Gadag: ಸಸ್ಪೆಂಡ್ ಆದ ಕಂದಾಯ ಅಧಿಕಾರಿಗೆ ಸರ್ಕಾರದಿಂದ ಬಡ್ತಿ ಗಿಫ್ಟ್!

By Govindaraj S  |  First Published Aug 10, 2023, 5:17 PM IST

ಕರ್ತವ್ಯ ಲೋಪ ಹಿನ್ನೆಲೆ ಸಸ್ಪೆಂಡ್ ಆಗಿದ್ದ ಅಧಿಕಾರಿಗೆ ಹದಿನೈದು ದಿನಗಳಲ್ಲೇ ಸರಕಾರ ಬಡ್ತಿ ನೀಡಿದ್ದು ವ್ಯಾಪಕ ಚರ್ಚೆಗೆ ಕಾರವಾಗಿದೆ. ಗದಗ ಬೆಟಗೇರಿ ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಸಸ್ಪೆಂಡ್ ಆಗಿ ಹದಿನೈದು ದಿನಗಳಲ್ಲಿಯೇ ಮುಖ್ಯಾಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. 


ಗದಗ (ಆ.10): ಕರ್ತವ್ಯ ಲೋಪ ಹಿನ್ನೆಲೆ ಸಸ್ಪೆಂಡ್ ಆಗಿದ್ದ ಅಧಿಕಾರಿಗೆ ಹದಿನೈದು ದಿನಗಳಲ್ಲೇ ಸರಕಾರ ಬಡ್ತಿ ನೀಡಿದ್ದು ವ್ಯಾಪಕ ಚರ್ಚೆಗೆ ಕಾರವಾಗಿದೆ. ಗದಗ ಬೆಟಗೇರಿ ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಸಸ್ಪೆಂಡ್ ಆಗಿ ಹದಿನೈದು ದಿನಗಳಲ್ಲಿಯೇ ಮುಖ್ಯಾಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಹಡಪದ ಅವರನ್ನ ಕರ್ತವ್ಯ ಲೋಪ ಹಾಗೂ ಬೇಜವಬ್ದಾರಿತನ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜುಲೈ 25 ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. 

ಸಾರ್ವಜನಿಕರಿಗೆ ಫಾರ್ಮ್ ನಂ.3 ವಿತರಣೆಯಲ್ಲಿ  ವಿಳಂಬ ಹಾಗೂ ನಿವೇಶನಗಳಿಗೆ ನಿರಪೇಕ್ಷಣಾ ಪತ್ರ ಪಡೆಯದೇ ಫಾರ್ಮ್ ನಂ.3 ವಿತರಣೆ ಮಾಡಿದ ಆರೋಪ ಮಹೇಶ್ ಹಡಪದ ಅವರ ಮೇಲಿತ್ತು. ನಿಯಮ ಬಾಹಿರವಾಗಿ  1063 ನಿವೇಶನಗಳಿಗೆ ಫಾರ್ಮ್ ನಂ.3 ವಿತರಿಸಿ ಕರ್ತವ್ಯ ಲೋಪವೆಸಗಿದ್ದರು. ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ದಮ್ಮನಹಳ್ಳಿ ದೂರು ನೀಡಿದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅವರು ತನಿಖೆ ಮಾಡಿ ಡಿಸಿ ಅವರಿಗೆ ವರದಿ ಸಲ್ಲಿಸಿದ್ದರು. 

Tap to resize

Latest Videos

undefined

ನನ್ನ ಮಗಳನ್ನು ನಿನಗೆ ಕೊಡಲ್ಲ ಎಂದ ತಂದೆ: 3 ಎಕರೆ ಅಡಿಕೆ ಗಿಡವನ್ನೆ ನಾಶ ಮಾಡಿದ ಹುಡುಗ!

ಅಪರ ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ, ಸಸ್ಪೆಂಡ್ ಆಗಿದ್ದ ಹದಿನೈದು ದಿನಗಳಲ್ಲಿ ಸರಕಾರ ಇದೀಗ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯತಿಗೆ ಮಹೇಶ್ ಹಡಪದ ಅವರನ್ನು  ಮುಖ್ಯಾಧಿಕಾರಿಯಾಗಿ ಬಡ್ತಿ ನೀಡಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.

click me!