Davanagere: ನೂತನ ಮನೆಗೆ ನರೇಂದ್ರ ಮೋದಿ ಹೆಸರಿಟ್ಟ ಕಟ್ಟಾ ಅಭಿಮಾನಿ..!

Published : Apr 29, 2022, 10:59 AM IST
Davanagere: ನೂತನ ಮನೆಗೆ ನರೇಂದ್ರ ಮೋದಿ ಹೆಸರಿಟ್ಟ ಕಟ್ಟಾ ಅಭಿಮಾನಿ..!

ಸಾರಾಂಶ

*  ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಘಟನೆ *  ಮನೆಗೆ ಮೋದಿ ಹೆಸರಿಟ್ಟ ಅಪ್ಪಟ ದೇಶಭಕ್ತ  *  ಮೇ. 3 ರಂದು ಮೋದಿ ‌ಮನೆ ಉದ್ಘಾಟನೆ   

ದಾವಣಗೆರೆ(ಏ.29):  ತಮ್ಮ ಮಗಳಿಗಾಗಿ ಮನೆ‌ ನಿರ್ಮಾಣ ಮಾಡಿದ‌ ಓರ್ವ ಅಭಿಮಾನಿ ತಮ್ಮ ನಿವಾಸಕ್ಕೆ ಶ್ರೀ ನರೇಂದ್ರ ಮೋದಿ(Narendra Modi) ನಿಲಯ ಎಂದು ಹೆಸರಿಟ್ಟಿದ್ದಾನೆ. ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿಯ ಗೌಡರ ಹಾಲೇಶ್(Goudar Halessh) ಮೋದಿ ಹೆಸರಿಟ್ಟ ಅಪ್ಪಟ ದೇಶಭಕ್ತ. 

ಗೌಡರ ಹಾಲೇಶ್ ಆಸ್ಟ್ರೇಲಿಯಾದ(Australia) ನ್ಯೂ ಸೌತ್ ವೇಲ್ಸ್‌ನಲ್ಲಿ ನೆಲೆಸಿರುವ ತಮ್ಮ ಪುತ್ರಿ ಭುವನೇಶ್ವರಿ ಅವರಿಗಾಗಿಯೇ ಚನ್ನಗಿರಿಯಲ್ಲಿ(Channagiri) ಮನೆ‌‌ ನಿರ್ಮಾಣ ಮಾಡಿದ್ದಾರೆ. ನೂತನ ಮನೆ ನಿರ್ಮಾಣ ಮಾಡಿದ ಹಾಲೇಶ್ ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದರಿಂದ‌ ತಮ್ಮ ನಿವಾಸಕ್ಕೆ ನರೇಂದ್ರ ಮೋದಿ ನಿಲಯ(Narendra Modi Nilaya) ಎಂದು ನಾಮಕರಣ ಮಾಡಿದ್ದಾರೆ.

ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ, ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ

ನಾಮಕರಣಕ್ಕಾಗಿ ಹುಡುಕಾಟ ನಡೆಸಿದಾಗ ಕೊನೆಗೆ ನೆನಪಾಗಿದ್ದೇ ಮೋದಿ ಹೆಸರು

ಮನೆ‌ ನಿರ್ಮಾಣ ಮಾಡಿದ‌ ಹಾಲೇಶ್ ಹೆಸರಿಡಲು ಹುಡುಕಾಟ ನಡೆಸಿದ್ದರಂತೆ.ಯಾವುದು ಅವರಿಗೆ ಇಷ್ಟವಾಗಲಿಲ್ಲ. ಕೊನೆಗೆ ಮೋದಿ ಹೆಸರಿಟ್ಟರೆ ಹೇಗೆ ಚಿಂತಿಸಿ ವಾಸ್ತು ಜ್ಯೋತಿಷಿಗಳನ್ನು(Astrologer) ಕೇಳಿದ್ದಾರೆ. ಅದಕ್ಕೆ ಅಭ್ಯಂತರ ವೇನು ಇಲ್ಲ ಎಂದಾಗ ನರೇಂದ್ರ‌ ಮೋದಿ ನಿಲಯ ಅವರಿಗೆ ಇಷ್ಟ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಿಟ್ಟು ಆ ಮನೆ ಮುಂದೆ ನಾಮಫಲಕ ಕೂಡ ಹಾಕಿಸಿದ್ದಾರೆ ಹಾಲೇಶ್ ಗೌಡರು.

ಮನೆಯ ಗೇಟ್ ಮುಂಭಾಗದಲ್ಲೇ ಮೋದಿ ಭಾವಚಿತ್ರ

ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಮನೆ‌ ನಿರ್ಮಾಣ ಮಾಡಲಾಗಿದ್ದು, ಮನೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಯವರ ಭಾವಚಿತ್ರವನ್ನು ಕೂಡ ಹಾಕಿಸಿದ್ದಾರೆ ಹಾಲೇಶ್. ಮೋದಿ ಮೇಲೆ ಹಾಲೇಶ್‌ಗೆ ಎಲ್ಲಿಲ್ಲದ ಅಭಿಮಾನ ಅಷ್ಟೇ ಗೌರವ ಕೂಡ. ಮನೆಗೆ  ಹೆಸಿರಿಡುವ ಮೂಲಕ ಮೋದಿ ಮೇಲಿನ ಅಭಿಮಾನವನ್ನು ಶಾಶ್ವತವಾಗಿಡಬೇಕೆಂಬುದು ಅವರ ಕಲ್ಪನೆ. ಮೋದಿ ಮನೆ ಇದೀಗ ಚನ್ನಗಿರಿಯಲ್ಲಿ ಮನೆ ಮಾತಾಗಿದ್ದು  ಹಾಲೇಶ್ ರವರ ಮನೆ ಸಾರ್ವಜನಿಕರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಈ ಸುದ್ದಿ ಅಕ್ಕಪಕ್ಕದ ಗ್ರಾಮಗಳಿಗೂ‌ ಮುಟ್ಟಿದ್ದು  ಮನೆಗೆ ದಿನ ಹತ್ತಾರು ಜನ ಭೇಟಿ ನೀಡುತ್ತಿದ್ದಾರೆ. 

ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರದ ಅವ್ಯವಸ್ಥೆ: ಖರೀದಿ ಕೇಂದ್ರಕ್ಕೆ ಬೀಗ ಹಾಕಿದ ರೈತರು

ಮೇ. 3 ರಂದು ಮೋದಿ ‌ಮನೆ ಉದ್ಘಾಟನೆ

ಪ್ರಧಾನಿ ಮೋದಿಯವರ ಹೆಸರಿಟ್ಟಿರುವ ನಿವಾಸ ಮೇ. 3 ರಂದು ಗೃಹಪ್ರವೇಶ ಆಗಲಿದ್ದು, ಮನೆ‌ ಉದ್ಘಾಟನೆಗೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madal Virupakshappa) ಸೇರಿದಂತೆ ವಿವಿಧ ಬಿಜೆಪಿ(BJP) ಮುಖಂಡರಿಗೆ ಆಹ್ವಾನ ನೀಡಿದ್ದಾರೆ.  

ನೂತನ ಮನೆಗೆ ಸಹ್ಯಾದ್ರಿ ಅಥವಾ ಶಿವಾಜಿ ಎಂದು ಹೆಸರಿಡಲು ಇಚ್ಚಿಸೆದ್ದೆವು. ನಾನು ಪಕ್ಕ ಪ್ರಧಾನಿ ನರೇಂದ್ರ ಮೋದಿ ಯವರ ಅಭಿಮಾನಿಯಾಗಿದ್ದರಿಂದ‌ ನರೇಂದ್ರ ಮೋದಿ ನಿಲಯ ಎಂದು ಹೆಸರಿಟ್ಟಿದ್ದೇನೆ. ಇನ್ನು ಮನೆ ಮುಂದೆ ಅವರ ಭಾವಚಿತ್ರ, ಹೆಸರು ಕೆತ್ತಲಾಗಿದೆ‌ ಎಂದು ಮನೆ ಮಾಲೀಕ ಹಾಲೇಶ್ ಬಹಳ ಹೆಮ್ಮೆಯಿಂದ ಬಂದವರಿಗೆ ಹೇಳುತ್ತಾರೆ.
 

PREV
Read more Articles on
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ