ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್..!

Published : May 27, 2022, 12:51 PM IST
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್..!

ಸಾರಾಂಶ

*  BMTC ಮಾಸಿಕ ಬಸ್ ಪಾಸ್ ವಿತರಣೆಯಲ್ಲಿ ಬದಲಾವಣೆ *  ಕ್ಯಾಲೆಂಡರ್ ತಿಂಗಳ ಬದಲಾಗಿ ಪಾಸ್ ಖರೀದಿಸಿದ ದಿನದಿಂದ 30 ದಿನಗಳವರೆಗೆ ಮಾನ್ಯ *  ಪಾಸ್ ಪಡೆಯಲು ಗುರುತಿನ ಚೀಟಿ ಬೇಕಾಗಿಲ್ಲ  

ಬೆಂಗಳೂರು(ಮೇ.27):  ಸಿಲಿಕಾನ್ ಸಿಟಿ ಮಂದಿಗೆ ಬಿಎಂಟಿಸಿ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ನೀವು ಬಸ್ ಪಾಸ್ ಖರೀದಿ ಮಾಡಿದ ದಿನದಿಂದ 30 ದಿನಗಳವರೆಗೆ ಪಾಸ್ ಮಾನ್ಯವಾಗಲಿದೆ. ಹೌದು, ಇದುವರೆಗೂ ನೀವು ಬಿಎಂಟಿಸಿ ಬಸ್ ಪಾಸ್ ಕೊಂಡು ಕೊಂಡ್ರೆ ಕ್ಯಾಲೆಂಡರ್‌ಗೆ ಅನುಗುಣವಾಗಿ ಮಾತ್ರ ಪಾಸ್ ವಿತರಿಸಲಾಗ್ತಿತ್ತು. ಕ್ಯಾಲೆಂಡರ್ ಪ್ರಕಾರ ಪಾಸ್ ವಿತರಿಸಿದ್ರೆ ವಾರದ ನಂತರ ಪಾಸ್ ಪಡೆಯುತ್ತಿದ್ದ ಪ್ರಯಾಣಿಕರಿಗೆ ನಷ್ಟ ಆಗ್ತಿತ್ತು. ಆದ್ರೆ ಇನ್ಮುಂದೆ ಪಾಸ್ ಪಡೆದ ದಿನದಿಂದ ಮುಂದಿನ 30 ದಿನಗಳವರೆಗೆ ಅನ್ವಯವಾಗಲಿದ್ದು ಪ್ರಯಾಣಿಕರಿಗೂ ಖುಷಿ ತಂದಿದೆ. 

ಅಂದ ಹಾಗೆ ಈ ನಿಯಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿತರಿಸುವ ಸಾಮಾನ್ಯ ವಜ್ರ ಮತ್ತು ವಾಯು ವಜ್ರ ಬಸ್‌ಳಿಗೆ ಮಾತ್ರ ಅನ್ವಯವಾಗಲಿದೆ. ಜುಲೈನಿಂದ ಹೊಸ ನಿಯಮ ಜಾರಿಯಾಗಲಿದೆ.

ಬೈಕ್‌ಗಿಂತ ಬಿಎಂಟಿಸಿ ಬಸ್‌ ಅಗ್ಗ: ಪ್ರಯಾಣಿಕರ ಸುರಕ್ಷತೆಯೊಂದಿಗೆ ರಾಜಿ?

ಪಾಸ್ ಪಡೆಯಲು ಗುರುತಿನ ಚೀಟಿ ಬೇಕಾಗಿಲ್ಲ

ಬಿಎಂಟಿಸಿಯಿಂದ ಬಸ್ ಪಾಸ್ ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿತ್ತು. ಆದ್ರೆ ಇನ್ಮುಂದೆ ಮಾಸಿಕ ಬಸ್ ಪಾಸ್ ಪಡೆಯಲು ಬಿಎಂಟಿಸಿ ಗುರುತಿನ ಚೀಟಿ ಕಡ್ಡಾಯವಿಲ್ಲ. ಬದಲಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ಡಿಎಲ್ ಸೇರಿದಂತೆ ಸರ್ಕಾರದಿಂದ ವಿತರಿಸಿದ ಯಾವುದೇ ಗುರುತಿನ ಚೀಟಿ ಪ್ರಯಾಣಿಕರು ತೋರಿಸಿ ಪಾಸ್ ಬಳಕೆ ಮಾಡಬಹುದು. 
 

PREV
Read more Articles on
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ