ಹೆಣ್ಣು ಆರ್ಥಿಕವಾಗಿ ಆತ್ಮಸ್ಥೆರ್ಯ ಬೆಳೆಸಿಕೊಳ್ಳಬೇಕು

By Kannadaprabha News  |  First Published Feb 14, 2023, 6:42 AM IST

  ಹೆಣ್ಣು ಆರ್ಥಿಕವಾಗಿ ಸಬಲಳಾಗಬೇಕು, ಸಾಕಷ್ಟುಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲ ಚೌಕಟ್ಟುಗಳನ್ನು ಮೀರಿ ಬದುಕಲು ಸಾಧ್ಯ. ಇಲ್ಲದೆ ಹೋದರೆ ಹಲವು ಒತ್ತಡಗಳಿಗೆ ಒಳಗಾಗಿ ದಾಸ್ಯದಲ್ಲಿಯೇ ಬದುಕಬೇಕಾಗುತ್ತದೆ ಎಂದು ಲೇಖಕಿ ಶೈಲಜಾ ನಾಗರಘಟ್ಟಹೇಳಿದರು.


  ತುಮಕೂರು :  ಹೆಣ್ಣು ಆರ್ಥಿಕವಾಗಿ ಸಬಲಳಾಗಬೇಕು, ಸಾಕಷ್ಟುಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲ ಚೌಕಟ್ಟುಗಳನ್ನು ಮೀರಿ ಬದುಕಲು ಸಾಧ್ಯ. ಇಲ್ಲದೆ ಹೋದರೆ ಹಲವು ಒತ್ತಡಗಳಿಗೆ ಒಳಗಾಗಿ ದಾಸ್ಯದಲ್ಲಿಯೇ ಬದುಕಬೇಕಾಗುತ್ತದೆ ಎಂದು ಲೇಖಕಿ ಶೈಲಜಾ ನಾಗರಘಟ್ಟಹೇಳಿದರು.

ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯ ಲೇಖಕಿ ಬಯಲ ಓದು ಬಳಗವು ಆಯೋಜಿಸಿದ್ದ ಪುಸ್ತಕ ಓದು-ಚರ್ಚೆ-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Tap to resize

Latest Videos

ನಾನು ಬಾಲ್ಯದಿಂದಲೂ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಂಡೆ. ಪ್ರತಿಯೊಂದು ಹೋರಾಟವು ಒಂದು ಅನುಭವವನ್ನು ಪ್ರತಿಯೊಂದು ಅನುಭವವು ಹೊಸದೊಂದು ಪಾಠವನ್ನು ಕಲಿಸುತ್ತಲೇ ಬಂದಿವೆ. ಹೀಗೆ ಪಡೆದ ಅನುಭವಗಳನ್ನು, ಕಲಿತ ಪಾಠಗಳನ್ನು ದಾಖಲಿಸುವ ಪ್ರಯತ್ನವೇ ನನ್ನ ಕಿಚ್ಚಿಲ್ಲದ ಬೇಗೆ ಕೃತಿ ಎಂದರು.

ಪುಸ್ತಕದ ಕುರಿತು ಸಾಹಿತಿ ಗೀತಾಲಕ್ಷ್ಮೀ ಮಾತನಾಡಿ, ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ನಮ್ಮನ್ನು ಸಮಾಜಕ್ಕೆ ಮುಖಾಮುಖಿಯಾಗಿಸುತ್ತದೆ. ನಿರಂತರ ಸವಾಲುಗಳನ್ನೇ ಎದುರಿಸುತ್ತಾ, ಅದರಾಚೆಗೂ ಜೀವಪರ ನಿಲುವುಗಳನ್ನು ತಳೆದು ಬದುಕನ್ನು ಚಂದಗಾಣಿಸಿಕೊಂಡ ಲೇಖಕಿಯ ಬದುಕು ಈ ಕೃತಿಯ ಉದ್ದಕ್ಕೂ ತುಂಬಿದೆ ಎಂದರು.

ಉಪನ್ಯಾಸಕ ಡಾ. ಪವನ್‌ ಗಂಗಾಧರ್‌ ಮಾತನಾಡಿ, ಬದುಕನ್ನು ಪ್ರೀತಿಸುವ ಕಲೆಯನ್ನು ಈ ಪುಸ್ತಕ ಕಲಿಸಿ ಕೊಡುತ್ತದೆ. ಲೇಖಕಿ ಶೈಲಾರವರು ರೂಪುಗೊಂಡ ಬಗೆಯನ್ನು ಈ ಕೃತಿ ಸಮರ್ಥವಾಗಿ ನಿರೂಪಿಸಿದೆ. ಹಲವು ದಟ್ಟಅನುಭವಗಳನ್ನು ಕೊಡುತ್ತಲೇ ಓದುಗರನ್ನು ಚಿಂತೆಗೆ ಹಚ್ಚುವ ಶಕ್ತಿ ಈ ಕೃತಿಯಲ್ಲಿದೆ ಎಂದರು.

ಉಪನ್ಯಾಸಕಿ ಅಕ್ಷತಾ ಮಾತನಾಡಿ, ಕಿಚ್ಚಿಲ್ಲದ ಬೇಗೆ ಇಂದಿನ ಸನ್ನಿವೇಶಕ್ಕೆ ಅತ್ಯಂತ ಪ್ರಸ್ತುತವಾದ ಕೃತಿ. ಅಂತರ್ಜಾತಿ ವಿವಾಹವಾದ ಮಹಿಳೆ ಅನುಭವಿಸುವ ನೋವು ಯಾತನೆ, ಏಕಾಂಗಿತನಗಳನ್ನು, ಹೆಜ್ಜೆ ಹೆಜ್ಜೆಗೂ ಸಾಮಾಜಿಕ ಕಟ್ಟುಪಾಡುಗಳನ್ನು ಮೀರುವ ಲೇಖಕಿಯರ ಸಾಹಸವನ್ನು ಈ ಕೃತಿ ಸಮರ್ಥವಾಗಿ ಚಿತ್ರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಿಎ ಇಂದಿರಾ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕಿ ಗೀತಾ ವಸಂತ, ಲೇಖಕಿ ರಾಣಿ ಚಂದ್ರಶೇಖರ್‌, ಉಪನ್ಯಾಸಕಿ ಆಶಾ ಬಗ್ಗನಡು, ಹಾಗೂ ಕವಯತ್ರಿ ಮರಿಯಂಬಿ ಮುಂತಾದವರು ಹಾಜರಿದ್ದರು.

ಕೆಲಸದಿಂದ ವಜಾ ಆದವನ ಕಥೆ

ವಾಷಿಂಗ್ಟನ್‌ (ಜನವರಿ 30, 2023): ಮಹಿಳಾ ಕಾರ್ಯನಿರ್ವಾಹಕರೊಬ್ಬರು ತನ್ನನ್ನು ತಬ್ಬಿಕೊಂಡಿದ್ದನ್ನು ವಿರೋಧಿಸಿದ್ದಕ್ಕೆ  ಕಂಪನಿಯ ಅಧಿಕಾರಿಗಳು ತನ್ನನ್ನು ವಜಾಗೊಳಿಸಿದ್ದಾರೆ ಎಂದು ಗೂಗಲ್‌ ಸಂಸ್ಥೆಯ ಮಾಜಿ ಉದ್ಯೋಗಿ ರಯಾನ್ ಓಲೋಹಾನ್ ಹೇಳಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. ಟಿಫಾನಿ ಮಿಲ್ಲರ್ ರಾತ್ರಿಯ ಊಟದ ಸಮಯದಲ್ಲಿ ತನ್ನನ್ನು ತಬ್ಬಿಕೊಂಡರು, ಮತ್ತು ಡಿಸೆಂಬರ್ 2019 ರಲ್ಲಿ ಮ್ಯಾನ್‌ಹ್ಯಾಟನ್‌ನ ಚೆಲ್ಸಿಯಾದಲ್ಲಿ ಏಷ್ಯನ್ ಮಹಿಳೆಯರೊಂದಿಗೆ ತನಗೆ ಬಾಂಧವ್ಯವಿದೆ ಎಂದು ತಿಳಿದಿತ್ತು ಎಂದು ಹೇಳಿದರು ಎಂದು ಆ ವ್ಯಕ್ತಿ ನವೆಂಬರ್‌ನಲ್ಲಿ ಮೊಕದ್ದಮೆಯನ್ನೂ ಹೂಡಿದ್ದಾರೆ. 

ಆರೋಪಿಯು (Accused) ಗೂಗಲ್‌ನ (Google) ಪ್ರೋಗ್ರಮ್ಯಾಟಿಕ್ ಮಾಧ್ಯಮದ ನಿರ್ದೇಶಕರಾಗಿದ್ದು, ಅವರು ರಯಾನ್ ಓಲೋಹಾನ್ (Ryan Olohan) ಅವರ ಆಬ್ಸ್‌ ಅನ್ನು ಉಜ್ಜಿದರು, ದೇಹವನ್ನು (Body) ಶ್ಲಾಘಿಸಿದರು ಮತ್ತು ಮದುವೆಯಲ್ಲಿ (Wedding) ಸ್ಪೈಸ್‌ ಇಲ್ಲ ಎಂದು ಹೇಳಿದರು ಎಂದು ಕೋರ್ಟ್‌ ಪೇಪರ್ಸ್‌ ಹೇಳುತ್ತದೆ.  ಆಹಾರ, ಪಾನೀಯಗಳು ಮತ್ತು ರೆಸ್ಟೋರೆಂಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿ ರಯಾನ್ ಓಲೋಹಾನ್ ಬಡ್ತಿ ಪಡೆದ ನಂತರ, ಆಲ್ಕೋಹಾಲ್ ಒಳಗೊಂಡ ಕಂಪನಿಯ ಸಭೆಯು ಫಿಗ್ & ಆಲಿವ್‌ನಲ್ಲಿ ನಡೆಯಿತು. ಟಿಫಾನಿ ಮಿಲ್ಲರ್ ಆ ಹೊಸ ತಂಡದ ಭಾಗವಾಗಿದ್ದರು ಎಂದು ವರದಿಯಾಗಿದೆ.

ಇದನ್ನು ಓದಿ: ಗೂಗಲ್‌ನಿಂದ 12,000 ಉದ್ಯೋಗಿಗಳ ಕಡಿತ, ಸಿಇಒ ಸುಂದರ್ ಪಿಚೈ ಭಾವುಕ ಸಂದೇಶ!

ಮೊಕದ್ದಮೆಯ ಪ್ರಕಾರ, ಏಳು ಮಕ್ಕಳ ವಿವಾಹಿತ ತಂದೆಯಾದ ರಯಾನ್  ಓಲೋಹನ್ ಅವರು ಆರಂಭದಲ್ಲಿ ಈ ದೂರನ್ನು ಕೋರ್ಟ್‌ ಮುಂದೆ ತರಲು ಮುಜುಗರಪಟ್ಟಿದ್ದೆ. ಏಕೆಂದರೆ ಎಲ್ಲರೂ ಕುಡಿದಿದ್ದರು ಮತ್ತು ಅವರ ಸಹೋದ್ಯೋಗಿಗಳು ಸಹ ಟಿಫಾನಿಯನ್ನು ಸಮರ್ತಿಸಿಕೊಂಡರು ಎಂದೂ ನ್ಯಾಯಾಲಯದ ಪತ್ರಿಕೆಗಳು ಹೇಳುತ್ತವೆ. ಅಲ್ಲದೆ, ರಯಾನ್ ಓಲೋಹಾನ್ ಘಟನೆ ನಡೆದ ಮುಂದಿನ ವಾರ ಮಾನವ ಸಂಪನ್ಮೂಲ ಇಲಾಖೆಗೆ ಸಮಸ್ಯೆಯನ್ನು ವರದಿ ಮಾಡಿದರು, ಆದರೆ ಇಲಾಖೆ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ತಿಳಿದುಬಂದಿದೆ.

click me!