Mysuru : ಅವನತಿಯ ಅಂಚಿನತ್ತ ಬಂದು ನಿಂತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

By Kannadaprabha NewsFirst Published Nov 20, 2022, 4:18 AM IST
Highlights

ಸರ್ಕಾರಿ ಶಾಲೆ ಉಳಿವಿಗಾಗಿ ಸರ್ಕಾರ ಒಂದು ಕಡೆ ಪ್ರಯತ್ನಿಸುತ್ತಿದ್ದರೆ, ಮೊತ್ತೊಂದು ಕಡೆ ಸರ್ಕಾರಿ ಶಾಲೆ ನಶಿಸಿಲು ಸರ್ಕಾರಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೆ ಕಾರಣರಾಗಿದ್ದಾರೆ ಅನ್ನಿಸುತ್ತದೆ ಈ ಶಾಲೆಯ ಪರಿಸ್ಥಿತಿ ನೋಡಿದಾಗ.

 ಕೇತಹಳ್ಳಿ ಬಸವರಾಜು

ಟಿ. ನರಸೀಪುರ (ನ.20)  :  ಸರ್ಕಾರಿ ಶಾಲೆ ಉಳಿವಿಗಾಗಿ ಸರ್ಕಾರ ಒಂದು ಕಡೆ ಪ್ರಯತ್ನಿಸುತ್ತಿದ್ದರೆ, ಮೊತ್ತೊಂದು ಕಡೆ ಸರ್ಕಾರಿ ಶಾಲೆ ನಶಿಸಿಲು ಸರ್ಕಾರಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೆ ಕಾರಣರಾಗಿದ್ದಾರೆ ಅನ್ನಿಸುತ್ತದೆ ಈ ಶಾಲೆಯ ಪರಿಸ್ಥಿತಿ ನೋಡಿದಾಗ.

ಪುರಸಭೆ ವ್ಯಾಪ್ತಿಯ ಗಣೇಶ ದೇವಸ್ಥಾನದ ಸನಿಹದಲ್ಲಿರುವ 60 ವರ್ಷಗಳ ಹಿಂದೆ ತೆರೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಅವನತಿಯ ಅÜಂಚಿನತ್ತ ಬಂದು ನಿಂತಿದೆ. ಅದರ ಸಂರಕ್ಷಣೆಯ ಜವಾಬ್ದಾರಿ ಹೊರಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ನಮಗೆ ಸಂಬಂಧಿಸಿದಲ್ಲ ಎಂದು ಕುಳಿತಿದ್ದಾರೆ.

ಪ್ರಸ್ತುತ ಶಾಲೆ ಕನ್ನಡ (Kannada)  ಮತ್ತು ಆಂಗ್ಲ ಯಲ್ಲಿ ನಡೆಯುತ್ತಿದ್ದು, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೂಡ ಇದ್ದರು ಸಹ ಶಾಲೆಯ ದುರಸ್ತಿ ಆಗಿಲ್ಲ, ಬಡ ವಿದ್ಯಾರ್ಥಿಗಳು ಕಲಿಯುವ ಶಾಲೆ ಆಗಿರುವುದರಿಂದ ಶಿಕ್ಷಣ ಇಲಾಖೆ ಸಮೇತವಾಗಿ ಚುನಾಯಿತ ಪ್ರತಿನಿಧಿಗಳಿಗೂ ತಾತ್ಸಾರ ಮನೋಭಾವ ಹೊಂದಿದ್ದಾರೆ ಅನ್ನಬಹುದಾಗಿದೆ.

ಶಾಲೆಯ ಸ್ಥಿತಿ ಹೇಗಿದೆ ಎಂದರೆ ಶಾಲಾ ಕಟ್ಟಡದ ಮೇಲೆ ಛಾವಣಿ ಕಿತ್ತು ಬೀಳುತ್ತಿದೆ. ಮಳೆ ಬಂದರೆ ಕೊಠಡಿಗಳಲ್ಲಿ ನೀರು ಸೋರುತ್ತವೆ, ಪುಟ್ಟಕಂದಮ್ಮಗಳು ಆ ತಣ್ಣನೆಯ ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ, ಶಾಲೆಯ ಸುತ್ತಲೂ ಗಿಡ ಬಳ್ಳಿ ಪೂದೆ ಬೆಳೆದು ನಿಂತಿದೆ, ಹಗಲಲ್ಲೂ ಸೊಳ್ಳೆ ಕಾಟ, ಶಾಲೆಯ ಪಕ್ಕದ ಚರಂಡಿ ಸ್ವಚ್ಚತೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ, ಇದರ ಪರಿಮಳವನ್ನೆ ಸೇವಿಸಿ ಪಾಠ ಕೇಳಬೇಕು ಮತ್ತು ಬಿಸಿ ಊಟ ಮಾಡಬೇಕು. ಇಷ್ಟೆಲ್ಲ ಅವವ್ಯವಸ್ಥೆ ಹೊಂದಿರುವ ಶಾಲೆಯಲ್ಲಿ ಬಡ ಮಕ್ಕಳ ಆರೋಗ್ಯ ಹೇಗಾಗಬಹುದು ಆ ಮಕ್ಕಳ ಆರೋಗ್ಯ ಕೆಟ್ಟರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.

ಶೌಚಾಲಯ ನಿರ್ಮಾಣ ಮತ್ತು ಬಳಕೆಗೆ ಸ್ಚಚ್ಛ ಭಾರತ ಅಭಿಯಾನದಡಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಹಳೆ ಕಾಲದ ಕಿತ್ತೊಗಿರುವ ಹಾಗೂ ಭದ್ರತೆ ಇಲ್ಲದ ಕಲ್ನಾರ್‌ ಸೀಟ್‌ನ ಶೌಚಾಲಯವನ್ನು ಹೆಣ್ಣು ಮಕ್ಕಳು ಬಳಸಬೇಕಾಗಿದೆ, ಇನ್ನೊಂದು ದುರ್ಧೈವ ಅಂದರೆ ಈ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಸಹ ಸಮರ್ಪಕವಾಗಿ ಇಲ್ಲ .

ಶಾಲೆಗೆ ಹೊಸ ರೂಪ

 ಚಿಕ್ಕಮಗಳೂರು : ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತೆ. ಆದರೆ ಅನುದಾನ ಸದುಪಯೋಗ ಆಗುವುದು ಬಹಳನೇ ವಿರಳ. ಇಲ್ಲಿಯೂ ಕೂಡ ಅದೇ ಆಗಿದೆ. ಕೊಠಡಿಗಳಿಗೆ ಬಣ್ಣ ಕಾಣದೆ ಹಲವು ದಶಕಗಳೇ ಕಳೆದಿತ್ತು. ಸುತ್ತಮುತ್ತಲಿನ ಪರಿಸರವೂ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕವಾಗಿತ್ತು. ಇದನ್ನು ಅರಿತ ಪೋಷಕರು, ಗ್ರಾಮಸ್ಥರು ಶಾಲೆಗೆ ಹೊಸರ ರೂಪವನ್ನು ನೀಡಿದ್ದಾರೆ. ತಮ್ಮೂರಿನ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ವಾತಾವರಣ ಇರಲಿ ಎನ್ನುವ ಸದುದ್ದೇಶದಿಂದ ಗ್ರಾಮದ ಮಹಿಳೆಯರೇ ಸೇರಿಕೊಂಡು ಶಾಲೆಗೆ ಹೊಸ ರೂಪ ನೀಡಿದ್ದಾರೆ. ಹೌದು ಚಿಕ್ಕಮಗಳೂರು ತಾಲೂಕಿನ ಸರಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಂತಹ ಮಹತ್ವದ ಕಾರ್ಯವನ್ನು ಮಾಡಲಾಗಿದೆ. 

ಸುಣ್ಣ-ಬಣ್ಣ ಬಳಿದು ಫುಲ್ ನವವಧುವಿನಂತೆ ಸಿಂಗಾರ

ಸರಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಸ-ಧೂಳು ಹೆಚ್ವಿತ್ತು. ಶಾಲೆಯ ಅಕ್ಕಪಕ್ಕದ ವಾತಾವರಣವೂ ಹಾಳಾಗಿತ್ತು ಎಂದು ಹಳ್ಳಿಯ ಮಹಿಳೆಯರು ಶಾಲೆಯನ್ನ ಕ್ಲೀನ್ ಮಾಡಿ, ಸುಣ್ಣ-ಬಣ್ಣ ಬಳಿದು ಫುಲ್ ನವವಧುವಿನಂತೆ ಸಿಂಗರಿಸಿದ್ದಾರೆ.ಮಕ್ಕಳು ಸರಸ್ವತಿ ಪೂಜೆ ಮಾಡೋಕೆಂದು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಊರಿನ ಮಹಿಳೆಯರು ಶಾಲೆ ಇಷ್ಟೊಂದು ಗಲೀಜಾಗಿದೆ ಅಂತ ಹಳ್ಳಿ ಮನೆಗಳು, ಹೊಲ-ಗದ್ದೆ-ತೋಟದ ಅಂತ ಕೆಲಸದ ಮಧ್ಯೆಯೂ ತಮ್ಮೂರಿನ ಶಾಲೆಯನ್ನ ಶುಚಿ ಮಾಡಿ, ಬಣ್ಣ ಬಳಿದು ಮಾದರಿಯಾಗಿದ್ದಾರೆ. 

ಸರ್ಕಾರಿ ಶಾಲೆ ಮಕ್ಕಳ ಊಟಕ್ಕೆ ಹುಳುಬಿದ್ದ ಅಕ್ಕಿ, ಬೇಳೆ ಬಳಕೆ

ಮಹಿಳೆಯರೇ ಸೇರಿಕೊಂಡು ಒಂದು ಕೊಠಡಿಗೆ ಬಣ್ಣ

ಈ ಶಾಲೆಯಲ್ಲಿ ಪ್ರತಿ ತಿಂಗಳು ಸರಸ್ವತಿ ಪೂಜೆ ಮಾಡುತ್ತಾರೆ. ಅದಕ್ಕಾಗಿ ಹಣವನ್ನೂ ಕಲೆಕ್ಟ್ ಮಾಡುತ್ತಾರೆ. ಹೀಗೆ ಸರಸ್ವತಿ ಪೂಜೆಗೆಂದು ಬಂದ ಹಣದಲ್ಲಿ ಬಹಳ ವರ್ಷದಿಂದ ಸುಣ್ಣ-ಬಣ್ಣ ಕಾಣದ ಶಾಲೆಯನ್ನ ನೀಟ್ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳು ಚೆನ್ನಾಗಿದ್ದಾರೆ. ಬಿಸಿಯೂಟ, ಮೊಟ್ಟೆ ಕೊಡುತ್ತಾರೆ. ಆದರೆ, ಶಾಲಾ ಆವರಣ ಚೆನ್ನಾಗಿರಲಿ. ಮಕ್ಕಳು ಅವಕ್ಕೆ ಗೊತ್ತಾಗಲ್ಲ ಎಂದು ಪೋಷಕರೇ ಬಂದು ಶಾಲೆಯನ್ನ ನೀಟ್ ಮಾಡಿದ್ದೇವೆ. ಸೊಳ್ಳೆಗಳು ಇರುತ್ತೆ. ನಮ್ಮ ಮಕ್ಕಳನ್ನ ಇಲ್ಲಿಗೆ ಕಳಿಸಿ ಹೇಗೆ ಬೇಕು ಹಾಗೆ ನೋಡಲು ಮನಸ್ಸಾಗಲಿಲ್ಲ. ಸೊಳ್ಳೆಗಳು ಕಚ್ಚುತ್ತವೇ. ಅದಕ್ಕೆ ನಾವೇ ಬಂದು ಶಾಲೆಯನ್ನ ಕ್ಲೀನ್ ಮಾಡಿದ್ದೇವೆ ಅಂತಾರೆ ಪೋಷಕರಾದ ದ್ರಾಕ್ಷಾಯಿಣಿ. 

ಒಟ್ಟಾರೆ, ನಿಜಕ್ಕೂ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ. ಖಾಸಗಿ ಶಾಲೆಗಳಾದ್ರೆ ಸೇರುವ ಮುನ್ನವೇ ಅಭಿವೃದ್ಧಿ ಹೆಸರಲ್ಲಿ ಹಣವನ್ನ ಪೀಕಿರ್ತಾವೆ. ಆದ್ರೆ, ಸರ್ಕಾರಿ ಶಾಲೆಯಲ್ಲಿ ಸರ್ಕಾರವೇ ಮಾಡಬೇಕು. ಇವ್ರು ಸರ್ಕಾರದ ದಾರಿ ಕಾಯದೆ ತಾವೇ ನಮ್ಮೂರ ಶಾಲೆ ನೀಟ್ ಇರ್ಲಿ ಅಂತ ಕ್ಲೀನ್ ಮಾಡಿದ್ದಾರೆ. ಶಾಲೆಯ ವಾತಾವರಣ ಶುಚಿಯಾಗಿದ್ದರೆ. ಮಕ್ಕಳ ಮನಸ್ಸು ಚೆನ್ನಾಗಿರುತ್ತೆ. ಓದು ಚೆನ್ನಾಗಿ ತಲೆಗೆ ಹತ್ತುತ್ತೆ. ಹಾಗಾಗಿ, ಊರಿನ ಮಹಿಳೆಯರೇ ಸೇರಿ ತಮ್ಮೂರಿನ ಶಾಲೆಗೆ ಹೊಸ ರೂಪ ನೀಡಿದ್ದಾರೆ.

click me!