ಫಾಜಿಲ್‌ ಕುಟುಂಬಕ್ಕೂ ಪರಿಹಾರ: ಇದ್ರಲ್ಲಿ ರಾಜಕೀಯ ಬೇಡ, ಬಿಜೆಪಿ ಶಾಸಕ ರಾಜೂಗೌಡ

Published : Aug 03, 2022, 05:00 AM IST
ಫಾಜಿಲ್‌ ಕುಟುಂಬಕ್ಕೂ ಪರಿಹಾರ: ಇದ್ರಲ್ಲಿ ರಾಜಕೀಯ ಬೇಡ, ಬಿಜೆಪಿ ಶಾಸಕ ರಾಜೂಗೌಡ

ಸಾರಾಂಶ

ಪ್ರವೀಣನಂತೆ ಫಾಜಿಲ್‌ ಕುಟುಂಬದವರನ್ನೂ ಸಿಎಂ ಭೇಟಿ ಮಾಡ್ತಾರೆ, ಹಿಂದೂ ಮುಸ್ಲಿಂ ಬೇಧ ಬೇಡ, ನಾವೆಲ್ಲರೂ ಒಂದೇ:ಶಾಸಕ ರಾಜೂಗೌಡ

ಯಾದಗಿರಿ(ಆ.03): ಹಿಂದೂ ಮುಸ್ಲಿಂ ಅನ್ನೋ ಬೇಧ ಬೇಡ, ನಾವೆಲ್ಲ ಒಂದೇ. ಮಂಗಳೂರಿನ ಫಾಜಿಲ್‌ ಕುಟುಂಬದವರನ್ನೂ ಸಿಎಂ ಭೇಟಿಯಾಗಿ ಸಾಂತ್ವನ ಹೇಳುತ್ತಾರೆ ಎಂದು ಸುರಪುರ ಶಾಸಕ, ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ, ಬಿಜೆಪಿ ರಾಜ್ಯ ಮುಖಂಡ ನರಸಿಂಹ ನಾಯಕ್‌ (ರಾಜೂಗೌಡ) ಹೇಳಿದರು. ಯಾದಗಿರಿಯಲ್ಲಿ ಮಂಗಳವಾರ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತದ್ದರು. ಮಂಗಳೂರಿನಲ್ಲಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ಕುಟುಂಬವನ್ನು ಖುದ್ದು ಭೇಟಿಯಾಗಿ ಸಾಂತ್ವನ ಹೇಳಿ, ಪರಿಹಾರ ವಿತರಿಸಿದ ಸಿಎಂ, ಅಲ್ಲಿಯೇ ಫಾಜಿಲ್‌ ಕೊಲೆ ವಿಚಾರದಲ್ಲಿ ಪರಿಹಾರವಿರಲಿ, ಸಾಂತ್ವನ ಹೇಳದ ಬಗ್ಗೆ ಟೀಕೆಗಳು ಕೇಳಿಬರುತ್ತಿವೆಯಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಸಿಎಂ ಅವರ ಜೊತೆ ಮಾತನಾಡಿದ್ದೇನೆ. ಒಂದು ವಾರದಲ್ಲಿ ಅಲ್ಲಿಗೆ ಭೇಟಿ ನೀಡುತ್ತಾರೆ. ಯಾವುದೇ ಬೇಧ ಇಲ್ಲ ಎಂದರು.

ಇನ್ನು, ಹಿಂದೂ ಮುಸ್ಲಿಂ ಭಾವೈಕ್ಯತೆ ಕದಡುವ ಪ್ರಚೋದನಕಾರಿ ಹೇಳಿಕೆಗಳನ್ನು ಯಾರೂ ನೀಡದಂತೆ ಮನವಿ ಮಾಡಿದ ರಾಜೂಗೌಡ, ನಮ್ಮ ಪಕ್ಷದವರೇ ಇರಲಿ ಅಥವಾ ಯಾರೇ ಇರಲಿ ಹಿರಿಯ ನಾಯಕರುಗಳು ಕೋಮುಸಾಮರಸ್ಯ ಕೆರಳಿಸುವ ಪ್ರಯತ್ನ ಬೇಡ ಎಂದರು. ಕೊಲೆಯಾದ ಮೂವರು ಹುಡುಗರು ನಮ್ಮವರು; ಕರ್ನಾಟಕ ನಾಡಿನ ಮಾತೆಯ ಮಕ್ಕಳಾಗಿದ್ದಾರೆ. ಯಾರ ಮಕ್ಕಳು ಮಕ್ಕಳೇ. ಮಕ್ಕಳಿಗೆ ಯಾವುದೇ ಜಾತಿ ಬೇದ ಭಾವ ಇರುವದಿಲ್ಲ. ತಂದೆ-ತಾಯಿಗೆ ಮಕ್ಕಳು ಮಕ್ಕಳೇ, ಕೊಲೆ ಘಟನೆಗಳು ನಡೆಯಬಾರದು ಎಂದರು.

ಮಂಗಳೂರು ಸರಣಿ ಕೊಲೆ, ಪ್ರವೀಣ್ ಹತ್ಯೆಗೆ ಕೇರಳ ಲಿಂಕ್, ಫಾಜಿಲ್‌ ಕೇಸ್‌ನಲ್ಲಿ ಸಕ್ಸಸ್!

ಸೂಲಿಬೆಲೆ ಪರ ರಾಜೂಗೌಡ ಬ್ಯಾಟಿಂಗ್‌ :

ಬಿಜೆಪಿ ನಾಯಕರ ವಿರುದ್ಧ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಕುರಿತು ಮಾತನಾಡಿದ ಶಾಸಕ ರಾಜೂಗೌಡ, ಬಿಜೆಪಿ ಅಧಿಕಾರಕ್ಕೆ ಬರಲು ಸೂಲಿಬೆಲೆ ಅವರ ಪ್ರಯತ್ನವೂ ಇದೆ. ಬಿಜೆಪಿಯಲ್ಲಿ ಯುವಕರು ಇಲ್ಲದಿದ್ದರೆ ಪಕ್ಷವಿಲ್ಲ, ನಮ್ಮನ್ನು ಅಧಿ​ಕಾರಕ್ಕೆ ತಂದು ಎಂಎಲ್‌ಎ ಮಾಡಲು ಕಾರ್ಯಕರ್ತರು ಶ್ರಮಪಟ್ಟಿರುತ್ತಾರೆ. ಅವರಿಗೆ ನೋವಾದಾಗ ಸಮಸ್ಯೆ ಬಗಹರಿಸಬೇಕು ಎಂದರು.

ಈ ಘಟನೆಗಳಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುತ್ತದೆ, ಆಗವರು ಬಯ್ಯುತ್ತಾರೆ. ಅವರು (ಕಾರ್ಯಕರ್ತರು) ಪಕ್ಷ ಬಿಟ್ಟು ಹೋದರೆ ಏನು ಆಗಲ್ಲವೆನ್ನಬಾರದು ಎಂದು ಕಾರ್ಯಕರ್ತರ ಟೀಕಿಸಿದ್ದ ತಮ್ಮದೇ ಪಕ್ಷದ ಮುಖಂಡರಿಗೆ ಬುದ್ಧಿಮಾತು ಹೇಳಿದ ಅವರು, ಕಾರ್ಯಕರ್ತರು ಇರದಿದ್ದರೆ ನಾವು ಝೀರೋ ಆಗುತ್ತೇವೆಂದರು.
 

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!