ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭ: ಕಾಫಿನಾಡಿನಿಂದಲೇ ಒತ್ತುವರಿ ಭೂಮಿ ನಿರ್ಧಾರಕ್ಕೆ ಚಾಲನೆ

By Govindaraj S  |  First Published Aug 10, 2024, 6:05 PM IST

ಒತ್ತುವರಿ ಮಾಡಿ ಕಾಫಿ ಇನ್ನಿತರೆ ತೋಟದ ಬೆಳೆಗಳನ್ನು ಬೆಳೆದಿರುವ ಕಂದಾಯ ಭೂಮಿಯನ್ನು ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ಕಡೆಗೂ ಚಾಲನೆ ಸಿಕ್ಕಿದಿದೆ. ಸರ್ಕಾರದ ಈ ನಿರ್ಧಾರ ಕಾಫಿನಾಡಿನಿಂದಲೇ ಜಾರಿ ಆಗುತ್ತಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.10): ಒತ್ತುವರಿ ಮಾಡಿ ಕಾಫಿ ಇನ್ನಿತರೆ ತೋಟದ ಬೆಳೆಗಳನ್ನು ಬೆಳೆದಿರುವ ಕಂದಾಯ ಭೂಮಿಯನ್ನು ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ಕಡೆಗೂ ಚಾಲನೆ ಸಿಕ್ಕಿದಿದೆ. ಸರ್ಕಾರದ ಈ ನಿರ್ಧಾರ ಕಾಫಿನಾಡಿನಿಂದಲೇ ಜಾರಿ ಆಗುತ್ತಿದೆ. ಗುತ್ತಿಗೆ ನೀಡುವ ಪ್ರಕ್ರಿಯೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಒತ್ತುವರಿದಾರರಿಂದ ಅರ್ಜಿ ಆಹ್ವಾನಿಸಿದ್ದಾರೆ.ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ಅರ್ಜಿಗಳನ್ನು ಸಲ್ಲಿಸಲು ಇಂದಿನಿಂದ 90 ದಿನಗಳ ಕಾಲಾವಕಾಶ ನೀಡಿದ್ದಾರೆ.

Tap to resize

Latest Videos

undefined

ಅನಧಿಕೃತ ಸಾಗುವಳಿ ಭೂಮಿ: ರಾಜ್ಯದ ಹಾಸನ ಜಿಲ್ಲೆಯಲ್ಲಿ 29,348 ಎಕ್ರೆ ಕೊಡಗು  26 ,250, ಚಿಕ್ಕಮಗಳೂರಿನಲ್ಲಿ 20,844 ಉಡುಪಿಯಲ್ಲಿ 398 ಎಕರೆ ಸೇರಿದಂತೆ ಒಟ್ಟು 76,844 ಎಕರೆ ಪ್ರದೇಶ ಅನಧಿಕೃತ ಸಾಗುವಳಿಯನ್ನು ರೈತರು ಮಾಡುತ್ತಿದ್ದಾರೆ. ಅವರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ಸಿಕ್ಕಿದೆ. 1_1_2005 ರ ಪೂರ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಜಮೀನನ್ನು ಗುತ್ತಿಗೆ ನೀಡುವ ಬಗ್ಗೆ ನಿಗಧಿತ ನಮೂನೆ 9 ರಲ್ಲಿ ಅರ್ಜಿಯನ್ನು ತಹಸೀಲ್ದಾರ್ ಅವರ ಕಚೇರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕಾಗಿ ಭ್ರಷ್ಟಾಚಾರಕ್ಕೋಸ್ಕರ ಪಾದಯಾತ್ರೆ: ಸಚಿವ ಈಶ್ವರ್ ಖಂಡ್ರೆ

ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ತರೀಕೆರೆ ತಾಲ್ಲೂಕುಗಳ ತಹಸೀಲ್ದಾರ್ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಜಮೀನನ್ನು ಗುತ್ತಿಗೆ ನೀಡುವ ಸಲುವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.ಪ್ಲಾಂಟೇಷನ್ ಜಮೀನು ಒತ್ತುವರಿದಾರರು ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿರುವ ಜಿಲ್ಲಾಧಿಕಾರಿಗಳು ನಿಗಧಿತ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕ್ಯೂಆರ್ ಕೋಡ್ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ..

ದಶಕಗಳ ಕೂಗಿಗೆ ಸ್ಪಂದನೆ: ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಬೇಕು ಎನ್ನುವ ದಶಕಗಳ ಕೂಗಿಗೆ ಸ್ಪಂದನೆ ಸಿಕ್ಕಂತಾಗಿದೆ ಆದರೂ ಸರ್ಕಾರ ಅರ್ಜಿ ಜೊತೆಗೆ ಕೇಳಿರುವ ದಾಖಲೆಗಳನ್ನು ಒದಗಿಸಲು ಒತ್ತುವರಿದಾರರಿಗೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಒತ್ತುವರಿದಾರರಿಗೆ ಇದರ ಲಾಭ ಸಿಗುವುದಿಲ್ಲ ಎಂದು ಬೆಳೆಗಾರರು ಹೇಳುತ್ತಿದ್ದಾರೆ.ಈ ಹಿಂದೆ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದರು. 

ಒಳ್ಳೆಯ ಸರ್ಕಾರ ಸಹಿಸಲು ಬಿಜೆಪಿಗೆ ಆಗದೆ ಪಾದಯಾತ್ರೆ: ಸಚಿವ ಜಮೀರ್ ಅಹ್ಮದ್

ಅಂದಿನ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ನಗರಕ್ಕೇ ಬಂದು ಬೆಳೆಗಾರರ ಜೊತೆ ಸಮಾಲೋಚನೆ ನಡೆಸಿ ಒತ್ತುವರಿ ಭೂಮಿ ಲೀಸ್ಗೆ ನೀಡಲು ಸ್ಲಾಬ್ ನಿಗಧಿ ಪಡಿಸಿದ್ದರು. ಅಲ್ಲದೆ ಸರಳವಾದ ನಿಯಮಾವಳಿಗಳನ್ನೂ ರೂಪಿಸಿ ಅಂದಿನ ಸರ್ಕಾರದ ಒಪ್ಪಿಗೆಯನ್ನೂ ಪಡೆದಿದ್ದರು.ಇದೀಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಲವು ಷರತ್ತುಗಳನ್ನು ವಿಧಿಸಿರುವುದರಿಂದ ಎಲ್ಲರೂ ಅದನ್ನು ಪೂರೈಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಳೆಗಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

click me!