'ಮುಸ್ಲಿಂ ಬಾಂಧವರು ಬಿಜೆಪಿಗೆ ಮತ ಹಾಕದಿದ್ರೆ ನಮಗೆ ಹೆಲ್ಪ್ ಮಾಡಿದ ಹಾಗೆ'

By Web DeskFirst Published Nov 22, 2019, 2:30 PM IST
Highlights

ಮುಸ್ಲಿಂ ಬಾಂಧವರು ಸಪೋರ್ಟ್ ಮಾಡುತ್ತಿರುವುದು ಹೊಸ ಇತಿಹಾಸ| ಗೋಕಾಕ್‌ನ 28 ಜಮಾತ್ ಮುಸ್ಲಿಂ ಬಾಂಧವರು ಸಭೆ ಮಾಡಿ, ಕೆಲವು ಬಾಂಧವರು ನಮಗೆ ಬಿಜೆಪಿಗೆ ವೋಟ್ ಹಾಕಲು ಆಗಲ್ಲ, ಡಿ.3ರಂದು ಗೋಕಾಕ್ ನ ಕೆಲ ಮುಸ್ಲಿಂ ಬಾಂಧವರು ಅಜ್ಮೀರ್ ಹೋಗುತ್ತೇವೆ ಎಂದಿದ್ದಾರೆ| ಹೀಗೆ ಮಾಡಿದರೆ ನಮಗೆ ಸಹಾಯವಾಗಲಿದೆ ಎಂದ ರಮೇಶ್ ಜಾರಕಿಹೊಳಿ|

ಬೆಳಗಾವಿ(ನ.22): ಮುಸ್ಲಿಂ ಬಾಂಧವರು ನಾವು ಮತ ಹಾಕಲ್ಲ ಊರು ಬಿಡುತ್ತೇವೆ ಅಂದಿದ್ದಾರೆ. ಬಿಜೆಪಿಗೆ ವೋಟ್ ಹಾಕಲ್ಲ ಡಿ.3ರಂದು ಅಜ್ಮೀರ್ ಹೋಗುತ್ತೇವೆ ಎಂದು ಹೇಳಿದ್ದಾರೆ. ಈ ರೀತಿ ಮುಸ್ಲಿಂ ಬಾಂಧವರು ಮಾಡಿದ್ರೆ ನಮಗೆ ಸಹಾಯ ಮಾಡಿದ ಹಾಗೆ ಆಗುತ್ತದೆ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ. 

ಶುಕ್ರವಾರ ಗೋಕಾಕ್ ಮತಕ್ಷೇತ್ರದ ಮಕ್ಕಳಗೇರಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಮುಸ್ಲಿಂ ಬಾಂಧವರು ಸಪೋರ್ಟ್ ಮಾಡುತ್ತಿರುವುದು ಹೊಸ ಇತಿಹಾಸವಾಗಿದೆ. ಗೋಕಾಕ್‌ನ 28 ಜಮಾತ್ ಮುಸ್ಲಿಂ ಬಾಂಧವರು ಸಭೆ ಮಾಡಿ, ಕೆಲವು ಬಾಂಧವರು ನಮಗೆ ಬಿಜೆಪಿಗೆ ವೋಟ್ ಹಾಕಲು ಆಗಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುವ ಬದಲು ಊರು ಬಿಡಲು ಸೂಚನೆ ಕೊಟ್ರಾ ರಮೇಶ್ ಜಾರಕಿಹೊಳಿ ಅವರು ಎಂಬ ಮಾತುಗಳು ಕೇಳಿಬರುತ್ತಿವೆ.

ಅಥಣಿ, ಕಾಗವಾಡ ಸೇರಿದಂತೆ ಹಿಂದೂ ಮುಸ್ಲಿಂಮರು ಬಿಜೆಪಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಕೋಮುವಾದಿಗಳು ಅಂತಾ ಬಿಜೆಪಿಗೆ ಅಂತಾರೆ. ಆದರೆ, ಇಲ್ಲಿಂದ ಹೊಸ ಅಧ್ಯಾಯ ಆರಂಭಿಸಿ ವಿರೋಧಿಗಳಿಗೆ ತೋರಿಸೋಣ ಎಂದು ಮಕ್ಕಳಗೇರಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 
 

click me!