ಇಲ್ಲಿವರೆಗೆ ಆರ್.ಎಚ್. ಕ್ಯಾಂಪ್ ಗಳಲ್ಲಿ ವಾಸವಿರುವ 146 ಬಾಂಗ್ಲಾ ನಿರಾಶ್ರಿತರು ಸಿಎಎಯಡಿ ಪೌರತ್ವ ಕ್ಕಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ. ಅಂಚೆ ಕಚೇರಿ, ರೈಲ್ವೆ ಮತ್ತು ಗುಪ್ತಚರ ಇಲಾಖೆಗಳ ನ್ನೊಳಗೊಂಡ ಜಿಲ್ಲಾಮಟ್ಟದ ಪರಿ ಶೀಲನಾ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ನಡೆಸಿ, ವಾಸಸ್ಥಳ, ದಾಖಲೆಗಳನ್ನು ಪರಿಶೀಲಿಸಿ, ಪೌರತ್ವಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಅದನ್ನಾಧರಿಸಿ ಪೌರತ್ವ ಮಂಜೂರು ಮಾಡಲಾಗುತ್ತಿದೆ.
ರಾಮಕೃಷ್ಣ ದಾಸರಿ
ರಾಯಚೂರು(ಆ.10): ಜಿಲ್ಲೆಯ ಸಿಂಧನೂರು ತಾಲೂಕಿ ಆರ್.ಎಚ್. ಕ್ಯಾಂಪ್‌ಗಳಲ್ಲಿ ವಾಸವಿರುವ ಬಾಂಗ್ಲಾ ನಿರಾಶ್ರಿತರ ಪೈಕಿ ಐವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಡಿ ಭಾರತೀಯ ಪೌರತ್ವ ನೀಡಿದ್ದು, ಇದು ಕಾಯ್ದೆಯಡಿ ಪೌರತ್ವ ಪಡೆದ ರಾಜ್ಯದ ಮೊದಲ ಪ್ರಕರಣವಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಸಿಎಎ ಅಡಿ ಕೆಲವರಿಗೆ ಈಗಾಗಲೇ ಪೌರತ್ವ ನೀಡಲಾಗಿದ್ದು, ಇದೀಗ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆರ್.ಎಚ್. ಕ್ಯಾಂಪ್‌ಗಳಲ್ಲಿರುವ ರಾಮಕೃಷ್ಣನ್ ಅಭಿಕರಿ, ಸುಕುಮಾರ ಮೊಂಡಲ್, ಬಿಪ್ರದಾಸ ಗೋಲ್ಡರ್, ಜಯಂತ ಮೊಂಡಲ್, ಅದ್ವಿತ ಅವರಿಗೆ ಕರ್ನಾಟಕ ಗೃಹ ಸಚಿವಾಲಯದ ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯದಿಂದ ಪೌರತ್ವ ನೀಡಲಾಗಿದೆ.
ಸಿಎಎ ಹಿಂಪಡೆಯುವ ಮಗ ದೇಶದಲ್ಲಿ ಹುಟ್ಟಿಲ್ಲ: ಪ್ರಧಾನಿ ಮೋದಿ
ಸಿಂಧನೂರಲ್ಲಿದ್ದಾರೆ 25000 ವಲಸಿಗರು
1971ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಭಾರತದಲ್ಲಿ ನೆಲೆಸಲಿಚ್ಛಿಸಿದ್ದ ಕುಟುಂಬಗಳಿಗೆ ಸಿಂಧನೂರು ತಾಲೂಕಿನಲ್ಲಿ ಒಟ್ಟು 5 ಪುನರ್ವಸತಿ ಕೇಂದ್ರ ಸ್ಥಾಪಿಸಿ 932 ಕುಟುಂಬಗಳಿಗೆ ನೆಲೆ ಒದಗಿಸಲಾಗಿತ್ತು. ಆ ಪೈಕಿ, 1 ರಿಂದ 4 ಕ್ಯಾಂಪ್ ಗಳಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ 727 ಕುಟುಂಬ, 5ನೇ ಕ್ಯಾಂಪ್‌ನಲ್ಲಿ ಬರ್ಮಾದಿಂದ ಬಂದ 205 ಕುಟುಂಬಗಳಿವೆ. ನಾಲ್ಕು ದಶಕಗಳಿಂದ ಆರ್. ಎಚ್. ಕ್ಯಾಂಪ್‌ನಲ್ಲಿಯೇ ವಾಸಿಸುತ್ತಿರುವವರ ಸಂಖ್ಯೆ ಈಗ ಸುಮಾರು 25,000 ಗಡಿ ದಾಟಿದೆ. ಆ ಪೈಕಿ, 20 ಸಾವಿರ ಮಂದಿ ಬಾಂಗ್ಲಾ ನಿರಾಶ್ರಿತರಾಗಿದ್ದು, 5 ಸಾವಿರ ಮಂದಿ ಬರ್ಮಾದವರಾಗಿದ್ದಾರೆ.
ಪೌರತ್ವಕ್ಕೂ ಮುನ್ನ ವಿಸ್ತ್ರತ ಪರಿಶೀಲನೆ