Puneeth Rajkumar ನಿಧನದ ನಂತರ ಚಿಕ್ಕ ಮಕ್ಕಳಲ್ಲೂ ಶುರುವಾಗಿದೆ ಎದೆ ನೋವಿನ ಭಯ?

By Kannadaprabha NewsFirst Published Nov 10, 2021, 10:58 AM IST
Highlights

*   ಬಾಲಕ-ಬಾಲಕಿಯರಲ್ಲಿ ಹೆಚ್ಚುತ್ತಿದೆ ಭಯ!
*   ಎದೆನೋವು ಎಂದು ಚಿಕಿತ್ಸೆಗೆ ಬರುತ್ತಿರುವ ಮಕ್ಕಳು, ವಾಸ್ತವದಲ್ಲಿ ಯಾವ ತೊಂದರೆ ಇಲ್ಲ
*   ಬಾಲಕ-ಬಾಲಕಿಯರ ಹೃದಯಗಳಿಗೂ ಘಾಸಿ ತಂದ ಅಪ್ಪು ಸಾವು  
 

ಬಸವರಾಜ ಹಿರೇಮಠ

ಧಾರವಾಡ(ನ.10): ಚಂದನವನದ(Sandalwood) ಖ್ಯಾತ ನಟ ಪುನೀತ್‌ ರಾಜಕುಮಾರ್‌(Puneeth Rajkumar) ಅಸುನೀಗಿದ ಬಳಿಕ ರಾಜ್ಯದ(Karnataka) ವಿವಿಧೆಡೆ ಹೆಚ್ಚಿನ ಸಂಖ್ಯೆಯ ಜನತೆ ಹೃದ್ರೋಗ ತಜ್ಞರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಅಪ್ಪು ಸಾವು ಈಗ ಬಾಲಕ-ಬಾಲಕಿಯರ ಹೃದಯಗಳಿಗೂ ಘಾಸಿ ತಂದಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಪುನೀತ್‌ ಅಕಾಲಿಕ ಸಾವು ಕನ್ನಡಿಗರನ್ನು ಮಾತ್ರವಲ್ಲದೇ ಭಾರತದ(India) ಇತರ ಭಾಗಗಳ ಜನರಿಗೂ ಆಘಾತ ತಂದಿದೆ. ವಿಶೇಷವಾಗಿ ಜನರ ಮನಸ್ಥಿತಿಯಲ್ಲಿ ಆರೋಗ್ಯ(Health) ಕುರಿತಾಗಿ ಬದಲಾವಣೆಗಳನ್ನು ತಂದಿದೆ. ಆದರೆ, ಕೆಲವು ದಿನಗಳಲ್ಲಿ ನಾನು ತಪಾಸಣೆ ಮಾಡಿದ ಸಂದರ್ಭಗಳನ್ನು ಅವಲೋಕಿಸಿದಾಗ ಹದಿಹರೆಯದವರಿಗೆ ಈ ಕುರಿತು ಚಿಂತೆಯೊಂದು ಕಾಡುತ್ತಿದೆ ಎಂದು ಖ್ಯಾತ ಚಿಕ್ಕಮಕ್ಕಳ ತಜ್ಞ ಡಾ. ರಾಜನ್‌ ದೇಶಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುವಕರಲ್ಲಿ(Youths) ಈ ಕುರಿತು ಭಯ ಹೆಚ್ಚುತ್ತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಕುಳಿತಾಗ ಕಾಲು ಅಲುಗಾಡಿಸುವ ಅಭ್ಯಾಸವಿದ್ಯಾ? ಇದು ಗಂಭೀರ ಸಮಸ್ಯೆಯ ಚಿಹ್ನೆ!

ಕೆಲ ದಿನಗಳ ಹಿಂದೆಯಷ್ಟೇ ಕಿತ್ತೂರಿನ 10 ವರ್ಷದ ಬಾಲಕಿಗೆ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಆದರೆ, ಪರೀಕ್ಷೆ ಮಾಡಿದಾಗ ಎಲ್ಲವೂ ಸರಿಯಾಗಿಯೇ ಇದೆ. ಅದೇ ರೀತಿ ಸವದತ್ತಿಯ 15 ವರ್ಷದ ಬಾಲಕಿಯು ಎದೆಯ ಎಡ ಭಾಗದಲ್ಲೂ ನೋವು ಅನುಭವಿಸಿದ್ದಾಳೆ. ಜತೆಗೆ ಸುಸ್ತಾಗುತ್ತಿದೆ ಎನ್ನುತ್ತಾಳೆ. ಈಕೆಗೂ ಪರೀಕ್ಷೆ ಮಾಡಲಾಗಿ ಎಲ್ಲವೂ ಸರಿಯಾಗಿದೆ. ಇವರಿಬ್ಬರೂ ಉದಾಹಣೆಯಷ್ಟೇ. ನಿತ್ಯವೂ ಈ ರೀತಿಯ ಒಂದಿಬ್ಬರೂ ಮಕ್ಕಳು ತಮ್ಮ ಎದೆಯ ಸಂಕಟವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಮಕ್ಕಳು ಸಾಧಾರಣವಾಗಿ 10 ರಿಂದ 15 ವಯೋಮಿತಿಯಲ್ಲಿದ್ದಾರೆ. ಅವರನ್ನು ಸಮಾಲೋಚನೆಗೆ ಒಳಪಡಿಸಿದ ನಂತರ ಈ ಅಸ್ಪಷ್ಟರೋಗ ಲಕ್ಷಣಗಳು ಇರುವುದನ್ನು ಕಂಡುಕೊಂಡಿದ್ದೇನೆ ಎಂದರು.

ಚಿಕಿತ್ಸೆಗೆ ಬರುತ್ತಿರುವ ಯುವಕರು ಬಹುತೇಕ ಆರೋಗ್ಯವಾಗಿದ್ದಾರೆ. ಹೃದ್ರೋಗಕ್ಕೆ(Cardiovascular Disease) ಸಂಬಂಧಿಸಿ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಕೇವಲ ಟಿವಿ ಮಾತ್ರವಲ್ಲದೇ ವಾಟ್ಸ್‌ಆ್ಯಪ್‌(WhatsApp), ಫೇಸ್‌ಬುಕ್‌ನಂತಹ(Facebook) ಸಾಮಾಜಿಕ ಜಾಲತಾಣದಲ್ಲೂ(Social Media) ನಾನಾ ರೀತಿಯಲ್ಲಿ ಪುನೀತ ರಾಜಕುಮಾರ ಸುದ್ದಿಯ ಪ್ರಸಾರವೂ ಈ ರೀತಿಯಾಗಲು ಕಾರಣ ಇರಬಹುದು. ಇಂತಹ ಮಕ್ಕಳಿಗೆ(Children) ಯಾವುದೇ ಲಕ್ಷಣಗಳಿಲ್ಲ ಎಂದು ಪರೀಕ್ಷೆ ನಂತರ ತಿಳಿವಳಿಕೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ ಎಂದು ಡಾ. ರಾಜನ್‌ ದೇಶಪಾಂಡೆ ಹೇಳಿದ್ದಾರೆ.

ಹೆಚ್ಚಾದ ಆರೋಗ್ಯದ ಆತಂಕ : ಆಸ್ಪತ್ರೆಗೆ ಇಸಿಜಿ ಪರೀಕ್ಷೆಗೆ ದುಂಬಾಲು!

ಅಪ್ಪು ಹಠಾತ್‌ ಸಾವಿನಿಂದ ಉಂಟಾಗಿರುವ ಭಯ ಮತ್ತು ಆತಂಕ ಜನಮಾನಸದಿಂದ ಇನ್ನೂ ದೂರವಾಗಿಲ್ಲ. ಹೃದ್ರೋಗ ತಪಾಸಣೆಗೆ (Heart Checkup) ಆಸ್ಪತ್ರೆಗೆ (Hospital) ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೃದಯ ಆರೋಗ್ಯದ (Heart Health) ಬಗ್ಗೆ ಅನುಮಾನಗೊಂಡು ಜನರು ಪರೀಕ್ಷೆಗೆ ಮುಗಿ ಬೀಳುತ್ತಿದ್ದಾರೆ.

ಹಾರ್ಟ್‌ ಚೆಕಪ್‌ಗೆ ಮುಗಿಬಿದ್ದ ಜನ! ಹೇಗೆ ಕಾಳಜಿ ಮಾಡಬೇಕು -ಇಲ್ಲಿದೆ ವೈದ್ಯರ ಸೂಕ್ತ ಸಲಹೆ

ಮಂಡ್ಯ ಜಿಲ್ಲಾ ಆಸ್ಪತ್ರೆಯ ಇಸಿಜಿ (ECG) ವಿಭಾಗಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ಬರುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ (Taluk) ಮಾತ್ರವಲ್ಲದೆ ರಾಮನಗರ (Ramanagara), ಚನ್ನಪಟ್ಟಣ (Channapattana), ಚಾಮರಾಜನಗರ (Chamarajanagar) ಜಿಲ್ಲೆಗಳಿಂದಲೂ ಆಗಮಿಸಿ ಜಿಲ್ಲಾಸ್ಪತ್ರೆಗೆ ಇಸಿಜಿ (ECG) ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಈ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ 40ರಿಂದ 50 ಜನರಿಗೆ ಮಾತ್ರ ಇಸಿಜಿ (ECG) ಪರೀಕ್ಷೆ ಮಾಡಲಾಗುತ್ತಿತ್ತು. ಅವರೆಲ್ಲರೂ ಸಣ್ಣ ಪುಟ್ಟ ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದವರೇ ಆಗಿದ್ದರು. ಆದರೆ, ಈಗ ಬರುತ್ತಿರುವವರಲ್ಲಿ ಬಹುತೇಕರು ಯುವಕರೇ (Youths) ಆಗಿದ್ದಾರೆ. ಎದೆ ನೋವು , ಎದೆ ಹಿಡಿದುಕೊಂಡಂತೆ ಆಗುತ್ತಿದೆ, ಎದೆ ಒತ್ತಿದಂತೆ ಆಗುತ್ತಿದೆ. ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ವೈದ್ಯರೆದುರು (Doctors) ತೆರೆದಿಡುತ್ತಾ ಹೃದಯ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
 

click me!