ರಾಜಕೀಯ ಬಿರುಸು ಬೆನ್ನಲ್ಲೇ ಕಾಂಗ್ರೆಸಿಗೆ ಸೇರ್ಪಡೆಯಾದ ಮುಖಂಡರು

Kannadaprabha News   | Asianet News
Published : Sep 28, 2020, 01:19 PM IST
ರಾಜಕೀಯ ಬಿರುಸು ಬೆನ್ನಲ್ಲೇ ಕಾಂಗ್ರೆಸಿಗೆ ಸೇರ್ಪಡೆಯಾದ ಮುಖಂಡರು

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇದೇ ಸಂದರ್ಭದಲ್ಲಿ ಪಕ್ಷಾಂತರ ಪರ್ವಗಳು ಕೂಡ ಜೋರಾಗಿದೆ. ಹಲವು ಮುಖಂಡರು ಕಾಂಗ್ರೆಸ್ ಸೇರಿದ್ದಾರೆ.

ಮೊಣಕಾಲ್ಮೂರು (ಸೆ.28): ನೂರಾರು ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಬಡವರು ದಲಿತರು ಹಿಂದುಳಿದ, ಅಲ್ಪಸಂಖ್ಯಾತರಿಗೆ  ಸಾಮಾಜಿಕ ನ್ಯಾಯ ಕಲ್ಪಿಸಿದೆ. ಪಕ್ಷದ ತತ್ವ ಸಿದ್ಧಾಂತ ಮೆಚ್ಚಿರುವ  ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಇದರಿಂದ ಕ್ಷೇತ್ರದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳುತ್ತಿದೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದರು. 

ತಾಲೂಕೊಮ ರಾಯಾಪುರ ಸಮೀಪದ ರಂಗ ಪರಿಸರದಲ್ಲಿ  ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ವಿವಿಧ ಪಕ್ಷದ ಮುಖಂಡರು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಕೈಗೊಂಡಿದ್ದ ಸಾಧನೆ ಜನತೆಗೆ ತಿಳಿಸಬೇಕು ಎಂದರು.

ಬಿಜೆಪಿ ನಿಲುವಿಗೆ ಜೈಕಾರ ಹಾಕಿದ ಕುಮಾರಸ್ವಾಮಿ : ಜೆಡಿಎಸ್ ನಿಲುವು ಮೀರಿದ ಶಾಸಕ ...

ಬಿಜೆಪಿ ಸರ್ಕಾರದ ಜನ ವಿರೋಧಿ ನೀರಿ ವಿರುದ್ಧ ಹೆಚ್ಚು ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.

ಮುಖಂಡರಾದ ಯೋಗೀಶ ಬಾಬು ಮಾತನಾಡಿ ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ಶಾಸಕರ ಧೋರಣೆಗೆ ಬೇಸತ್ತು ಬಿಜೆಪಿಯಲ್ಲಿನ ಅನೇಕ ಕಾರ್ಯಕರ್ತರು ಕಾಂಗ್ರೆಸ್  ಬೆಂಬಲಿಸುತ್ತಿದ್ದಾರೆ. 

ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗುತ್ತಿದೆ.  ಪಕ್ಷ ಭೂತ್ ಮಟ್ಟದಲ್ಲಿ ಸಂಘಟನೆಯಾಗಬೇಕು . ಕಾಂಗ್ರೆಸ್  ಬೆಂಬಲಿತರನ್ನು ಗೆಲ್ಲಿಸಬೇಕು ಎಂದರು.

PREV
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!