ಅನೇಕ ವರ್ಷಗಳ ಬಳಿಕ ಆಟೋ ಚಾಲಕರು ಸಂಘಟಿತರಾಗಿ ತೆಲುಗುಮಯ ಪ್ರದೇಶದ ತಾಲೂಕಿನಲ್ಲಿ ಈ ಪ್ರಮಾಣದ ಕನ್ನಡ ವಾತಾವರಣ ರೂಪಿಸಿದ್ದು, ಅತ್ಯಂತ ಸಂತಸ ತಂದಿದೆ. ಕನ್ನಡ ಅನ್ನ ಕೂಡುವ ಭಾಷೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಇತರೆ ಭಾಷೆಗಳನ್ನು ಪ್ರೀತಿಸುವಂತೆ ಶಾಸಕ ವೆಂಕಟರಮಣಪ್ಪ ಕರೆ ನೀಡಿದರು.
ಪಾವಗಡ (ನ.20): ಅನೇಕ ವರ್ಷಗಳ ಬಳಿಕ ಆಟೋ ಚಾಲಕರು ಸಂಘಟಿತರಾಗಿ ತೆಲುಗುಮಯ ಪ್ರದೇಶದ ತಾಲೂಕಿನಲ್ಲಿ ಈ ಪ್ರಮಾಣದ ಕನ್ನಡ ವಾತಾವರಣ ರೂಪಿಸಿದ್ದು, ಅತ್ಯಂತ ಸಂತಸ ತಂದಿದೆ. ಕನ್ನಡ ಅನ್ನ ಕೂಡುವ ಭಾಷೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಇತರೆ ಭಾಷೆಗಳನ್ನು ಪ್ರೀತಿಸುವಂತೆ ಶಾಸಕ ವೆಂಕಟರಮಣಪ್ಪ ಕರೆ ನೀಡಿದರು.
ತಾಲೂಕುAuto) ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಶುಕ್ರವಾರ ಪಟ್ಟಣದ ಎಸ್ ಎಸ್ ಕೆ ಬಯಲು ರಂಗ ಮಂದಿರದ (Karnataka) ರತ್ನ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಬೃಹತ್ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇತಿಹಾಸ ಸಂಶೋಧನ ತಜ್ಞ ಹಾಗೂ ಸಾಹಿತಿ ವಿ. ಆರ್.ಚಲುವ ರಾಜನ್ ತಮ್ಮ ಪ್ರಧಾನ ಭಾಷಣದಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆ ಹಾಗೂ ಉಳಿವಿನ ಬಗ್ಗೆ ಮಾತನಾಡಿ ಆಟೋ ಚಾಲಕರ ಸಂಘ, ಕನ್ನಡ ಪರ ಚಿಂತನೆ ಕುರಿತು ಪ್ರಶಂಶಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಡಾ.ಜಿ.ವೆಂಕಟ ರಾಮಯ್ಯ ಕನ್ನಡ ಭಾಷೆ ಮತ್ತು ಅದರ ಅಗತ್ಯತೆ ಬಗ್ಗೆ ವಿವರಿಸಿದರು.
ಸಮಾಜ ಸೇವಕ ನಾಗೇಂದ್ರಕುಮಾರ್, ತಾಲೂಕು ಬಿಜೆಪಿ ಮುಖಂಡ ಕೃಷ್ಣನಾಯಕ್, ದೀಪು, ರಾಘವೇಂದ್ರ, ಜೆ ಡಿ ಎಸ್‌ನ ಸಾಯಿ ಸುಮನ್ ಮಾತನಾಡಿದರು.
ಸಮಾಜ ಸೇವಕ ಕೊತ್ತೂರು ಹನುಮಂತ ರಾಯಪ್ಪ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.
ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಪುರಸಭೆ ಅಧ್ಯಕ್ಷ ಡಿ.ವೇಲುರಾಜು, ಉಪಾಧ್ಯಕ್ಷೆ ಶಶಿಕಲಾ ಬಾಲಾಜಿ, ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಚನ್ನಮಲ್ಲಯ್ಯ, ಹಿರಿಯ ಮುಖಂಡ ಮಾನಂ ವೆಂಕಟಸ್ವಾಮಿ, ಹಿರಿಯ ವೈದ್ಯ ಡಾ.ವಿ.ಕೆ.ಶಿವಕುಮಾರ್, ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ತುಮಕೂರು ಪ್ರತಾಪ್ ಮದಕರಿ, ತಹಸೀಲ್ದಾರ್ ವರದರಾಜ್, ಆರಕ್ಷಕ ನಿರೀಕ್ಷಕ ಅಜಯ್ ಸಾರಥಿ, ಗ್ರಾಮಾಂತರ ಆರಕ್ಷಕ ವೃತ್ತ ನಿರೀಕ್ಷಕ ಕಾಂತರೆಡ್ಡಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ಆರೋಗ್ಯಾಧಿಕಾರಿ ಡಾ.ಕಿರಣ್, ಕಾರ್ಮಿಕ ಇಲಾಖಾಧಿಕಾರಿ ಅಬ್ದುಲ್ ರಾವುಫ್, ಎಸ್‌ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ.ಚಂದ್ರಶೇಖರ್, ಸಾಹಿತಿಗಳಾದ ಸತ್ಯಲೋಕೇಶ್, ಎಸ್.ಎನ್.ಪ್ರಸನ್ನಮೂರ್ತಿ, ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ನಾಗರಾಜ್, ಗೌರವಾಧ್ಯಕ್ಷ ಅಶೋಕರೆಡ್ಡಿ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಇತರರು ಉಪಸ್ಥಿತರಿದ್ದರು.
ಚಾಲಕರ ಸಮಸ್ಯೆ ನಿವಾರಣೆಗೆ ಬದ್ಧ
ಪಾವಗಡ ತಾಲೂಕು ಆಂಧ್ರಕ್ಕೆ ಹೊಂದಿಕೊಂಡ ಕಾರಣ ಇಲ್ಲಿ ತೆಲುಗು ವ್ಯಾಪಕವಾಗಿ ಹರಡಿದ್ದು, ಇಂತಹ ಪ್ರದೇಶದಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಆಟೋ ಚಾಲಕರು ಸಂಘಟಿತರಾಗಿ ಸಮಾಜಮುಖಿ ಕೆಲಸಗಳಿಗೆ ಶ್ರಮಿಸುತ್ತಿರುವುದು ಸಂತಸ ತಂದಿದೆ. ಕನ್ನಡಪರ ಹಾಗೂ ಆಟೋ ಸಂಘಟನೆಗಳ ಸತತ ಪರಿಶ್ರಮದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಿದ್ದು ಆಟೋ ಚಾಲಕರ ಸಮಸ್ಯೆಗಳಿಗೆ ನಿವಾರಣೆಗೆ ಬದ್ದರಾಗಿದ್ದೇವೆ. ಮನೆ ಮನೆಯಲ್ಲಿಯೂ ಕನ್ನಡ ಭಾಷೆ ಮಾತನಾಡುವಂತಾಗಬೇಕು. ಕನ್ನಡ ನಿತೋತ್ಸವವಾಗುವ ನಿಟ್ಟಿನಲ್ಲಿ ಭಾಷೆ ಬೆಳೆಯಬೇಕಿದ್ದು ಕನ್ನಡ ನಾಡು,ನುಡಿ ಉಳಿವಿಗೆ ಅನೇಕ ಕನ್ನಡಪರ ಸಂಘ ಸಂಸ್ಥೆಗಳು, ಸಾಹಿತಿ, ವಿಚಾರ ಹಾಗೂ ಪ್ರಗತಿಪರ ಚಿಂತಕರು, ಚಿತ್ರ ನಟರು ಶ್ರಮಿಸಿದ್ದಾರೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ಫೋಟೋ 18ಪಿವಿಡಿ3
ಆಟೋ ಚಾಲಕರ ಸಂಘದಿಂದ ಪಾವಗಡ ಪಟ್ಟಣದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿದ ಶಾಸಕ ವಂಕಟರಮಣಪ್ಪ ಹಾಗೂ ಇತರರು.