ಗೋವಾ ರಾಜ್ಯಕ್ಕೆ ಸೇರುತ್ತಾ ಕಾರವಾರ ?

Kannadaprabha News   | Asianet News
Published : Dec 30, 2019, 07:17 AM IST
ಗೋವಾ ರಾಜ್ಯಕ್ಕೆ ಸೇರುತ್ತಾ ಕಾರವಾರ ?

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕು ಗೋವಾ ರಾಜ್ಯಕ್ಕೆ ಸೇರುತ್ತಾ..? ಕರ್ನಾಟಕದಿಂದ ಹೊರಕ್ಕೆ ಹೋಗುತ್ತಾ? ಹೀಗೊಂದು ಪ್ರಶ್ನೆ ಎದ್ದಿದೆ. 

ಕಾರವಾರ [ಡಿ.30]: ಕಾರವಾರ ಹಾಗೂ ಜೋಯಿಡಾವನ್ನು ಗೋವಾಕ್ಕೆ ಸೇರಿಸುವ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮಂಡಿಸಲು ಗೋವಾ ಕೊಂಕಣಿ ರಾಜ್ಯ ಏಕೀಕರಣ ಮಂಚ್‌ ನಿರ್ಧರಿಸಿದೆ. 

ಆ ಮೂಲಕ ಗಡಿ ವಿವಾದವನ್ನು ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿದೆ. ಗೋವಾದ ಕಾಣಕೋಣದಲ್ಲಿ ಮಂಚ್‌ ಸಂಯೋಜಕಿ ಆಶಾ ಪಾಲನಕರ ಈ ಕುರಿತು ಮಾಹಿತಿ ನೀಡಿದ್ದಾರೆ. ಕಾರವಾರ ಹಾಗೂ ಜೋಯಿಡಾ ಈ ಎರಡೂ ತಾಲೂಕುಗಳಲ್ಲಿ ಕೊಂಕಣಿ ಭಾಷಿಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಹೀಗಾಗಿ ಈ ಎರಡು ತಾಲೂಕನ್ನು ಗೋವಾಕ್ಕೆ ಸೇರಿಸಿದಲ್ಲಿ ಗೋವಾದಲ್ಲಿ ಕೊಂಕಣಿಗರ ಸಂಖ್ಯೆ ಹೆಚ್ಚಲಿದೆ ಎನ್ನುವುದು ಮಂಚ್‌ನ ವಾದವಾಗಿದೆ. ಗೋವಾಕ್ಕೆ ಸೇರಿಸಿದಲ್ಲಿ ವಿದ್ಯುತ್‌ ಮತ್ತು ಮರಳಿನ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಮಂಚ್‌ ವಾದಿಸುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ಕರ್ನಾಟಕ ಹಲವು ಭಾಗಗಳನ್ನು ವಿವಿಧ ರಾಜ್ಯಗಳಿಗೆ ಸೇರುವ ಬಗ್ಗೆ ಚರ್ಚೆಗಳಾಗುತ್ತಲೇ ಇದ್ದು ಇದೀಗ ಕಾರವಾರದ ವಿಚಾರವೂ ಚರ್ಚೆಗೆ ಎದ್ದಿದೆ. 

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ