
ಚಾಮರಾಜನಗರ (ನ.22): ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆ ಮಾಡಿದ ಪ್ರಕರಣ ಜನರ ನೆನಪಲ್ಲಿ ಇರುವಾಗಲೇ ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಬಂಡೀಪುರದಲ್ಲಿ ಕಾರು ಅಡ್ಡಗಟ್ಟಿ ಖದೀಮರು ಚಿನ್ನ ದರೋಡೆ ಮಾಡಿದ್ದಾರೆ. ಕಾರಿನಲ್ಲಿ ಬಂದಿದ್ದ ಮೂವರು ಸಿನಿಮಾ ಸ್ಟೈಲ್‌ನಲ್ಲಿ ದರೋಡೆ ಕೃತ್ಯ ಎಸಗಿದ್ದಾರೆ.
ರಸ್ತೆಯಲ್ಲಿ ಹೋಗುತ್ತಿದ್ದ ಕಾರ್‌ಗೆ ದರೋಡೆಕೋರರು ಢಿಕ್ಕಿ ಹೊಡೆದಿದ್ದಾರೆ. ಕಾರಿನ ಹಿಂಭಾಗ,ಮುಂಭಾಗಕ್ಕೆ ಡಿಕ್ಕಿ ಹೊಡೆದು ಕಾರು ನಿಲ್ಲಿಸಿ ದರೋಡೆ ಮಾಡಿದ್ದಾರೆ. ಢಿಕ್ಕಿ ಹೊಡೆದ ಬಳಿಕ ಕಾರಿನಿಂದ ಕೆಳಗಿಳಿದು ಬಂದು ಕಾರಿನಲ್ಲಿದ್ದ ಇಬ್ಬರಿಗೂ ಕೂಡ ಹಲ್ಲೆ ನಡೆಸಿ ಚಿನ್ನ ದರೋಡೆ ಮಾಡಿದ್ದಾರೆ.
ಕಾರ್‌ನಲ್ಲಿದ್ದ ವಿನು,ಸಮೀರ್ ಎಂಬ ಇಬ್ಬರಿಗೂ ಕೂಡ ಹಲ್ಲೆ ನಡೆಸಿ ಚಿನ್ನ ದರೋಡೆ ಮಾಡಿದ್ದಾರೆ. ಗುರುವಾರ ರಾತ್ರಿ ದರೋಡೆ ಕೃತ್ಯ ನಡೆದಿದೆ. ಬಂಡೀಪುರದ ಕಾಡಿನೊಳಗೆ ಎಂಟ್ರಿ ಕೊಟ್ಟ ವೇಳೆ ದರೋಡೆ ನಡೆದಿದೆ. ಪ್ರಿ ಪ್ಲ್ಯಾನ್ ಮಾಡಿಯೇ ಈ ಕೃತ್ಯ ಎಸಗಲಾಗಿದೆ.
ಬಂಡೀಪುರದ ಮೂಲಕ ಹಾದು ಚಿನ್ನದ ವ್ಯಾಪಾರಿಗಳು ಕೇರಳಕ್ಕೆ ಹೊರಟಿದ್ದರು. ಕಾರಿನ ಹ್ಯಾಂಡ್ ಬ್ರೇಕ್ ಸ್ಥಳದ ಬಳಿ 1.2 ಕೆಜಿ ಚಿನ್ನವನ್ನು ಇರಿಸಿಕೊಂಡಿದ್ದರು. ಕಾರು ಅಡ್ಡಗಟ್ಟಿ ಇದೇ ಚಿನ್ನವನ್ನು ಅವರು ಗುರುವಾರ ರಾತ್ರಿ ದರೋಡೆ ಮಾಡಿದ್ದಾರೆ.
ಕೇರಳ ಮೂಲದ ವ್ಯಕ್ತಿಗಳು ತಡವಾಗಿ ಗುಂಡ್ಲುಪೇಟೆ ಠಾಣೆಗೆ ದೂರು ಕೊಡಲು ಬಂದಿದ್ದರು. ಸದ್ಯ ದರೋಡೆಗೆ ಒಳಗಾಗಿದ್ದ ಕಾರನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಕವಿತಾ,ಎಎಸ್ಪಿ ಶಶಿಧರ್ ಭೇಟಿ,ಪರಿಶೀಲನೆ ಮಾಡಿದ್ದು,ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.