'ಪೇಜಾವರ ಶ್ರೀಗಳಿಂದ ರಾಮಮಂದಿರ ಶಂಕು ಸ್ಥಾಪನೆ ಮಾಡಿಸುವ ಇಚ್ಛೆ ಇತ್ತು'

By Suvarna News  |  First Published Dec 29, 2019, 1:33 PM IST

ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ದೈವಾಧೀನರಾಗಿದ್ದು, ಅವರ ನಿಧನಕ್ಕೆ ಹಲವು ಪ್ರಮುಖಂಡರು ಕಂಬನಿ ಮಿಡಿದಿದ್ದಾರೆ. ಸಿದ್ದಲಿಂಗ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ. 


ತುಮಕೂರು [ಡಿ.29]: ಶ್ರೇಷ್ಠ ಸಂತ ಮಹಾನ್ ಯತಿವರ್ಯರಾದ ಪೇಜಾವರ ಶ್ರೀಗಳು ದೈವಾದೀನರಾಗಿದ್ದು, ಶ್ರೀಗಳ ಅಗಲಿಕೆ ತೀವ್ರ ನೋವು ತಂದಿದೆ. ವೈದ್ಯರ ಪ್ರಯತ್ನದ ನಡುವೆಯೇ ಅವರು ನಮ್ಮನ್ನು ಅಗಲಿದ್ದಾರೆ ಎಂದು ತುಮಕೂರಿನ ಸಿದ್ದಲಿಂಗ ಸ್ವಾಮೀಜಿ ಹೇಳಿದರು. 

ನಾಡು ರಾಷ್ಟ್ರಕ್ಕೆ ಅತ್ಯದ್ಭುತವಾದ ಸೇವೆ ಸಲ್ಲಿಸಿ, ಸಂಘಟನೆ ಸಂಸ್ಕಾರದ ಸೇವೆ ಮಾಡಿಕೊಂಡಿದ್ದ ಅವರ ಅಗಲಿಕೆ ನೋವನ್ನುಂಟು ಮಾಡಿದೆ ಎಂದರು. 

Tap to resize

Latest Videos

ಅಯೋಧ್ಯೆಯ ರಾಮಜನ್ಮಭೂಮಿ ನಿರ್ಮಾಣ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಸ್ವಾಮೀಜಿಗಳು, ಆರೋಗ್ಯವಾಗಿದ್ದಾಗಲೇ ತೀರ್ಪು ಪ್ರಕರಣಟವಾಗಿ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿತ್ತು ಎಂದು ಸಿದ್ದಗಂಗಾ ಶ್ರೀಗಳು ಹೇಳಿದರು. 

ಪೇಜಾವರ ಶ್ರೀಗಳ ಬಗೆಗಿನ ಕ್ಷಣ ಕ್ಷದ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಅಯೋಧ್ಯೆ ರಾಮಮಂದಿರಕ್ಕೆ ಅವರಿಂದಲೇ ಶಂಕುಸ್ಥಾಪನೆ ಮಾಡಿಸಬೇಕು ಎನ್ನುವ ಅಪೇಕ್ಷೆ ಇತ್ತು.  ಆದರೆ ಪ್ರಕೃತಿ ನಿಯಮದಂತೆ ಅವರು ಅಸ್ತಂಗತರಾಗಿದ್ದಾರೆ. ದೊಡ್ಡ ಸಂತರಾಗಿ ಆಧ್ಯಾತ್ಮದ ಸಾಧನೆ ಮಾಡಿದ್ದಾರೆ ಎಂದು ಸಿದ್ಧಗಂಗಾ ಶ್ರೀಗಳು ಹೇಳಿದರು. 

ಪೇಜಾವರ ಶ್ರೀಗಳ ಬಗೆಗಿನ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೇಜಾವರ ಶ್ರೀ ಅವರ ಸಾಮಾಜಿಕ ಕಳಕಳಿ, ಸೇವಾ ಕೈಂಕರ್ಯ ನಮಗೆಲ್ಲಾ ಆದರ್ಶ. ಮಠದ ಕಿರಿಯ ಶ್ರೀಗಳಿಗೆ ಪೇಜಾವರ ಅಗಲಿಕೆ ದುಃಖ ತಡೆದುಕೊಳ್ಳ ಶಕ್ತಿ ಭಗವಂತ ನೀಡಲಿ. ಸಿದ್ದಗಂಗಾ ಮಠದ ಬಗ್ಗೆ ಹಾಗೂ ಶಿವಕುಮಾರ ಮಹಾಸ್ವಾಮೀಜಿಗಳ ಬಗ್ಗೆ ಅಪಾರವಾದ ಕಳಕಳಿ ಭಕ್ತಿ ಹೊಂದಿದ್ದರು. 

ಶಿವಕುಮಾರ ಸ್ವಾಮಿಗಳು, ಪೇಜಾವರ ಸ್ವಾಮಿಗಳಿಗೆ ಮಹಾಸ್ವಾಮಿಗಳು ಅಂತ ಹೇಳುತ್ತಿದ್ದರು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಹೇಳಿದರು.

ಡಿಸೆಂಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!