
ಮಂಗಳೂರು(ಜೂ.21): ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬಳು ಬಲಿಯಾಗಿದ್ದಾಳೆ. ಇಲ್ಲಿನ ಮುನಿಯಾಲು ಪದವಿ ಕಾಲೇಜಿನ ವಿದ್ಯಾರ್ಥಿನಿ ಶಕುಂತಲಾ (19) ಎಂಬಾಕೆ ಅಂತಿಮ ಪದವಿ ಪರೀಕ್ಷೆಗಳು ನಡೆಯದಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವರಂಗ ಗ್ರಾಮದ ಮಾತಿಬೆಟ್ಟು ನಿವಾಸಿಯಾದ ಆಕೆ ಪರೀಕ್ಷೆ ನಡೆಯದಿರುವುದನ್ನು ಮನಸ್ಸಿಗೆ ವಿಪರೀತವಾಗಿ ಹಚ್ಚಿಕೊಂಡಿದ್ದು, ಜೂನ್ 18ರಂದು ಬೆಳಗ್ಗೆ ತಮ್ಮ ತೋಟದಲ್ಲಿ ವಿಷ ಸೇವಿಸಿ ಅಸ್ವಸ್ಥಳಾಗಿದ್ದಳು.
ಹೆದ್ದಾರಿ ಬದಿ ಪ್ರಯಾಣಿಕರಿಗೆ ಉಚಿತ ಹಲಸಿನ ಹಣ್ಣು
ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚಿಕಿತ್ಸೆಗೆ ಸ್ಪಂದಿಸದಿದ್ದಾಗ ವೈದ್ಯರ ಸಲಹೆಯಂತೆ ಆಕೆಯನ್ನು ಶುಕ್ರವಾರ ಮನೆಗೆ ಕರೆತರಲಾಗಿತ್ತು. ಶನಿವಾರ ಮುಂಜಾನೆ ಆಕೆ ಕೊನೆಯುಸಿರೆಳೆದಿದ್ದಾಳೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]