ಗ್ರಾಮಸ್ಥರ ಒತ್ತಾಸೆಯಂತೆ ಬೇಡತ್ತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ವೈಯಕ್ತಿಕವಾಗಿ .10 ಲಕ್ಷ ನೆರವು ನೀಡುತ್ತಿರುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಮಧುಗಿರಿ : ಗ್ರಾಮಸ್ಥರ ಒತ್ತಾಸೆಯಂತೆ ಬೇಡತ್ತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ವೈಯಕ್ತಿಕವಾಗಿ .10 ಲಕ್ಷ ನೆರವು ನೀಡುತ್ತಿರುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಶುಕ್ರವಾರ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ 10 ಲಕ್ಷ ನಗದು ಸಹಾಯಧನವನ್ನು ವಿತರಿಸಿ ಮಾತನಾಡಿದರು. ದೇಗುಲದ ಅಭಿವೃದ್ಧಿಗೆ ಶಾಸಕರ ಅನುದಾನ 5 ಲಕ್ಷವನ್ನು ಈ ಹಿಂದೆಯೇ ನೀಡಿದ್ದೆ. ಗ್ರಾಮಸ್ಥರು ದೈವದ ಬಗ್ಗೆ ಇಟ್ಟಿರುವ ಕಾಳಜಿಯನ್ನು ನೋಡಿ ಸಂತೋಷವಾಗಿದೆ. ಹಿಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತವನ್ನು ನನಗೆ ನೀಡಿದ್ದೀರಿ. ಈ ಬಾರಿಯೂ ಚುನಾವಣೆಯಲ್ಲಿ ನನಗೆ ಅದೇ ಬಹುಮತವನ್ನು ನೀಡಿ ಆಶೀರ್ವಾದ ಮಾಡಿ. ನಂತರ ದೇಗುಲದ ಉಳಿದ ಎಲ್ಲ ಕೆಲಸವನ್ನು ಪೂರ್ಣಗೊಳಿಸಿಕೊಡುತ್ತೇನೆ. ಇದರೊಂದಿಗೆ ಗ್ರಾಮದ ಶನಿಮಹಾತ್ಮ ದೇಗುಲದ ಜೀರ್ಣೋದ್ಧಾರ ಕೂಡ ಮಾಡಿಸಿಕೊಡುತ್ತೇನೆ. ಈ ದೇಗುಲದ ಉದ್ಘಾಟನೆಯನ್ನು ನಾನೇ ಮಾಡುವ ವಿಶ್ವಾಸವಿದ್ದು ನಿಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದರು.
undefined
ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್.ಜಗಣ್ಣ, ಚಂದ್ರಶೇಖರ್ ಬಾಬು, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು ಮಾತನಾಡಿದರು. ಮುಖಂಡರಾದ ಬಿಜವರ ಶ್ರೀನಿವಾಸ್, ಚೌಡಪ್ಪ, ಗ್ರಾ.ಪಂ. ಅಧ್ಯಕ್ಷೆ ಭೂಮಿಕಾ, ಮಿಡಿಗೇಶಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲ್‌ರೆಡ್ಡಿ, ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ಸುರೇಶ್, ರೆಡ್ಡಿಹಳ್ಳಿ ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಮಿಲ್‌ಚಂದ್ರು, ಗ್ರಾಮದ ಮುಖಂಡರಾದ ಅಂಜನರೆಡ್ಡಿ, ವಿಜಿಕುಮಾರ್, ಬ್ರಹ್ಮಾನಂದರೆಡ್ಡಿ, ಶಾಮಿಯಾನ ಗಂಗಾಧರ್, ಚಂದ್ರು, ಅನಿಲ್ ಬಾಬು, ಲೋಕೇಶ್, ನಾರಾಯಣ್, ಗಂಗಾಧರ್, ಮಲ್ಲಪ್ಪ, ಮಂಜುನಾಥ್, ಸ್ಕ್ರೀನ್ ಜಗನ್ನಾಥ್, ನವೀನ್ ಬಿ.ಟಿ. ಹಾಗೂ ನೂರಾರು ಸಾರ್ವಜನಿಕರು ಇದ್ದರು.
.1200 ಕೋಟಿ ಅನುದಾನ ತಂದಿರುವೆ: ಶಾಸಕ ಭೀಕರ ಬರಗಾಲ, ಕೊರೋನಾ ಹಾಗೂ ತಾರತಮ್ಯ ಮಾಡುವ ಸರ್ಕಾರವಿದ್ದರೂ ಕ್ಷೇತ್ರಕ್ಕೆ 1200 ಕೋಟಿ ರು. ಅನುದಾನ ತಂದು ಅಭಿವೃದ್ಧಿ ಮಾಡಿರುವ ತೃಪ್ತಿಯಿದೆ. ಮುಂದೆ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯೋಜನೆ ಜಾರಿಗೆ ಮುಂದಾಗಿದ್ದು, ಎಲ್ಲ ಮಕ್ಕಳಿಗೂ 12ನೇ ತರಗತಿಯವರೆಗೂ ಉಚಿತ ಶಿಕ್ಷಣ, ಪ್ರತಿ ಕುಟುಂಬಕ್ಕೂ 50 ಲಕ್ಷದವರೆಗಿನ ಆರೋಗ್ಯ ವಿಮಾ ಸೇವೆ, ಯುವ ಶಕ್ತಿಗೆ ಉದ್ಯೋಗ, ವ್ಯವಸಾಯಕ್ಕೆ ಪೂರಕ ವಾತಾವರಣ, ಪ್ರತಿ ಕುಟುಂಬಕ್ಕೆ ಸದೃಡ ಮನೆ ನೀಡುವ ಯೋಜನೆಯಿದೆ.
ಇದರೊಂದಿಗೆ 60 ವರ್ಷ ತುಂಬಿದ ವೃದ್ಧರಿಗೆ 5 ಸಾವಿರ ಹಾಗೂ ವಿಧವಾ ಮಹಿಳೆಯರಿಗೆ ಮಾಸಿಕ 2500 ಮಾಸಾಶನವನ್ನು ನೀಡಲಿದ್ದಾರೆ. ಇವೆಲ್ಲ ಕಾರ್ಯಕ್ರಮ ಜಾರಿಗೆ ಎಲ್ಲರೂ ಜೆಡಿಎಸ್‌ನ್ನು ಬೆಂಬಲಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಮನವಿ ಮಾಡಿದರು.