ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಾಲಕಿ ಸಾವು| ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಡೋಂಕಮಡಿ ಗ್ರಾಮದಲ್ಲಿ ನಡೆದ ಘಟನೆ| ನೂರಾರು ಎಕರೆ ಕೃಷಿ ಜಮೀನು ಜಲಾವೃತ|
ವಿಜಯಪುರ(ಸೆ.28): ರಾಜ್ಯದ ಹಲವೆಡೆ ಭಾನುವಾರವೂ ವರುಣನ ಅಬ್ಬರ ಮುಂದುವರಿದಿದ್ದು, ಮನೆಯ ಗೋಡೆ ಕುಸಿದ ಪರಿಣಾಮ ವಿಜಯಪುರದಲ್ಲಿ ಬಾಲಕಿಯೋರ್ವಳು ಮೃತಪಟ್ಟಿದ್ದರೆ, ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಗಲಕೋಟೆ ಹಾಗೂ ವಿಜಯಪುರಗಳಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಮಳೆಯಿಂದಾಗಿ 300ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಣ್ಣಿನ ಮಾಳಿಗೆ ಮನೆಗಳು ಸೋರಿ ದವಸಧಾನ್ಯ ಮತ್ತು ಬೆಲೆಬಾಳುವ ವಸ್ತುಗಳನ್ನು ರಕ್ಷಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ನೂರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದ್ದು, ಲಕ್ಷಾಂತರ ರು. ಬೆಳೆ ಹಾನಿಯಾಗಿದೆ. ಹಳ್ಳ-ಕೊಳ್ಳಗಳು, ನದಿಗಳು ಭೋರ್ಗರಿಯುತ್ತಿವೆ.
undefined
ಸಾಲಬಾಧೆ ತಾಳಲಾರದೆ ರೈತರಿಬ್ಬರು ಆತ್ಮಹತ್ಯೆ
ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಡೋಂಕಮಡಿನಲ್ಲಿ ಗೋಡೆ ಕುಸಿದ ಪರಿಣಾಮ ಮರೆಮ್ಮ ಹುಲಗಪ್ಪ ಬಿಜ್ಜೂರ(11) ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಜಕ್ಕೇರಾಳದಲ್ಲಿ ಗೋಡೆ ಬಿದ್ದು ರೇಣುಕಾ ಲೋಟಗೇರಿ(10) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನು ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ.