ಸಾಹುಕಾರ್‌ ರಾಸಲೀಲೆ ಸಿಡಿ ಪ್ರಕರಣ: ಸಹಜ ಸ್ಥಿತಿಯತ್ತ ಗೋಕಾಕ್

By Suvarna NewsFirst Published Mar 4, 2021, 11:17 AM IST
Highlights

ರಮೇಶ್ ಜಾರಕಿಹೊಳಿ‌ ರಾಸಲೀಲೆ ಸಿಡಿ ಬಹಿರಂಗ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ‌| ಜಾರಕಿಹೊಳಿ‌ ಗೃಹ ಕಚೇರಿ ಎದುರು ನೀರವ ಮೌನ| ಗೋಕಾಕ್‌ನ ಫಾಲ್ಸ್ ರಸ್ತೆಯಲ್ಲಿರುವ ರಮೇಶ್ ಜಾರಕಿಹೊಳಿ‌ ಗೃಹ ಕಚೇರಿ| ಗೋಕಾಕ್‌ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್| 

ಬೆಳಗಾವಿ(ಮಾ.04): ರಾಸಲೀಲೆ ಸಿಡಿ ಬಾಂಬ್‌ ಸ್ಫೋಟವಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾಹುಕಾರ್‌ ರಾಜೀನಾಮೆ ನೀಡುತ್ತಿದ್ದಂತೆ ಜಿಲ್ಲೆಯ ಗೋಕಾಕ್ ನಗರ ಉದ್ವಿಗ್ನಗೊಂಡಿತ್ತು. ರಮೇಶ್‌ ಜಾರಕಿಹೊಳಿ ಬೆಂಬಲಿಗರು ಬಸ್‌ಗಳಿಗೆ ಕಲ್ಲು ತೂರಾಟ ನಡೆದಿದ್ದರು. ಇದರಿಂದ ನಿನ್ನೆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. 

ಅದರೆ, ಇಂದು(ಗುರುವಾರ) ಗೋಕಾಕ್‌ ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದೆ. ಇಂದು ನಗರದಲ್ಲಿ ಸಂತೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಿಂದ ಜನರು ಆಗಮಿಸುತ್ತಿದ್ದಾರೆ. ನಗರದಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ನಿನ್ನೆ ಪ್ರತಿಭಟನೆ ವೇಳೆ 8 ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಗೋಕಾಕ್‌ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಸರಸ ಸಲ್ಲಾಪ ಬಹಿರಂಗ: ರಮೇಶ್ ಜಾರಕಿಹೊಳಿ ಬೆಂಬಲಿಗ ಆತ್ಮಹತ್ಯೆಗೆ ಯತ್ನ

ಜಾರಕಿಹೊಳಿ‌ ಗೃಹ ಕಚೇರಿ ಎದುರು ನೀರವ ಮೌನ

ರಮೇಶ್ ಜಾರಕಿಹೊಳಿ‌ ರಾಸಲೀಲೆ ಸಿಡಿ ಬಹಿರಂಗ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಮೇಶ್ ಜಾರಕಿಹೊಳಿ‌ ಗೃಹ ಕಚೇರಿ ಎದುರು ಇಂದು ನೀರವ ಮೌನ ಆವರಿಸಿದೆ. 
ಸಾಹುಕಾರ್ ಊರಲ್ಲಿ ಇರದಿದ್ದರೂ  ಅವರ ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ನೀಡಿದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜಾರಕಿಹೊಳಿ‌ ಗೃಹ ಕಚೇರಿಯತ್ತ ಅಭಿಮಾನಿಗಳು ಸುಳಿಯುತ್ತಿಲ್ಲ. ಸ್ವಕ್ಷೇತ್ರಕ್ಕೆ ರಮೇಶ್ ಜಾರಕಿಹೊಳಿ‌ ಆಗಮನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ರಮೇಶ್ ಸೂಚನೆ ಮೇರೆಗೆ ಇಂದು ನಡೆಯಬೇಕಿದ್ದ ಗೋಕಾಕ್ ಬಂದ್ ರದ್ದು ಆಗಿದೆ.
 

click me!