ಬಿಬಿಎಂಪಿ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಕೊಟ್ಟ ಪಾಲಿಕೆ: ಆದರೆ ಶಾಸಕ ಮುನಿರತ್ನಗೆ ಶಾಕ್‌!

By Govindaraj S  |  First Published Oct 7, 2023, 11:25 AM IST

ಎರಡನೇ ಕಂತಿನ 73.07 ಕೋಟಿ ರೂಪಾಯಿ ಬಿಡುಗಡೆಗೆ ಬಿಬಿಎಂಪಿ ಅನುಮೋದನೆ ನೀಡಿದ್ದು, ಈ ಮೂಲಕ ಬಿಬಿಎಂಪಿ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. 


ಬೆಂಗಳೂರು (ಅ.07): ಎರಡನೇ ಕಂತಿನ 73.07 ಕೋಟಿ ರೂಪಾಯಿ ಬಿಡುಗಡೆಗೆ ಬಿಬಿಎಂಪಿ ಅನುಮೋದನೆ ನೀಡಿದ್ದು, ಈ ಮೂಲಕ ಬಿಬಿಎಂಪಿ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ.  2021ರ ಅಕ್ಟೋಬರ್ ತಿಂಗಳ ಕಾಮಗಾರಿ ಬಿಲ್ ಅನ್ನು ಪಾಲಿಕೆ ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಪೈಕಿ SIT ತನಿಖೆಗೆ ಒಳಪಟ್ಟಿರುವ ಕಾಮಗಾರಿಗಳ ಬಿಲ್ ಗೆ ತಡೆಯನ್ನು ನೀಡಿದೆ. ಇದರ ಹೊರತಾಗಿ ಬಿಬಿಎಂಪಿ ಉಳಿದೆಲ್ಲಾ ಬಿಲ್ ಕ್ಲಿಯರ್ ಮಾಡಿದೆ. ವಲಯವಾರು ಬಾಕಿ ಮೊತ್ತ ಹಂಚಿಕೆ ಮಾಡಿ ಅನುಮೋದಿಸಿರುವ ಪಾಲಿಕೆ ಹಂತ ಹಂತವಾಗಿ ಗುತ್ತಿಗೆದಾರರ ಬಿಲ್ ಅನ್ನು ಕ್ಲಿಯರ್ ಮಾಡುತ್ತಿದೆ.

ರಾಜಾರಾಜೇಶ್ವನಗರ ವಿಭಾಗ ವ್ಯಾಪ್ತಿಯ 160,129,73,37,16,17,38,42,69 ವಾರ್ಡ್‌ನ ಕೆಲವೊಂದು ಕಾಮಗಾರಿಗಳಿಗೆ ಸಾರ್ವಜನಿಕ ದೂರು ಬಂದ ಕಾರಣ, ಪಾಲಿಕೆ ಯಾವುದೇ ಬಿಲ್ಲು ಪಾಸ್ ಮಾಡಿಲ್ಲ ಹೀಗಾಗಿ ಶಾಸಕ ಮುನಿರತ್ನಗೆ ಸರ್ಕಾರ ಶಾಕ್ ಕೊಟ್ಟಿದೆ.  9 ಷರತ್ತುಗಳೊಂದಿಗೆ  ಬಿಬಿಎಂಪಿ ಬಿಲ್ ನೀಡಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ 9 ವಾರ್ಡ್‌ಗಳಿಗೆ ಮಾತ್ರ ಬಿಲ್ ಭಾಗ್ಯವಿಲ್ಲ. ಬಿಲ್ ಬಿಡುಗಡೆಯಲ್ಲೂ ಮುಂದುವರೆಯಿತಾ ಶಾಸಕ ಮುನಿರತ್ನ - ಡಿಕೆಶಿ ಬ್ರದರ್ಸ್ ಜಿದ್ದಾಜಿದ್ದಿ. ಬಿಜೆಪಿ - ಜೆಡಿಎಸ್ ಮೈತ್ರಿ ಓಡಾಟದ‌ ಮುಚಂಚೂಣಿಯಲ್ಲಿ ಕಾಣಿಸಿಕೊಂಡಿರುವ ಮುನಿರತ್ನ. ಬಿಬಿಎಂಪಿ 9 ವಲಯಗಳಿಗೆ 78 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬಿಬಿಎಂಪಿಯು ಜೇಷ್ಠತೆ ಆಧಾರದಲ್ಲಿ ಒಟ್ಟು ಬಿಲ್ ನ ಶೇ. 75 ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದೆ.  ದೂರುಗಳು ಮತ್ತು ಎಸ್ ಐಟಿ ತನಿಖೆ ಹೆಸರಲ್ಲಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಲ್ ಗಳಿಗೆ ಬ್ರೇಕ್ ಹಾಕಲಾಗಿದೆ. 

Tap to resize

Latest Videos

'ಪಲ್ಲಕ್ಕಿ ಉತ್ಸವ' ಬ್ರ್ಯಾಂಡ್‌: ಸಾರಿಗೆ ಇಲಾಖೆಯ ಹೊಸ 148 ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಯಾವ ವಲಯಕ್ಕೆ ಎಷ್ಟು ಬಿಡುಗಡೆ..?
ಕೇಂದ್ರ         -     1.15 ಕೋಟಿ ರೂ.
ಪೂರ್ವ        -     6.57 ಕೋಟಿ ರೂ.
ಪಶ್ಚಿಮ         -     6.32 ಕೋಟಿ ರೂ.
ಉತ್ತರ        -     9.23 ಕೋಟಿ ರೂ.
ಆರ್ ಆರ್ ನಗರ        -     4.58 ಕೋಟಿ ರೂ.
ಬೊಮ್ಮನಹಳ್ಳಿ           -     6.57 ಕೋಟಿ ರೂ.
ದಾಸರಹಳ್ಳಿ                -     3.49 ಕೋಟಿ ರೂ.
ಯಲಹಂಕ                 -     32.71 ಕೋಟಿ ರೂ.
ಮಹದೇವಪುರ.          -     4.59 ಕೋಟಿ ರೂ.

click me!