ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ ಟಿ ಜನಸಾಮಾನ್ಯರ ಮೇಲೆ ಬಹಳದೊಡ್ಡ ಹೊರೆ ಹೋರಿಸುತ್ತಿದೆ ಕೇಂದ್ರ ಸರ್ಕಾರ ಜನವಿರೋಧಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.
ವರದಿ : ವರದರಾಜ್
ದಾವಣಗೆರೆ. (ಜು 20); ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ ಟಿ ಜನಸಾಮಾನ್ಯರ ಮೇಲೆ ಬಹಳದೊಡ್ಡ ಹೊರೆ ಹೋರಿಸುತ್ತಿದೆ ಇಡೀ ದೇಶದ ಸಾಮಾನ್ಯ ಜನರು ತಾವು ದುಡಿದ ಹಣವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ತೆರಬೇಕಾಗಿರುವುದು ಖಂಡನೀಯ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ(Davanagere)ಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನರು ಖರೀದಿ ಮಾಡುವಾಗ ತೆರಿಗೆ ಹಾಗೂ ಮಾರಾಟ ಮಾಡುವಾಗಲೂ ತೆರಿಗೆ ನೀಡುವ ಪರಿಸ್ಥಿತಿ ಉಂಟಾಗಿದೆ. ಕೊಡುವ ಮತ್ತು ಪಡೆದುಕೊಳ್ಳುವ ಎರಡು ಹಂತದಲ್ಲಿ ತೆರಿಗೆ ತೆರಬೇಕಾಗಿದೆ ಇದು ಜನಸಾಮಾನ್ಯರ ಮೇಲೆ ಹೇರಿದ ಹೊರೆ. ಕೆಲ ಪ್ರಭಾವಿಗಳ ಎರಡುಪಟ್ಟು ಹಣ ಸರ್ಕಾರದ ಗಮನಕ್ಕೆ ಬಾರದೆ ಸಂಚರಿಸುತ್ತದೆ. ದೊಡ್ಡ ಮಟ್ಟದಲ್ಲಿ ಹಣ ಲೆಕ್ಕಕ್ಕೆ ಬಾರದೆ ಕಣ್ಣಿಗೆ ಕಾಣದಂತೆ ನಡೆಯುತ್ತಿದೆ ಆದರೆ ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ಹಣ ಮಾತ್ರ ತೆರಿಗೆಗೆ ಒಳಪಡುತ್ತಿರುವುದು ದುರಂತ.
ಯಾರು ಏನೇ ಹೇಳಿದರೂ ನಾನೇ ರೈತ ಸಂಘದ ಅಧ್ಯಕ್ಷ: ಕೋಡಿಹಳ್ಳಿ
ದೇಶದ ಬಂಡವಾಳದಾರರು ಒಂದು ಹೊಸ ಕೈಗಾರಿಕೆ ಪ್ರಾರಂಭಿಸಿದರೆ 25 ವರ್ಷ ತೆರಿಗೆ ವಿನಾಯಿತಿ ನೀಡಲಾಗುತ್ತದೆ.ನಷ್ಟ ತೋರಿಸಿದರೆ ತೆರಿಗೆ ವಿನಾಯಿತಿ ಇದೆ ಆದರೆ ಸಾಮಾನ್ಯ ಜನರು ತೆರಿಗೆ ಪದ್ದತಿಯಿಂದ ಹೊರ ಬರುವ ಪ್ರಮೇಯವೇ ಇಲ್ಲದಾಗಿದೆ. ಯಾವುದನ್ನು ಬಿಡದ ರೀತಿಯಲ್ಲಿ ತೆರಿಗೆ ಪಡೆಯಲಾಗುತ್ತಿದೆ.ಜನಸಾಮಾನ್ಯರ ದಿನಪ್ರತಿ ಬಳಕೆಯ ವಸ್ತುಗಳಿಗೆ ತೆರಿಗೆ ವಿಧಿಸಿದೆ.ಆದರೆ ವಿರೋಧಪಕ್ಷಗಳು ಮಾತ್ರ ಸುಮ್ಮನಿವೆ.ರಾಜಕೀಯ(Political)ಪ್ರತಿರೋಧಕ್ಕಾಗಿ ಪ್ರತಿಪಕ್ಷಗಳು ಸೀಮಿತವಾಗದೆ ಉಗ್ರವಾಗಿ ಖಂಡಿಸಬೇಕು.ಜಿಎಸ್ ಟಿ ಕಮಿಟಿ ಮುಂದೆ ಎಲ್ಲಾ ರಾಜ್ಯಗಳ ಅರ್ಥ ಸಚಿವರು ಭಾಗವಹಿಸಬೇಕು.ಸಂಪೂರ್ಣವಾಗಿ ವಿರೋಧಿಸಬೇಕು.ಪ್ರತಿಪಕ್ಷಗಳು ಜನರ ಪರವಾಗಿ ಧ್ವನಿಯಾಗಬೇಕು.ಆದರೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಯಾವುದೇ ಅಂತರವಿಲ್ಲ ಎನ್ನುವಂತಾಗಿದೆ.ಜನರು ಜಾಗೃತಿಯಾಗಬೇಕು.ಜನರು ಎಲ್ಲಾ ಪಕ್ಷಗಳನ್ನು ನಿಲ್ಲಿಸಿ ಅಡ್ಡಗಟ್ಟುವ ಕೆಲಸ ಮಾಡಬೇಕು.ಆಡಳಿತ ಪಕ್ಷ ಜನಸಾಮಾನ್ಯರನ್ನು ರೈತರನ್ನು ಮರೆತಿದ್ದಾರೆ.ನೀತಿ ರಾಜಕಾರಣ ಇಲ್ಲವಾಗಿದೆ.ತೆರಿಗೆ ಪದ್ದತಿ ಬಗ್ಗೆ ವಿಪಕ್ಷಗಳ ಯಾವುದೇ ಸಂದೇಶ ಇಲ್. ನಾಳೆ ವಿಪಕ್ಷಗಳು ಅಧಿಕಾರಕ್ಕೆ ಬಂದರೆ ತೆರಿಗೆ ತೆಗೆಯುತ್ತಿರಾ ಎಂಬುದನ್ನು ಜನತೆಗೆ ತಿಳಿಸಬೇಕು.
ಕೇಂದ್ರ ಸರ್ಕಾರ ಎಲ್ಲಾ ಸೇವಾ ಕೇಂದ್ರಗಳನ್ನು ಖಾಸಗೀರಣ ಮಾಡುತ್ತಿದೆ.ದೇಶದ ಸೇವಾ ಕ್ಷೇತ್ರಗಳು ಖಾಸಗೀಕರಣವಾಗುತ್ತಿದೆ.ಇದಕ್ಕೆ ಪರ್ಯಾಯವಾಗಿ ವಿಪಕ್ಷಗಳ ನೀತಿ ಏನು ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕು.ಆಡಳಿತ ಪಕ್ಷದ ಜನವಿರೋಧಿ ನೀತಿ,ಭ್ರಷ್ಟಾಚಾರಕ್ಕೆ ಪರ್ಯಾಯ ಏನು ಎಂಬುದನ್ನು ವಿಪಕ್ಷಗಳು
ತಿಳಿಸಬೇಕು.ಜನ ಬೀದಿಗೆ ಬಂದು ಹೋರಾಟ ಮಾಡಬೇಕಿದೆ.ರಾಜ್ಯದಲ್ಲಿ ರಸಗೊಬ್ಬರ ಅಭಾವ ಸೃಷ್ಠಿಮಾಡಲಾಗಿದೆ.ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಡಿಎಪಿ ಮತ್ತು ಎನ್ ಪಿಕೆ ಅಭಾವ ಸೃಷ್ಟಿಯಾಗಿದೆ ಇದನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ಸೋಲುತ್ತಿದೆ ರೈತರಿಗೆ ಸಿಟ್ಟುಬರುವ ಮುನ್ನ ಅಭಾವ ಸರಿದೂಗಿಸಬೇಕು.ಮುಂಗಾರಿನ ಹಂಗಾಮಿಗೆ ಸಮರ್ಪಕ ರಸಗೊಬ್ಬರ ನೀಡಬೇಕೆಂದು ಸಿಎಂ ಗೂ ಪತ್ರ ಬರೆದಿದ್ದೇನೆ.ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು.ಈ ಬಗ್ಗೆ ಕಾರ್ಯೋನ್ಮುಖವಾಗಬೇಕು. ಚುನಾವಣೆ ಸಮೀಪದಲ್ಲಿದೆ ಚುನಾವಣೆಗೆ ಪೂರಕವಾಗಿ ಎಲ್ಲಾ ಕೆಲಸ ನಡೆಯುತ್ತಿದೆ .ಜನ ತಿರಸ್ಕರಿಸುವ ಮೊದಲು ಸರಿಯಾದ ತೆರಿಗೆ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಒಕ್ಕೂಟದ ಗೌರವಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ
ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ: ನಾನು ದೆಹಲಿಯ ರೈತ ಹೋರಾಟ ನಿಲ್ಲಿಸಲು 3000 ಕೋಟಿ ರೂ ಪಡೆದಿದ್ದೇನೆ ಎಂಬ ಆರೋಪ ಮಾಡಿದ್ದಾರೆ.ಕೆಎಸ್ ಆರ್ಟಿಸಿ(KSRTC) ಮುಷ್ಕರ ನಿಲ್ಲಿಸಲು 35 ಕೋಟಿ ಪಡೆದಿದ್ದೇನೆ ಎನ್ನುತ್ತಾರೆ.ಹಾಗಾದರೆ ನನಗೆ ಲಂಚ ನೀಡಿದ್ದಾರೆ ಎಂದರೆ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರವೇ ನೀಡಬೇಕು ತಾನೆ ಅಲ್ಲಿಗೆ ಸರ್ಕಾರವೇ ಭ್ರಷ್ಟ ಎಂದು ಹೇಳಬೇಕಷ್ಟೆ ಎಂದ ಕೋಡಿಹಳ್ಳಿ ಚಂದ್ರಶೇಖರ್
ಎಎಪಿ(AAP) ನಮ್ಮ ರಾಜಕೀಯ ಮುಖವಾಣಿ.ರೈತಸಂಘದ ಹೋರಾಟ ಒಂದುಕಡೆಯಿದೆ. ಆದರೆ ಆಮ್‌ಆದ್ಮಿ(AAP)ಗೆ ಮುಖವಾಣಿಯಾಗಿ ಕೆಲಸ ಮಾಡುತ್ತೇನೆ.ಸೆಪ್ಟೆಂಬರ್ ನಂತರ ಅಭ್ಯರ್ಥಿಗಳ ಪಟ್ಟಿ ಮಾಡಲಾಗುವುದು. ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಯಾರನ್ನು ಕೇಳುವ ಅವಶ್ಯಕತೆ ಇಲ್ಲ.25 ರೈತ ಸಂಘಗಳಿವೆ ಎಲ್ಲರ ಅಪ್ಪಣೆ ಕೇಳುವ ಅಗತ್ಯ ಇಲ್ಲ ಎಂದರು.