* ಅಜ್ಜಿ ಮನೆಗೆ ಎಂದು ಚಿರೇಖಾನಿ ಗ್ರಾಮಕ್ಕೆ ಬಂದಿದ್ದ ಬಾಲಕಿ
* ಏ. 26ರಂದು ಮನೆ ಬಳಿ ಆಟವಾಡುತ್ತಿದ್ದಾಗ ನಾಪತ್ತೆ
* ಇರುವೆ, ಚಿರಳೆಗಳು ಕಚ್ಚಿ ನಿತ್ರಾಣ ಸ್ಥಿತಿಯಲ್ಲಿದ್ದ ಬಾಲಕಿ ಪ್ರಾಣಾಪಾಯದಿಂದ ಪಾರು
ಬೆಳಗಾವಿ(ಮೇ.01): ಏ. 26ರಂದು ಮನೆ ಎದುರು ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕಿ(Girl) 4 ದಿನಗಳ ಬಳಿಕ ನಿತ್ರಾಣ ಸ್ಥಿತಿಯಲ್ಲಿ ಅರಣ್ಯದಲ್ಲಿ(Forest) ಪತ್ತೆಯಾಗಿದ್ದಾಳೆ. ಬೆಳಗಾವಿ(Belagavi) ಜಿಲ್ಲೆ ಖಾನಾಪುರ ತಾಲೂಕಿನ ಜಾಂಬೋಟಿ ಹೋಬಳಿ ವ್ಯಾಪ್ತಿಯ ಚಿರೇಖಾನಿ ಗ್ರಾಮದಿಂದ ಎರಡೂವರೆ ಕಿಲೋಮೀಟರ್ ಅಂತರದ ಅರಣ್ಯದಲ್ಲಿ ನಿನ್ನೆ(ಶನಿವಾರ) ಸಂಜೆ ಪತ್ತೆಯಾಗಿದ್ದಾಳೆ.
ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ್ ಪತ್ನಿ, ಮಗುವಿನ ಜೊತೆ ಪತ್ನಿಯ ತವರು ಮನೆ ಚಿರೇಖಾನಿ ಗ್ರಾಮಕ್ಕೆ ಆಗಮಿಸಿದ್ದರು. ಏ. 26ರಂದು ಮನೆ ಎದುರು ಆಟವಾಡುತ್ತಿದ್ದ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು(Missing). ಎರಡು ದಿನಗಳ ಕಾಲ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಬಾಲಕಿ ಪತ್ತೆಯಾಗದ ಹಿನ್ನೆಲೆ ಖಾನಾಪುರ ಪೊಲೀಸ್(Police) ಠಾಣೆಗೆ ದೂರು ನೀಡಿದ್ದರು.
Karnataka Politics: ಸುಮಲತಾರಿಗೆ ನ್ಯಾಚುರಲ್ ಚಾಯ್ಸ್ ಬಿಜೆಪಿ: ಸಚಿವ ಅಶ್ವತ್ಥ್ ನಾರಾಯಣ್
ಕಾಡಂಚಿನ ಗ್ರಾಮವಾಗಿದ್ದರಿಂದ ಬಾಲಕಿ ಪತ್ತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ನೆರವನ್ನು ಪೊಲೀಸರು ಕೇಳಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರ ಸಹಾಯದಿಂದ ಅರಣ್ಯದಲ್ಲಿ ಶೋಧ ಕಾರ್ಯ ನಡೆಸಿದ್ದರು.
ಈ ವೇಳೆ ನಿನ್ನೆ ಸಂಜೆ ಚಿರೇಖಾನಿ ಗ್ರಾಮದಿಂದ ಎರಡೂವರೆ ಕಿಲೋಮೀಟರ್ ದೂರದ ಅರಣ್ಯದಲ್ಲಿ ಮರದ ಕೆಳಗೆ ಬಾಲಕಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಕಾಲಿಗೆ ಇರುವೆ, ಚಿರಳೆಗಳು(Leopard) ಕಚ್ಚಿದ್ದರಿಂದ ನಿತ್ರಾಣಗೊಂಡಿದ್ದಳು. ತಕ್ಷಣ ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ(Hospital) ರವಾನಿಸಲಾಗಿತ್ತು.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗಳ ಜೊತೆ ಪೋಷಕರು ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಇನ್ನೂ ಮನೆ ಎದುರು ಆಟವಾಡುತ್ತಿದ್ದ ಬಾಲಕಿ ಇದ್ದಕ್ಕಿದ್ದ ಹಾಗೇ ಅರಣ್ಯಕ್ಕೆ ಹೋಗಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಸದ್ಯ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಖಾನಾಪುರ(Khanapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ(Investigation) ಮುಂದುವರಿದಿದೆ.