ಅರಣ್ಯ ಇಲಾಖೆ ಸಿಬ್ಬಂದಿ ಎಡವಟ್ಟು: ಫೈರ್‌ಲೈನ್‌ ರೂಪಿಸಲು ಹಚ್ಚಿದ ಬೆಂಕಿಗೆ ರೈತನ ತೋಟ ಸುಟ್ಟು ಭಸ್ಮ

By Kannadaprabha News  |  First Published Mar 3, 2023, 7:30 AM IST
  • ಫೈರ್‌ಲೈನ್‌ ರೂಪಿಸಲು ಹಚ್ಚಿದ ಬೆಂಕಿ ತೋಟಕ್ಕೆ ಕಂಟಕ
  • ಅರಣ್ಯ ಇಲಾಖೆ ಸಿಬ್ಬಂದಿ ಎಡವಟ್ಟು
  • ರೈತರೊಬ್ಬರ ಲಕ್ಷಾಂತರ ಮಾವು, ತೆಂಗು ಹಾನಿ

ಧಾರವಾಡ (ಮಾ.3) : ಬಿರು ಬೇಸಿಗೆಯ ಕಾರಣ ಗುಡ್ಡದ ಸುತ್ತ ಕಾಡ್ಗಿಚ್ಚು ಹರಡದಿರಲಿ ಎಂದು ಮುಂಜಾಗ್ರತೆಗಾಗಿ ಫೈರ್‌ಲೈನ್‌ ರೂಪಿಸಲು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹಚ್ಚಿದ ಪರಿಣಾಮ ತಾಲೂಕಿನ ಮಂಡಿಹಾಳ ಗ್ರಾಮ ವ್ಯಾಪ್ತಿಯ ರೈತರೊಬ್ಬರ ತೋಟದಲ್ಲಿ ಅಂದಾಜು .3.5 ಲಕ್ಷ ಬೆಳೆ ನಷ್ಟಸಂಭವಿಸಿದೆ. ಅದರಲ್ಲೂ ಇನ್ನೇನು ತಿಂಗಳಲ್ಲಿ ಕೈಗೆ ಸಿಗುತ್ತಿದ್ದ ಮಾವಿನ ಕಾಯಿಗಳು ಸುಟ್ಟು, ಬೆಂದು ಹೋಗಿವೆ.

ಘಟನೆಯು ಗುರುವಾರ ನಸುಕಿನಜಾವ ಬೆಳಕಿಗೆ ಬಂದಿದೆ. ಹೊಲದ ಮಾಲೀಕರಾದ ಅಪರ್ಣಾ ರವಿಶಂಕರ ನಾಯಂಪಲ್ಲಿ(Aparna ravishankar nayampalli) ಪರವಾಗಿ ಹೊಲದ ಉಸ್ತುವಾರಿ ಸಾವಯವ ಕೃಷಿಕ(Organic farmer) ಕೃಷ್ಣಕುಮಾರ್‌ ಭಾಗವತ್‌(Krishnakumar bhagwat) ಗುರುವಾರ ಈ ಕುರಿತು ಸಂಬಂಧಪಟ್ಟಅಧಿಕಾರಿಗಳಿಗೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಅರಣ್ಯ ಇಲಾಖೆಯಿಂದ ಪರಿಹಾರ ಕೋರಿದ್ದಾರೆ.

Latest Videos

undefined

 

Gadag: ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!

ತಾಲೂಕು ವ್ಯಾಪ್ತಿಯ ಮಂಡಿಹಾಳ ಗ್ರಾಮ ಪಂಚಾಯ್ತಿ(Mandihala grama panchayath) ಹದ್ದಿನಲ್ಲಿರುವ 56 ಎಕರೆ ಜಮೀನಿನ ಪೂರ್ವ ಮತ್ತು ಪಶ್ಚಿಮಕ್ಕೆ ಕಳೆದ ಮೂರು ದಿನಗಳಿಂದ ಇಲಾಖೆ(Forest depertment)ಯ ಸಿಬ್ಬಂದಿ (ಗಾರ್ಡ್‌/ವಾಚರ್‌), ಮಂಡಿಹಾಳ ಗುಡ್ಡ ತಟಾಕು, ಅರಣ್ಯ ಭೂಮಿಯಲ್ಲಿ ಫೈರ್‌ಲೈನ್‌ ಮತ್ತು ಒಣಗಿದ ಹುಲ್ಲು ಸುಡುವ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಆದರೆ, ಬುಧವಾರ ಮಧ್ಯಾಹ್ನ 2ರ ಸುಮಾರಿಗೆ, ಬೆಂಕಿಯ ಕೆನ್ನಾಲಿಗೆ ತೋಟಕ್ಕೆ ವ್ಯಾಪಿಸಿ, ಗಿಡಗಳು ಝಳಕ್ಕೆ ಸುಟ್ಟು ಕರಕಲಾಗಿವೆ. ಬೆಂಕಿ ಹೊತ್ತಿಸಿದ ಇಲಾಖೆ ಸಿಬ್ಬಂದಿ, ಬೆಂಕಿ ನಿಯಂತ್ರಿಸಬೇಕಾಗಿತ್ತು. ಅವರ ಸುಳಿವೇ ಅಲ್ಲಿರಲಿಲ್ಲ. ಮೊದಲೇ ರೈತರಿಗೆ ಮಾಹಿತಿ ನೀಡಿಲ್ಲ. ಆರು ವರ್ಷಗಳ ಮಾವಿನ ಗಿಡ ಆಪೂಸ್‌ ಫಲ ಹೊದ್ದು ನಿಂತಿದ್ದ ಸುಮಾರು 150 ಮಾವಿನಮರಗಳು, 7 ವರ್ಷದ ಫಲ ಭರಿತ ತೆಂಗು ಮತ್ತು 9 ವರ್ಷದ ಸಾಗುವಾನಿ ಮರಗಳು ಬೆಂಕಿಗೆ ಬೆಂದು ಹೋಗಿವೆ.

ಅಕಸ್ಮಾತ್‌ ಅಕ್ಕ ಪಕ್ಕದ ಹೊಲದವರು ಎಚ್ಚರಿಸದಿದ್ದರೆ, 5 ಟ್ರ್ಯಾಕ್ಟರ್‌ ಮೇವು, ಎರಡು ಮನೆಗಳು, ಅಲ್ಲಿಯೇ ಕಟ್ಟುತ್ತಿದ್ದ ದನ ಕರು ಸುಟ್ಟು ಕರಕಲಾಗುತ್ತಿದ್ದವು. ಹೊಲದಲ್ಲಿ ಜೇನು ಕೃಷಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಾಲ್ಕು ಜೇನು ಕುಟುಂಬಗಳು ಸಹ ಅಲ್ಲಿಂದ ಹಾರಿ, ಜೀವ ಉಳಿಸಿಕೊಂಡಿವೆ.

ಘಟನೆಗೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ವಿಚಾರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು. ನಮಗಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಲು, ಸ್ಥಳ ಭೇಟಿ ನೀಡಿ, ಸಮೀಕ್ಷೆ ಕೈಗೊಂಡು ಆದಷ್ಟುಬೇಗ ಕ್ರಮ ವಹಿಸಬೇಕು ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

Crime News: ಬಡ ರೈತನ ಗುಡಿಸಲಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; 50 ಸಾವಿರ ರೂ. ಮೌಲನ್ಯ ದಿನಸಿ ಸಾಮಗ್ರಿ ಸುಟ್ಟು ಭಸ್ಮ

ಅಂದಾಜು ಮೂರು ಎಕರೆ ಪ್ರದೇಶದಲ್ಲಿ, ಮೂರೂವರೆ ಲಕ್ಷ ರು.ನಷ್ಟುನಷ್ಟಸಂಭವಿಸಿದೆ. ಈ ಕುರಿತು ಅರಣ್ಯ ಇಲಾಖೆಯ ಸ್ಥಳೀಯ ಸಿಬ್ಬಂದಿ ವಿಚಾರಿಸಲಾಗಿ ಹೊಲದಲ್ಲಿಯ ಟ್ರಾನ್ಸ್‌ಫಾರ್ಮರ್‌ ಕಿಡಿ ಹಾರಿ, ಬೆಂಕಿ ಹತ್ತಿದ್ದಾಗಿ ದೂರವಾಣಿಯಲ್ಲಿ ವಾದಿಸಿದರು. ಟ್ರಾನ್ಸ್‌ಫಾರ್ಮರ್‌ ಅಕ್ಕ-ಪಕ್ಕದ 20ಕ್ಕೂ ಹೆಚ್ಚು ಮರಗಳಿಗೂ ಏನೂ ಆಗಿಲ್ಲ! ಅವರ ಮೈಮರೆವು ನಮಗೆ ತುಂಬಿ ಬಾರದ ಹಾನಿಯನ್ನುಂಟು ಮಾಡಿದೆ.

-ಕೃಷ್ಣಕುಮಾರ್‌ ಭಾಗವತ್‌, ನಷ್ಟಅನುಭವಿಸಿದ ಕೃಷಿಕ

click me!