ್ನೊಂದು ಹಳ್ಳಿಗಳು ತುತ್ತಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 28.56 ಕೋಟಿ ಹಣ ನೆರೆ ಹಾವಳಿ ಸಂದರ್ಭದಲ್ಲಿ ನಿಧನರಾದ ಕುಟುಂಬಗಳಿಗೆ ತಲಾ 10 ಲಕ್ಷ, ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹೀಗೆ 1 ಲಕ್ಷ, 25 ಸಾವಿರ, 10 ಸಾವಿರ ಹೀಗೆ ಹಾನಿಗೆ ತಕ್ಕಂತೆ ಪರಿಹಾರವನ್ನು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ನೀಡಲಾಗಿತ್ತಿದ್ದು, ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಸಮೀಪದ ಮೆಳ್ಳಕೇರಿ ಗ್ರಾಮದ ಪಿಕೆಪಿಎಸ್‌ ಮೂಲಕ ರೈತರಿಗೆ ಸಾಲ ವಿತರಿಸಿ ಮಾತನಾಡಿದ ಅವರು, ನಮ್ಮ ರಾಜ್ಯ ನಾಯಕರು ಕೇಂದ್ರಕ್ಕೆ ನೆರೆ ಹಾನಿ ಕುರಿತು ಮನವರಿಕೆ ಮಾಡಿ 1200 ಕೋಟಿ ಕೇಂದ್ರದ ತುರ್ತು ನೆರವು ಪಡೆದುಕೊಂಡಿದ್ದು, ನೆರೆಗೆ ಹಾನಿಯಾಗಿರುವ ರೈತರ ಬೆಳೆಗಳಿಗೂ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಪಿಕೆಪಿಎಸ್‌ ಅಧ್ಯಕ್ಷ ಬಿ.ಕೆ.ಪಾಟೀಲ, ಉಪಾಧ್ಯಕ್ಷ ಗೂಳಪ್ಪ ಭಾಂವಿಕಟ್ಟಿ, ಸಂಗಪ್ಪ ಬೆಲ್ಲದ, ಗ್ರಾ.ಪಂ.ಅಧ್ಯಕ್ಷ ಕರೆಪ್ಪ ಬಾಚಗೌಡ್ರ, ಮಾಜಿ ಸೈನಿಕ ಕರೆಪ್ಪ ಭಾಂವಿಕಟ್ಟಿ, ಬಸಪ್ಪ ಮಾಯಣ್ಣಿ, ಬಿಡಿಸಿಸಿ ಬ್ಯಾಂಕ್‌ ನಿಯಂತ್ರಣಾಧಿಕಾರಿ ಸಿ.ಆರ್‌.ಪಾಟೀಲ, ಬ್ಯಾಂಕ್‌ ನಿರೀಕ್ಷಕ ಶಶಿಕಾಂತ ಗೋಣಿ, ಮಹಾದೇವ ಸಿದ್ದನ್ನವರ, ಶಂಕರ ಇಟ್ನಾಳ, ನಾಗಪ್ಪ ಪುಂಜಿ, ರಾಮನಗೌಡ ಗಂಗರಡ್ಡಿ, ಈರಣ್ಣ ಚಂದರಗಿ, ಬಸವರಾಜ ಹಸಬಿ, ಪಿಕೆಪಿಎಸ್‌ ಸರ್ವ ಸದಸ್ಯರು ಉಪಸ್ಥಿತರಿದ್ದರು.
 

click me!