ಕೊರೋನಾ ಕಾಟ: ಹಟ್ಟಿ ಚಿನ್ನದ ಗಣಿ ಬಂದ್..!

Suvarna News   | Asianet News
Published : May 12, 2021, 11:25 AM ISTUpdated : May 12, 2021, 11:53 AM IST
ಕೊರೋನಾ ಕಾಟ: ಹಟ್ಟಿ ಚಿನ್ನದ ಗಣಿ ಬಂದ್..!

ಸಾರಾಂಶ

* ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿರುವ ಹಟ್ಟಿ ಚಿನ್ನದ ಗಣಿ  * ದೇಶದಲ್ಲಿ ಅತ್ಯಧಿಕ ಚಿನ್ನ ಉತ್ಪಾದಿಸುವ ಚಿನ್ನದ ಗಣಿ  * ಮೇ. 24ವರೆಗೆ ಹಟ್ಟಿ ಗಣಿಯಲ್ಲಿ ಚಿನ್ನ ಉತ್ಪಾದನೆ ಸ್ಥಗಿತ  

ಲಿಂಗಸುಗೂರು(ಮೇ.12): ಕೊರೋನಾ 2ನೇ ಅಲೆಯಿಂದ ನೌಕರರಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕಿನ ಪರಿಣಾಮ ದೇಶದಲ್ಲಿ ಅತ್ಯಧಿಕ ಚಿನ್ನ ಉತ್ಪಾದಿಸುವ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಉತ್ಪಾದನೆ ಬಂದ್ ಆಗಿದೆ.

ಚಿನ್ನದ ಗಣಿಯ ನೌಕರರಿಗೆ ಕೊರೋನಾ ಸೋಂಕು ವ್ಯಾಪಕವಾಗಿ ತಗುಲುತ್ತಿದೆ. ಕೋವಿಡ್‌ ಸೋಂಕಿನಿಂದ    ಕಾರ್ಮಿಕ ನೌಕರರ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ಉತ್ಪಾದನೆಯನ್ನ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

"

ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರ ಹೆಸರಲ್ಲಿ ರೆಮ್‌ಡಿಸಿವಿರ್ ಗೋಲ್‌ಮಾಲ್.?

ಇಂದಿನಿಂದ(ಮೇ.12) ರಿಂದ ಮೇ. 24ವರೆಗೆ ಹಟ್ಟಿ ಗಣಿಯಲ್ಲಿ ಚಿನ್ನ ಉತ್ಪಾದನೆ ಸ್ಥಗಿತವಾಗಲಿದೆ. ಸಿಬ್ಬಂದಿ ಮನೆಯಲ್ಲಿಯೇ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶಿಸಿದೆ. ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ನೌಕರರಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಹಟ್ಟಿ ಚಿನ್ನದ ಗಣಿಯನನ್ನ ಬಂದ್ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!