Chikkaballapura Nandi Hill: ನಂದಿಹಿಲ್ಸ್ ಬರೋರಿಗೆ ಗುಡ್ ನ್ಯೂಸ್, ಸಮಯ‌ ಬದಲಾವಣೆ

By Suvarna NewsFirst Published Nov 17, 2022, 9:19 PM IST
Highlights

ಕರ್ನಾಟಕದ‌ ಊಟಿ‌ ಎಂದೇ ಹೆಸರಾಗಿರುವ ಐತಿಹಾಸಿಕ ನಂದಿಬೆಟ್ಟದ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಗುಡ್ ನ್ಯೂಸ್ ಕೊಟ್ಟಿದೆ.  ನಂದಿಬೆಟ್ಟಕ್ಕೆ ಬರಲು ಸಮಯ‌ಬದಲಾವಣೆ ಮಾಡೋ ಮೂಲಕ ಸನ್ ರೈಸ್ ನೋಡಲು ಅನುಕೂಲವಾಗುವಂತೆ ಆಗಿದೆ.   

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಬಳ್ಳಾಪುರ (ನ.17): ಕರ್ನಾಟಕದ‌ ಊಟಿ‌ ಎಂದೇ ಹೆಸರಾಗಿರುವ ಐತಿಹಾಸಿಕ ನಂದಿಬೆಟ್ಟದ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಗುಡ್ ನ್ಯೂಸ್ ಕೊಟ್ಟಿದೆ.  ನಂದಿಬೆಟ್ಟಕ್ಕೆ ಬರಲು ಸಮಯ‌ಬದಲಾವಣೆ ಮಾಡೋ ಮೂಲಕ ಸನ್ ರೈಸ್ ನೋಡಲು ಅನುಕೂಲವಾಗುವಂತೆ ಆಗಿದೆ.  ಇಷ್ಟು ದಿನ ನಂದಿಬೆಟ್ಟಕ್ಕೆ ಬೆಳಿಗ್ಗೆ 6 ಗಂಟೆಗೆ ಪ್ರವೇಶ ಇತ್ತು, ಅದ್ರೆ ಈಗ ಹೊಸ ಆದೇಶ ಮಾಡಿದೆ. ಇದರಿಂದಾಗಿ ಸನ್ ರೈಸ್ ನೋಡಲು ಬರುವ ಪ್ರವಾಸಿಗರಿಗೆ ನಂದಿಬೆಟ್ಟದ ಸೊಬಗನ್ನು ‌ಸವಿಯಲು ಅನುಕೂಲ ‌ಅಗಲಿದೆ. ಇತ್ತೀಚಿಗೆ ಸರ್ಕಾರ ಅಪರ ಮುಖ್ಯ ‌ಕಾರ್ಯದರ್ಶಿ‌ ನೇತೃತ್ವದಲ್ಲಿ ‌ನಡೆದ ಸಭೆಯಲ್ಲಿ ‌ಬೆಳಿಗ್ಗೆ 5.30ಕ್ಕೆ ಬಿಡಲು ತೀರ್ಮಾನಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ‌ಹೇಳಿದ್ದಾರೆ. ಇದರಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್ ನಾಗರಾಜ್ ಪೊಲೀಸರಿಗೆ ಬೆಳಿಗ್ಗೆ 5.30ಕ್ಕೆ ನಂದಿಬೆಟ್ಟಕ್ಕೆ ಪ್ರವೇಶ ‌ನೀಡಲು ಸೂಚಿಸಿದ್ದಾರೆ. 

ಸನ್ ರೈಸ್ ನೋಡಲು ಸಮಯ ಬದಲಾವಣೆ: ಹೌದು ತನ್ನ ಅನನ್ಯ ಸೌಂದರ್ಯದಿಂದಲೇ ಎಲ್ಲರನ್ನು ಆಕರ್ಷಿಸುವ ನಂದಿಗಿರಿಧಾಮಕ್ಕೆ‌ ನವಂಬರ್,‌ ಡಿಸೆಂಬರ್ ತಿಂಗಳಲ್ಲಿ ಸನ್ ರೈಸ್ ನೋಡಲು ಬಲು ಚಂದ ಹೀಗಾಗಿ ಈ ಮನಮೋಹಕ‌ ದೃಶ್ಯಗಳನ್ನು ‌ನೋಡಲು  ಪ್ರವಾಸಿಗರು ಮುಗಿಬೀಳ್ತಾರೆ. ಆದ್ರೆ ಬೆಳಿಗ್ಗೆ 6 ಗಂಟೆ ನಂತರ ಪ್ರವೇಶ ಇದ್ದ ಕಾರಣ ಸನ್ ರೈಸ್ ನೋಡಲು ಸಾಧ್ಯ ವಾಗಿರಲಿಲ್ಲ. ಇದರಿಂದಾಗಿ ಪ್ರವಾಸಿಗರಿಗೆ ಅನುಕೂಲ ಆಗಲೆಂದು ಬೆಳಿಗ್ಗೆ ‌5.30ಕ್ಕೆ ನಂದಿಬೆಟ್ಟ ನೋಡಲು ಅವಕಾಶ ಮಾಡಲಾಗಿದ್ದು, ಸಹಕವಾಗಿಯೇ ನಂದಿಬೆಟ್ಟದ ಪ್ರವಾಸಿಗರಿಗೆ ಇದರಿಂದ ಖುಷಿ ಆಗಲಿದೆ.

 Chikkaballapur Nandi Hill: ‌ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟ ಮಾಡಲು ಪಣ

ವಿಕೇಂಡ್ ನಲ್ಲಿ ‌ಕಿಕ್ಕಿರಿದು ಬರೋ  ಪ್ರವಾಸಿಗರಿಗೆ ತಪ್ಪಲಿದೆ ಟ್ರಾಫಿಕ್ ಕಿರಿ ಕಿರಿ:
ಹೌದು ವಿಕೇಂಡ್ ಬಂದ್ರೆ ಸಾಕು ‌ನಂದಿಹಿಲ್ಸ್ ಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದರು,‌ಈ ವೇಳೆ ಬೆಟ್ಟದ ಮೇಲೆ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದೀಗೆ ಅರ್ಧಗಂಟೆ ಬೇಗ ನಂದಿಬೆಟ್ಟಕ್ಕೆ ಪ್ರವೇಶ ಇರುವ ಕಾರಣ ಪ್ರವಾಸಿಗರಿಗೆ ‌ಟ್ರಾಫಿಕ್‌ ಸಮಸ್ಯೆಯಿಂದ ರಿಲೀಸ್ ‌ಸಿಕ್ಕಂತಾಗುತ್ತದೆ.. ಜೊತೆಗೆ ಬೆಳ್ಳಂಬೆಳಗ್ಗೆ ಸನ್ ರೈಸ್ ನೋಡಲು ಅವಕಾಶ ಕೂಡ ಆದಂತಾಗಿದೆ.

Chikkaballapura Nandi Hill: ಈಗ ಪ್ರತಿ ವಾರಾಂತ್ಯ ನಂದಿ ಬೆಟ್ಟದಲ್ಲಿ ಟ್ರಾಫಿಕ್‌ ಜಾಮ್‌

ಕೋವಿಡ್‌ನಿಂದ ಬದಲಾಗಿದ್ದ ಸಮಯ: ಹೌದು ಕೋವಿಡ್‌ ವೇಳೆಯಲ್ಲಿ ನಂದಿಬೆಟ್ಟದ ಲ್ಲಿ ಜನರ ದಟ್ಟಣೆ ನಿಯಂತ್ರಿಸುವ ಸಲುವಾಗಿ‌ ಬೆಟ್ಟಕ್ಕೆ ಪ್ರವೇಶ  ಸಮಯವನ್ನು‌ ಬದಲಾಯಿಸಲಾಗಿತ್ತು. ಇದೀಗ ಸಹಜ ಸ್ಥಿತಿಯಿರುವ ಕಾರಣ ಮೊದಲಿನಂತೆ ಬೆಳಿಗ್ಗೆ 5.30ಕ್ಕೆ‌ಬಿಡಲು  ಜಿಲ್ಲಾಡಳಿತ ‌ಆದೇಶ ಮಾಡಿರೋದು ಪ್ರವಾಸಿಗರಿಗೆ ‌ಸಂತಸ ತಂದಿದೆ

click me!